Spread the love

ಚಿತ್ರದುರ್ಗ : ಚಿತ್ರದುರ್ಗದ ಮುರಘ ಮಠದ ಶಿವಮೂರ್ತಿ ಶ್ರೀಗಳನ್ನು ನೆನ್ನೆ ತಡರಾತ್ರಿಯಲ್ಲಿ ಬಂಧಿಸಲಾಗಿದ್ದು. ಸದ್ಯ ಅವರನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು
ದೂರು ದಾಖಲಾಗಿ ಸುಮಾರು ಆರು ದಿನಗಳು ಕಳೆದರು ಕೂಡ ಅವರನ್ನು ಯಾವುದೇ ರೀತಿಯ ವಿಚಾರಣೆಗೆ ಪೋಲಿಸ್‌ ಇಲಾಖೆ ಒಡಪುಡಿಸತಿರುವುದನ್ನು ಖಂಡಿಸಿ ದೇಶದ ನಾನಾ ಭಾಗಗಳಲ್ಲಿ ಆಕ್ರೋಶ ಕೇಳಿ ಬಂದಿತ್ತು.

ಈ ನಡುವೆ ಮುರುಘಾ ಶರಣರು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಚಿತ್ರದುರ್ಗದ ಒಂದನೆ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ವಾದಿ-ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತ್ತು. ಸದ್ಯ ಅವರನ್ನು ನ್ಯಾಯಾಧೀಶರ ಮುಂದೆ ಕೂಡ ಹಾಜರು ಪಡಿಸಿ ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಅಂತ ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ. ನಿನ್ನಯೆ ರಾತ್ರಿ ಅವರನ್ನು ನ್ಯಾಯಾಧೀಶರ ಬಳಿಗೆ ಕರೆದುಕೊಂಡು ಹೋಗದ್ದು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೋಮಲ ಅವರು ಶ್ರೀಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ದಾರೆ. ಅಲ್ಲಿಂದ ನೇರ ಶ್ರೀಗಳನ್ನು ಚಿತ್ರದುರ್ಗದ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಈ ನಡುವೆ ಶ್ರೀಗಳ ವಿರುದ್ದ ಫೋಕ್ಸ್ ಕೇಸಿನ ಜೊತೆಗೆ ಅಟ್ರಾಸಿಟಿ, ಸುಮಟೋ ಕೇಸ್‌ ಕೂಡ ದಾಖಲಾಗಿದೆ. ಹೀಗಾಗಿ ಅವರನ್ನು ಬಂಧಿಸಬೇಕು ಅಂತ ಹಲವು ಸಂಘಟನೆಗಳು ಅಕ್ರೋಶ ವ್ಯಕ್ತಪಡಿಸಿದ್ದವು, ಇದಲ್ಲದೇ ಚಿತ್ರದುರ್ಗ ಪೋಲಿಸರ ಕಾರ್ಯವೈಕರಿ ವಿರುದ್ದ ಹಲವು ಪ್ರಗತಿಪರ ಸಂಘಟನೆಗಳು ಅಕ್ರೋಶ ವ್ಯಕ್ತಪಡಿಸಿದ್ದವು ಈಗ ಈ ವಿಚಾರಕ್ಕೆ ಒಂದು ತಾತ್ಕಾಲಿಕ ಅಂತ್ಯ ಸಿಕ್ಕಿದಂತಾಗಿದೆ .

ಪ್ರಕರಣದ ಹಿನ್ನಲೆ: ಅಪ್ರಾಪ್ತ ವಯಸ್ಕ ಬಾಲಕಿಯ ಇಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದು ಇದರ ವಿಚಾರ ದೂರ ಕೂಡ ದಾಖಲಾಗಿದ್ದು ಲಿಂಗಾಯತ ಮಠಾಧೀಶ ಶಿವಮೂರ್ತಿ ಮುರುಘಾ ಶರಣರು ವಿರುದ್ಧ ಕರ್ನಾಟಕ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ ಮುನ್ನೆಚ್ಚರಿಕಾ ಕ್ರಮವಾಗಿ ನೋಟಿಸ್ ನೀಡಲಾಗಿತ್ತು .

ಶಿವಮೂರ್ತಿ ಮುರುಘಾ ಶರಣರು ಕರ್ನಾಟಕದ ಚಿತ್ರದುರ್ಗದ ಪ್ರಮುಖ ಲಿಂಗಾಯತ ಮಠದ ಮುಖ್ಯ ಪೀಠಾಧಿಪತಿಯಾಗಿದ್ದಾರೆ. ಇಬ್ಬರು ಅಪ್ರಾಪ್ತರ ಪರವಾಗಿ ದೂರು ದಾಖಲಾದ ನಂತರ ಮೈಸೂರು ನಗರ ಪೊಲೀಸರು ಶಿವಮೂರ್ತಿ ಮುರುಘಾ ಶರಣರು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಠದಿಂದ ನಡೆಸಲ್ಪಡುವ ಶಾಲೆಯಲ್ಲಿ ಕಲಿಯುತ್ತಿರುವ 15 ಮತ್ತು 16 ವರ್ಷದ ಇಬ್ಬರು ಬಾಲಕಿಯರು ಮೂರೂವರೆ ವರ್ಷಗಳಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


Spread the love