Spread the love

ತುಮಕೂರು: ಇತ್ತೀಚಿಗೆ ಜಿಲ್ಲೆಯಲ್ಲಿ ಒಂದಕ್ಕಿಂತ ಇನ್ನೊಂದು ಮನಕಲಕುವ ಘಟನೆಗಳು ನಡೆಯುತ್ತಿರುವುದು ನಿಜವಾಗಿಯೂ ಇದು ಕೆಲ ಕ್ರೂರಿ ನೌಕರ ನಿಜಸ್ವರೂಪವನ್ನು ಹೊರ ಹಾಕುತ್ತಿರುವುದು ಕಂಡು ಬರುತ್ತಿದೆ. ನೆನ್ನೆ ಮಗುವಿನ ಮೃತದೇಹ ಒಂದನ್ನು ಸಾಗಿಸಲು ಹಣವಿಲ್ಲದೆ ಬಾಣಂತಿ ಮತ್ತು ಪೋಷಕರು ಕಣ್ಣೀರಿಟ್ಟ ಅಮಾನವೀಯ ಘಟನೆ ತುಮಕೂರು ಬಸ್ ನಿಲ್ದಾಣದಲ್ಲಿ ನಡೆದಿದೆ.

ನಾಲ್ಕು ದಿನದ ಹಿಂದೆ ದಾವಣಗೆರೆ ಮೂಲದ ಗೌರಮ್ಮ ಎನ್ನುವರು ತುಮಕೂರು ಜಿಲ್ಲಾಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಇವತ್ತು ಮುಂಜಾನೆ 4 ಗಂಟೆ ಸುಮಾರಿಗೆ ಮಗು ಅಸು ನೀಗಿದೆ ಕುಟುಂಬಸ್ಥರಿಗೆ ಮಗುವಿನ ಸಾವು ಶೋಕ ಸಾಗರದಲ್ಲಿ ಮುಳಗಿಸಿತ್ತು.

ಇದೆ ಸಂದರ್ಭದಲ್ಲಿ ಮೃತದೇಹ ತೆಗೆದುಕೊಂಡು ಹೋಗುವಂತೆ ವೈದ್ಯರು ಹೇಳಿದ್ದು ಯಾವುದೇ ಸೌಕರ್ಯಗಳಿಲ್ಲದ ಕುಟುಂಬ ಕಂಗಲಾಗಿ ಆಂಬುಲೆನ್ಸ್ ನ ಮೊರೆಹೋಗಿದ್ದಾರೆ ಆದರೆ ಕೇವಲ 40 ಕಿಲೋಮೀಟರ್ ಮಾತ್ರ ಆಂಬುಲೆನ್ಸ್ ನಲ್ಲಿ ಸಾಗಿಸುವುದಾಗಿ 108 ಆಂಬುಲೆನ್ಸ್ ಸಿಬ್ಬಂದಿ ತಿಳಿಸಿದ್ದಾರೆ.

ಕೊನೆಗೆ ದಿಕ್ಕು ತೋಚದೇ ಕಳೆದ ನಾಲ್ಕು ದಿನಗಳಿಂದಲೂ ತಮ್ಮಲ್ಲಿನ ಹಣವನ್ನೆಲ್ಲಾ ಖರ್ಚು ಮಾಡಿಕೊಂಡಿದ್ದು ದಾವಣಗೆರೆಗೆ ಹೋಗಲು ತಮ್ಮಲ್ಲಿ ಯಥೇಚ್ಛವಾದ ಹಣವಿಲ್ಲದೆ ಪೋಷಕರು ಮಗುವಿನ ದೇಹವನ್ನು ಸ್ವಗ್ರಾಮಕ್ಕೆ ತೆರಳಿಸಲು ಬಸ್ ಮಾರ್ಗವನ್ನು ಹಾಯ್ಕೆ ಮಾಡಿಕೊಂಡು. ತುಮಕೂರಿನ KSRTC ಬಸ್ ನಿಲ್ದಾಣಕ್ಕೆ ಬಂದಿದ್ದು, ಸರ್ಕಾರಿ ಬಸ್ ನಲ್ಲಿ ಮೃತದೇಹ ಸಾಗಿಸಲು ಸಿಬ್ಬಂದಿ ಒಪ್ಪಿರಲಿಲ್ಲದರಿಂದ ಕಂಗಾಲಾದ ಕುಟುಂಬದವರು ಮೃತದೇಹ ಇಟ್ಟುಕೊಂಡು ಬಸ್ ನಿಲ್ದಾಣದಲ್ಲಿ ಕಣ್ಣೀರಿಟ್ಟಿದ್ದಾರೆ. ಕೊನೆಗೆ ಈ ಮಾಹಿತಿ ತಿಳಿದ ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ. ವೀಣಾ ಅವರು ವಾಹನ ವ್ಯವಸ್ಥೆ ಮಾಡಿ ದಾವಣಗೆರೆಗೆ ಕಳಿಸಿದ್ದು ತಮ್ಮಲ್ಲಿನ ಮಾನವೀಯತೆ ಮೆರೆದಿದ್ದಾರೆ ಅಲ್ಲದೆ ಈ ಘಟನೆಗೆ ಸಾಕ್ಷಿಯಾದ ಅಧಿಕಾರಿ ವರ್ಗವನ್ನು ಶಿಕ್ಷಿಸುವಂತೆ ಕೂಡ ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love