ಪಾವಗಡ: ಇಂದು ಪಾವಗಡ ಪಟ್ಟಣದ ನಿರೀಕ್ಷಣ ಮಂದಿರದ ಆವರಣದಲ್ಲಿ . ಕರ್ನಾಟಕ ಲೋಕಾಯುಕ್ತ ತುಮಕೂರು ಜಿಲ್ಲೆ ಇವರ ಆಶ್ರಯದಲ್ಲಿ ಪೊಲೀಸ್ ಅಧಿಕ್ಷಕರು ಕರ್ನಾಟಕ ಲೋಕಾಯುಕ್ತ ತುಮಕೂರು ಇವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಕುಂದು ಕೊರತೆ ಸಭೆಯನ್ನು ಏರ್ಪಡಿಸಿದ್ದು ಸದರಿ ಸಭೆಯಲ್ಲಿ ಸಾರ್ವಜನಿಕರ ಹವಾಲುಗಳನ್ನು ಸ್ವೀಕರಿಸಲಾಗಿದ್ದು .
ಈ ವೇಳೆ ಸಭೆಯ ರೂವಾರಿಗಳಾಗಿದ್ದ ತುಮಕೂರು ಲೋಕಾಯುಕ್ತ ಪೊಲೀಸ್ ಅಧ್ಯಕ್ಷರಾದ ರಾಮರೆಡ್ಡಿ. ಕೆ ರವರು ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ. ” ಒಟ್ಟಾರೆ ಇಂದಿನ ಸಭೆಯಲ್ಲಿ 17 ಅರ್ಜಿಗಳನ್ನು ನಾವು ಸ್ವೀಕರಿಸಿದ್ದು , ಅವುಗಳಲ್ಲಿ 4 ಪಟ್ಟಣ ಪಂಚಾಯಿತಿಗೆ ಸೇರಿದ್ದು. ಓಕೆ 13 ಅರ್ಜಿಗಳು ಕಂದಾಯ ಇಲಾಖೆ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಂಬಂಧಿಸಿದ ಪಟ್ಟಿರುತ್ತವೆ. ಮುಖ್ಯವಾದ ಅರ್ಜಿ 112 ಸಾಧಾರಣ ಅರ್ಜಿಗಳು ಅಧಿಕಾರಿಗಳು ಗಮನಕ್ಕೆ ತಂದು ನೇರವಾಗಿ ಪರಿಶೀಲನೆ ಮತ್ತು ಪರಿಹಾರದ ವ್ಯವಸ್ಥೆ ಮಾಡಲಾಗಿದೆ. 112 ಅರ್ಜಿಯನ್ನು ಮುಖ್ಯ ಕಚೇರಿಗೆ ಕಳುಹಿಸಿ ಅಲ್ಲಿಂದ ಸ್ಕೂಟನಿ ಆದ ನಂತರ ಮುಖ್ಯ ಕಚೇರಿ ಅಧಿಕಾರಿಗಳ ನಿರ್ದೇಶನದ ಮೇರೆಗೆ ಪರಿಶೀಲನೆ ಕ್ರಮ ತೆಗೆದುಕೊಳ್ಳುತ್ತೇವೆ ಹಾಗೂ ಮುಖ್ಯವಾಗಿ ನಾವು ಸಾರ್ವಜನಿಕರಲ್ಲಿ ಹೇಳುವುದೇನೆಂದರೆ ಯಾವುದೇ ಅಧಿಕಾರಿ ಯಾವುದೇ ಕೆಲಸಗಳನ್ನು ಮಾಡಲಿಕ್ಕೆ ವಿಳಂಬ ಮಾಡಿದ್ದಲ್ಲಿ, ಸಾರ್ವಜನಿಕರನ್ನು ಕಚೇರಿಗಳ ಸುತ್ತು ಅಳೆದಾಡಿಸಿಕೊಂಡಲ್ಲಿ , ಕೆಲಸ ಮಾಡಿಕೊಡಲು ಹಣದ ಆಮಿಷ ಹೊಡಿದ್ದಲ್ಲಿ ಇಂತಹ ವಿಚಾರಗಳು ಕಂಡು ಬಂದ ಕೂಡಲೇ ತಾವುಗಳು ನೇರವಾಗಿ ಲೋಕಾಯುಕ್ತ ಕಚೇರಿಗೆ ಸಂಪರ್ಕಿಸಬೇಕು . ಇಲ್ಲವಾದಲ್ಲಿ ನಾವು ಪ್ರತಿ ತಿಂಗಳು ನಡೆಸಿಕೊಡುವ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ತಾವು ಹಾಜರಾಗಿ ನಮಗೆ ಅಂತಹ ವಿಚಾರಗಳನ್ನು ತಿಳಿಯಪಡಿಸಿದರೆ ನಾವು ಆ ಬಗ್ಗೆ ಯಾವುದೇ ಮುಚ್ಚು ಮರೆ ಇಲ್ಲದೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ನ್ಯಾಯಯುತವಾಗಿ ಕೆಲಸ ಮಾಡಿ ಕೊಡುವಲ್ಲಿ ಸಹಕರಿಸುತ್ತೇವೆ ಎಂದು ತಿಳಿಸಿದರು. ಈ ವೇಳೆ ಸಭೆಯಲ್ಲಿ ಲೋಕಾಯುಕ್ತ ಅಧಿಕಾರಿಯದ ರಾಣಿ ಅವರು ಸೇರಿದಂತೆ ರೈತ ಮುಖಂಡ ನಾಗೇಶನ್ ರೆಡ್ಡಿ , ಮಾಜಿ ಪುರಸಭೆ ಸದಸ್ಯರಾದ ವೆಂಕಟೇಶ್ ಹಾಗೂ ಮನು ಅರವರು ಉಪಸ್ಥಿತರಿದ್ದರು.
ವರದಿ : ಅಜಿತ್ ಕುಮಾರ್ ಬೆಳ್ಳಿಬಟ್ಲು ಓ