ಪಾವಗಡ: ನಾಡಿನ ಪ್ರತಿಯೊಬ್ಬರು ಸ್ವಾತಂತ್ರ್ಯ ದಿನಾಚರಣೆಯನ್ನು ಹಬ್ಬದಂತೆ ಸಡಗರ ಸಂಭ್ರಮದಿಂದ ಆಚರಿಸ ಬೇಕು ಎಂದು ತಹಶಿಲ್ದಾರ ವರದರಾಜು ರವರು ತಿಳಿಸಿದರು.
ದೊಮ್ಮತಮರಿ ಗ್ರಾಮಪಂಚಾಯಿತಿನಲ್ಲಿ “ಹರ್ ಘರ್ ತಿರಂಗಾ” ಜಾಥಕ್ಕೆ ಚಾಲನೆ ನೀಡಿದ ಅವರು, ಅಗಸ್ಟ್ 15ರಂದು ಕೇವಲ ಸರ್ಕಾರಿ ಕಚೇರಿಗಳಲ್ಲಿ ಮಾತ್ರ ದೇಶಹಬ್ಬವನ್ನು ಆಚರಿಸುತ್ತೇವೆ. ಸ್ವತಂತ್ರ ಪಡೆದ 75ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಸಮಸ್ತ ನಾಗರೀಕರು ನಮ್ಮ ದೇಶದ ಧ್ವಜವನ್ನು ಮನೆಯ ಮೇಲೆ ಹಾರಿಸುವ ಮೂಲಕ ದೇಶಪ್ರೇಮ ವನ್ನು ಜಾಗೃತ ಗೊಳಿಸ ಬೇಕು ಎಂದರು.
ನಂತರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವರಾಜಯ್ಯ ಮಾತನಾಡಿ,
ಸ್ವತಂತ್ರ ಪಡೆಯಲು ಸಾವಿರಾರು ಗ್ರಾಮೀಣ ಭಾಗದ ತಮ್ಮ ದೈನದಿಂದ ಕಾರ್ಯಗಳನ್ನು ನಡುವೆ ಸ್ವಾತಂತ್ರ್ಯ ದಿನಾಚರಣೆ ಆಚರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಸ್ವತಂತ್ರಕ್ಕಾಗಿ ಹೋರಾಟ ನಡೆಸಿ ಪ್ರಾಣತ್ಯಾಗವನ್ನು ಮಾಡಿದವರ ಬಗ್ಗೆ ಮಕ್ಕಳಿಗೆ ತಿಳಿಸುವುದು ಹಾಗೂ ನೆನೆಯುವುದು ನಮ್ಮೆಲ್ಲರ ಆದ್ಯಕರ್ತವ್ಯ ಎಂದರು.
ಈ ವೇಳೆ ತಾಲೂಕು ಆಡಳಿತ ಸಿಬ್ಬಂದಿ ಹಾಗೂ ಪಂಚಾಯಿತಿ ಸಿಬ್ಬಂದಿ ಮತ್ತು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.