Spread the love

ಪುನೀತ್ ರಾಜಕುಮಾರ್ ಅವರ ನಿಧನದ ನಂತರ , ಕರ್ನಾಟಕದಲ್ಲಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕನ್ನಡ ಅಭಿಮಾನಿಗಳು ಮತ್ತು ಪುನೀತ್ ರವರ ಅಭಿಮಾನಿಗಳು ಅವರ ಕಾರ್ಯ ಸಾಧನೆಯನ್ನು ತಿಳಿದು ನಾವು ಅವರ ಮಾರ್ಗದಲ್ಲಿ ನಡೆಯಬೇಕು ನಿರ್ಧರಿಸಿ ಇದಕ್ಕೆ ಸಾಕ್ಷಿಯಾಗಿ ಅನೇಕ ಚಿಕ್ಕ ಪುಟ್ಟ ಕಾರ್ಯಗಳನ್ನು ಆರಂಭಿಸಿದ್ದು ಈಗಾಗಲೇ ನಾವು ಕಂಡಿದ್ದೇವೆ. ಅಲ್ಲದೆ ಹೊರರಾಜ್ಯದ ತಮಿಳು ಆಂಧ್ರಪ್ರದೇಶದ ಚಿತ್ರ ನಟರು ಕೂಡ ಅಪ್ಪು ಅವರ ವ್ಯಕ್ತಿತ್ವ ಮತ್ತು ಅವರ ಕಾರ್ಯಸಾಧನೆಗಳಿಗೆ ಒಂದು ಮೆಚ್ಚುಗೆಯನ್ನು ನೀಡಿ ನಾವು ಕೂಡ ಅವರಂತಹ ಕಾರ್ಯಗಳಲ್ಲಿ ಪಾಲು ಪಡೆದುಕೊಳ್ಳುತ್ತೇವೆ ಎಂದು ಕೆಲವಿಡೆ ಘೋಷಿಸಿದ್ದಾರೆ. ಇದೀಗ ಬಹುಭಾಷ ನಟ ಪ್ರಕಾಶ್ ರೈ ರವರು ಕೂಡ ಇಂತಹ ಸಮಾಜಮುಖಿ ಸೇವಾ ಕಾರ್ಯಕ್ಕೆ ಕೈ ಹಾಕಿದ್ದಾರೆ.

ಅದೇನೆಂದರೆ ಕರ್ನಾಟಕ ರಾಜ್ಯದ 32 ಜಿಲ್ಲೆಗಳಿಗೂ ‘ಅಪ್ಪು ಎಕ್ಸ್ಪ್ರೆಸ್’ ಆಯಂಬುಲೆನ್ಸ್ ಸೇವೆ ಆರಂಭಿಸುವುದಾಗಿ ನಟ ಪ್ರಕಾಶ್ ರಾಜ್ ಇಂದು ಘೋಷಣೆ ಮಾಡಿದ್ದಾರೆ. ತಮ್ಮ “ಪ್ರಕಾಶ್ ರಾಜ್ ಫೌಂಡೇಷನ್” ವತಿಯಿಂದ ‘ಅಪ್ಪು ಎಕ್ಸ್ಪ್ರೆಸ್ ಆಯಂಬುಲೆನ್ಸ್’ ಸೇವೆಯನ್ನು ಆರಂಭಿಸಿದ ಅವರು ಈ ವೇಳೆ ಮಾತನಾಡಿ ‘ ನಾವು ಇಲ್ಲಿ ಸೇರಲು ಕಾರಣ ಅಪ್ಪು ಅಂದು ಆಯಂಬುಲೆನ್ಸ್ ಇದ್ದಿದ್ದರೆ ಅಪ್ಪು ಉಳಿದು ಬಿಡುತ್ತಿದ್ದರು ಎಂದು ಅನಿಸಿತು. ಅದಕ್ಕಾಗಿ ಈ ಅಪ್ಪು ಎಕ್ಸ್ಪ್ರೆಸ್ ಇದು ಕೇವಲ ಆರಂಭ ಮಾತ್ರ ಮುಂದಿನ ದಿನಗಳಲ್ಲಿ 32 ಆಯಂಬುಲೆನ್ಸ್ ಗಳನ್ನು ರಾಜ್ಯದ ಪ್ರತಿ ಜಿಲ್ಲೆಗಳಿಗೆ ನೀಡುತ್ತೇನೆ. ಕೇವಲ ನನಗೆ ಮಾತ್ರವಲ್ಲ, ಪ್ರತಿಯೊಬ್ಬರಲ್ಲೂ ಅಪ್ಪು ಅಗಲಿಕೆಯ ನೋವು ಕಾಡುತ್ತಿದೆ. ಅಪ್ಪು ಅಗಲಿಕೆ ರಾಜ್ಯದ ಜನರಿಗೆ ನೋವು ತಂದಿತ್ತು. ನಮ್ಮ ಸಮಾಜಕ್ಕೆ ಮತ್ತಷ್ಟು ಕೆಲಸ ಆಗಬೇಕಿತ್ತು. ಮತ್ತೊಮ್ಮೆ ಅಪ್ಪು ಹುಟ್ಟು ಬರಲು 40 ವರ್ಷ ಬೇಕು ಎಂದು ಪುನೀತ್ ರಾಜ್ಕುಮಾರ್ ಅವರನ್ನ ಸ್ಮರಿಸಿದರು.


Spread the love