Spread the love

ತುಮಕೂರು: ಶಿಕ್ಷಕರರು ಒಂದು ನವ ಸಮಾಜದ ನಿರ್ಮಾಣದ ಅಡಿಪಾಯಗಳು , ಅವರು ಹೇಳಿಕೊಟ್ಟ ಪಾಠಗಳು, ಶಿಸ್ತಿನ ನಡವಳಿಕೆಗಳೇ ಒಂದು ಮಗುನಿನ ಅಥವಾ ಒಬ್ಬ ವ್ಯಕ್ತಿಯ ಜೀವನದ ನಿರ್ಧಾರ ಪಡಿಸುತ್ತದೆ.

ಆದರೆ ಶಿಕ್ಷರೆ ದುಶ್ಚಟಗಳಿಗೆ ಬಾನಿಸರಾಗಿ, ಬೇಕಾ ಬಿಟ್ಟಿಯಾಗಿ ಶಾಲೆಯಲ್ಲಿ ನಡೆದು ಕೊಂಡರೆ ಪರಿಸ್ಥಿತಿ ಹೇಗಿರುತ್ತದೆ ಊಹಿಸಬಲ್ಲಿರಾ ಹೌದು ಇಲ್ಲಿ ಅಂತ ಒಂದು ಘಟನೆ ನಡೆದಿದೆ ನೋಡಿ ಶಾಲೆಯಲ್ಲಿ ಮದ್ಯ ಸೇವಿಸಿ ಮಕ್ಕಳಿಗೆ ಪಾಠ ಮಾಡುತ್ತಿದ್ದ ತಾಲ್ಲೂಕಿನ ಗಳಿಗೇನಹಳ್ಳಿ ಕ್ಲಸ್ಟರ್‌ ವ್ಯಾಪ್ತಿಯ ಚಿಕ್ಕಸಾರಂಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಗಂಗಲಕ್ಷ್ಮಮ್ಮ ಎಂಬುವರು ಬೆಳ್ಳಂಬೆಳಗ್ಗೆ ಮದ್ಯಪಾನ ಮಾಡಿಕೊಂಡು ಪಾಠ ಮಾಡುತ್ತಿದ್ದನ್ನು ಗಮನಿಸಿದ ಗ್ರಾಮಸ್ಥರ ರೆಡ್‌ ಹ್ಯಾಂಡ್‌ ಆಗಿ ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಶಾಲೆಯಲ್ಲಿ ಶಿಕ್ಷಕಿ ಗಂಗಲಕ್ಷ್ಮಮ್ಮ ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಕಳೆದ 5 ವರ್ಷದಿಂದ ಕುಡಿಯುವ ಚಟಕ್ಕೆ ಒಳಗಾಗಿದ್ದರು.ಹೀಗಾಗಿ ಬೆಳ್ಳಂಬೆಳಗ್ಗೆ ಶಿಕ್ಷಕಿ ಕುಡಿದುಕೊಂಡು ಬಂದು ವಿದ್ಯಾರ್ಥಿಗಳಿಗೆ ಸುಖಾಸುಮ್ಮನೆ ಹೊಡೆಯುವುದು, ಬೇರೆವರ ಜೊತೆ ಜಗಳವಾಡುತ್ತಿರುವುದು ಕಂಡುಬಂದಿದ್ದು.
ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುವುದು ಎಂದು ತಿಳಿದು . ಇದನ್ನು ಮನಗಂಡ ಪೋಷಕರು ಶಿಕ್ಷಕಿ ಗಂಗಲಕ್ಷ್ಮಮ್ಮಗೆ ತಪ್ಪು ತಿದ್ದಿಕೊಳ್ಳುವಂತೆ ತಾಕೀತು ಮಾಡಿದ್ದರು. ಆದರೆ ಗಂಗಲಕ್ಷ್ಮಮ್ಮ ತನ್ನ ಚಾಳಿ ಬದಲಿಸಲಿಲ್ಲ. ಇದರಿಂದ ಪೋಷಕರು ಶಾಲೆಗೆ ಬೀಗ ಹಾಕಿ ಶಿಕ್ಷಕಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಮೇಲಾಧಿಕಾರಿಗಳಿಗೆ ಬುಧವಾರದಂದು ದೂರು ಸಲ್ಲಿಸಿದರು. ದೂರು ಬಂದ ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಾನಾಯ್ಕ ಶಾಲೆಗೆ ಭೇಟಿನೀಡಿ ಪರಿಶೀಲಿಸಿದ್ದಾರೆ. ಗ್ರಾಮಸ್ಥರು, ಜನರು ಈ ಸಮಯದಲ್ಲಿ ಶಿಕ್ಷಕಿಯರ ವಿರುದ್ಧ ದೂರಿನ ಸುರಿಮಳೆಗೈದಿದ್ದು, ಶಿಕ್ಷಕಿ ಗಂಗಲಕ್ಷ್ಮಮ್ಮ ಅವರ ಟೇಬಲ್ ತೆರೆದು ಪರಿಶೀಲಿಸಿದಾಗ ಅದರಲ್ಲಿ ಮದ್ಯದ ಬಾಟಲಿ ಪತ್ತೆಯಾಗಿದೆ. ಇದನ್ನು ಪೊಲೀಸರಿಗೆ ನೀಡಿದ್ದು, ಪರಿಶೀಲಿಸಿ ಕ್ರಮ ಜರುಗಿಸಬೇಕು, ಅಗತ್ಯ ವರದಿ ನೀಡುವಂತೆ ಕೋರಲಾಗಿದೆ ಎಂದು ಡಿಡಿಪಿಐ ಸಿ.ನಂಜಯ್ಯ ತಿಳಿಸಿದರು.
ಶಾಲೆಗೆ ಭೇಟಿನೀಡಿದ ಬಿಇಒ ಅಲ್ಲಿನ ವಸ್ತುಸ್ಥಿತಿ ಮಾಹಿತಿ ಪಡೆದುಕೊಂಡಿದ್ದಾರೆ.ಶಾಲೆಯ ಇಬ್ಬರು ಶಿಕ್ಷಕಿಯರ ನಡುವೆ ಹೊಂದಾಣಿಕೆ ಇಲ್ಲದೆ ಪದೇ ಪದೇ ಜಗಳ ಮಾಡಿಕೊಳ್ಳುತ್ತಿದ್ದರು.ಮತ್ತು ಶಿಕ್ಷಕಿ ಶಾಲೆಯಲ್ಲೇ ಮದ್ಯ ಸೇವಿಸುತ್ತಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ವಿಚಾರಣೆ ಕಾಯ್ದಿರಿಸಿ ಗಂಗಲಕ್ಷ್ಮಮ್ಮ ಮತ್ತು ನಾಗರತ್ನಮ್ಮ ಎಂಬ ಇಬ್ಬರು ಶಿಕ್ಷಕಿಯರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.


Spread the love