Spread the love

ಬೆಂಗಳೂರು:
ಬೆಂಗಳೂರು ವಿಶ್ವವಿದ್ಯಾಲಯ ಸದಾ ಹೋರಾಟಗಳ ತಾಣ ಎಂದೇ ಹೆಸರಾದ ಕರ್ನಾಟಕದ ಏಕೈಕ ವಿ.ವಿ.
ಇಲ್ಲಿ ಗಣೇಶ ದೇವಸ್ಥಾನ ಅನಧಿಕೃತ ನಿರ್ಮಾಣಕ್ಕೆ ವಿ.ವಿ ಯ ನೌಕರರ ಸಂಘ ಹಾಗೂ ಸ್ನಾತಕ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಈ ಹೋರಾಟವನ್ನು ಉದ್ದೇಶಿಸಿ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾದ ಡಾ.ಚಿತ್ತಯ್ಯ ಪೂಜರ್ ಅವರು ಮಾತನಾಡುತ್ತ ವಿದ್ಯಾರ್ಥಿಗಳಿಗೆ, ನೌಕರರಿಗೆ ಸರಿಯಾದ ಕೊಠಡಿಗಳಿಲ್ಲ, ಮಲ ಮೂತ್ರ ವಿಸರ್ಜಿಸಲು ಶೌಚಲಯಗಳಿಲ್ಲ ಸರಿಯಾದ ಹಾಸ್ಟೆಲ್ ಸೌಲಭ್ಯಗಳು ಇಲ್ಲ ಇಂತಹ ಮೂಲಭೂತ ಸೌಕರ್ಯಗಳ ಒದಗಿಸದೆ ವಿ.ವಿ ಗೆ ಸಂಬಂಧಪಡದ ಅನಧಿಕೃತ ವ್ಯಕ್ಯಿಗಳು ವಿ.ವಿ ಒಳಗೆ ಕಟ್ಟಡಗಳು ಕಟ್ಟುತ್ತಾರೆ ಎಂದತಮರೇ ವಿ.ವಿ ಘನತೆ ಏನಾಗಬೇಕು.
ಇವತ್ತು ಒಂದು ಕೋಮಿನವರು ಗಣೇಶ ಗುಡಿ ಕಟ್ಟುತ್ತಾರೆ ಅದಕ್ಕೆ ನೀವು ಅನುಮತಿಯನ್ನು ನೀಎಉತ್ತೀರ ನಾಳೆ ಚರ್ಚು, ಮಸೀದಿ, ಬಸದಿಗಳು ಕಟ್ಟಲು ಮುಂದಾಗುತ್ತಾರೆ ಅದಕ್ಕೆಲ್ಲಾ ನೀವು ಅನುಮತಿಯನ್ನು ನೀಡುತ್ತೀರ ಎಂದು ವಿ.ವಿ ಯ ಮೇಲಾಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
ಯಾವುದೇ ಕಾರಣಕ್ಕು ಇದು ಸಾರ್ವಜನಿಕ ಶಿಕ್ಷಣ ಕ್ಷೇತ್ರ ಇಲ್ಲಿ ಒಂದು ಧರ್ಮ ಜಾತಿ ಜನಾಂಗಕ್ಕೆ ಸೀಮಿತವಲ್ಲ.
ಇದು ಸರ್ವಜನಾಂಗದ ಶಾಂತಿಯ ತೋಟ ಇಲ್ಲಿ ಕೆಲವು ಕೋಮು ಕ್ತಿಮಿಗಳು ತಮ್ಮ ರಾಜಕೀಯ ಬೇಳೆ ಬೆಯ್ಯಿಸುತ್ತ ವಿ.ವಿ ಸಾಮರಸ್ಯವನ್ನು ಆಳು ಮಾಡೋದು ಬೇಡ ಎಂದು ಖಂಡಿಸಿದರು.
ಈ ಹೋರಾಟದಲ್ಲಿ ಪ್ರಸಾರಾಂಗದ ನಿದರ್ಶಕರಾದ ಸಿ.ಬಿ ಹುನ್ನು ಸಿದ್ಧಾರ್ಥ, ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ನಾಗರತ್ನಮ್ಮ, ಶಿಕ್ಷಕರ ಸಂಘದ ಅಧ್ಯಕ್ಷರಾದ ಡಾ.ಮುರುಳಿ, ವಿದ್ಯಾರ್ಥಿಗಳು ಸಂಶೋಧಕರು ಪಾಲ್ಗೊಂಡಿದ್ದರು.

ವರದಿ : ಕರಿಯ ನಿಷಾದ


Spread the love