Spread the love

ತುಮಕೂರು (ಪಾವಗಡ) : ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ರಾಪ್ಟೆ ಪಂಚಾಯಿತಿ ರಾಪ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು. ಆದಿ ಕರ್ನಾಟಕ ಮತ್ತು ರೆಡ್ಡಿ ಸಮುದಾಯಗಳ ನಡುವಿನ ಈ ವಿವಾದ ಕೇವಲ ಒಂದು ಕಾಲುವೆ ನಿರ್ಮಾಣದ ವಿಚಾರವಾಗಿದೆ ಎಂದು ತಿಳಿದು ಬಂದಿದ್ದು. ಗ್ರಾಮದ ನಾಗರಾಜು ಮತ್ತು ಮಲ್ಲಿಕಾರ್ಜುನ್ ಎಂಬ ವ್ಯಕ್ತಿಗಳು NREG ಅನುದಾನದಲ್ಲಿ ನೀರು ಹರಿದು ಹೋಗುವ ಮುಖ್ಯ ಕಾಲುವೆಯ ನಿರ್ಮಾಣದ ಕಾಮಗಾರಿಯಲ್ಲಿ ತೊಡಗಿದ್ದಾಗ ಅದೇ ಗ್ರಾಮದ ರವೀಂದ್ರ ರೆಡ್ಡಿ , ಹನುಮಂತ ರೆಡ್ಡಿ , ಪೋತ ರೆಡ್ಡಿ, ಮತ್ತು ಅವರ ಪತ್ನಿಗಳಾದ ಶೈಲಜಾ , ಚಿದಂಬರ ಸುಜಾತ ಇವರುಗಳು ಮತ್ತು ಇವರ ಸಂಬಂಧಿಕರು ಸೇರಿ ಕಾಮಗಾರಿಯಲ್ಲಿ ತೊಡಗಿದ್ದ ವ್ಯಕ್ತಿಗಳನ್ನು ” ಜಾತಿ ಸಂಕೇತವಾಗಿ ಗುರುತಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾದಿಗ , ಹೊಲೆಯ ಎಂಬ ಕೀಲುಮಟ್ಟದ ಭಾಷೆಯಿಂದ ” ತೇವಳಿ ಅವರ ಮೇಲೆ ದೈಹಿಕ ಹಲ್ಲೆಯನ್ನು ಕೂಡ ನಡೆಸಿದ್ದಾರೆ ಎಂದು ಹೇಳಲಾಗಿದೆ . ಈ ವಿಚಾರಕ್ಕೆ ಸಂಬಂಧಪಟ್ಟಂತೆ ದಲಿತ ಸಂಘಟನೆಯ ಮುಖಂಡರು ಘಟನಾ ಸ್ಥಳಕ್ಕೆ ತೆರಳಿ ಅಲ್ಲಿನ ವಾತಾವರಣವನ್ನು ಕಂಡು ಕೂಡಲೇ ಅಧಿಕಾರಿಗಳಾದ ಇಓ ಶಿವರಾಜಯ್ಯ , ಪಿಡಿಒ ಹನುಮಂತರಾಯಪ್ಪ ಇವರಿಗೆ ವಿಚಾರವನ್ನು ತಿಳಿಸಿದ್ದಾರೆ ಕೂಡಲೇ ಅಲ್ಲಿಗೆ ಆಗಮಿಸಿದ ಅಧಿಕಾರಿ ವರ್ಗ ಅಲ್ಲಿನ ಗೊಂದಲವನ್ನು ನಿಯಂತ್ರಿಸಲಾಗದೆ . ಆರಕ್ಷಕ ಸಿಬ್ಬಂದಿಗಳಿಗೆ ವಿಷಯವನ್ನು ತಿಳಿಯ ಪಡಿಸಿದ್ದು ಅವರು ಕೂಡ ಸ್ಥಳಕ್ಕೆ ಆಗಮಿಸಿದ ನಂತರ ಸಿಪಿಐ ಕಾಂತರೆಡ್ಡಿ ಅವರ ನೇತೃತ್ವದ ಇಬ್ಬರೂ ಮಹಿಳಾ ಪೊಲೀಸ್ ಪೆದಗಳ ಗುಂಪು ಘರ್ಷಣೆಯನ್ನು ನಿಯಂತ್ರಿಸಲು ಹೋಗಿದ್ದು ಉದ್ದೇಶ ಪೂರ್ವಕವಾಗಿ ಗಲಾಟೆ ಮಾಡುತ್ತಿದ್ದ ಶೈಲಜಾ , ಚಿದಂಬರ ಸುಜಾತ ಮತ್ತು ಸಂಬಂಧಿಕ ಸೇರಿಕೊಂಡು ಕೆಲವು ಹೆಂಗಸರು ಗುಂಪು ಸ್ಥಳದಲ್ಲಿ ಇದ್ದ ಪೊಲೀಸ್ ಅಧಿಕಾರಿಗಳ ಮೇಲೆಯೇ ದೈಹಿಕವಾಗಿ ದೌರ್ಜನ್ಯ ಮಾಡಿದ ಕಾರಣ ಸಿಪಿಐ ಕಾಂತರೆಡ್ಡಿ ಅವರ ನಾಮಫಲಕ ( name plate, badge ) ಕಿತ್ತು ಬಂದಿದ್ದು ಸಮವಸ್ತ್ರವನ್ನು ಹರಿದು ಹಾಕುವ ಪ್ರಯತ್ನ ನಡೆದಿದೆ . ಅಲ್ಲದೆ ಮಹಿಳಾ ಪೊಲೀಸ್ ಪೇದೆಗಳ ಮುಂಗೈ ಮತ್ತು ಬೆರಳುಗಳು ತೀವ್ರ ಒತ್ತಡಕ್ಕೆ ಸಿಲುಕಿದ ಕಾರಣ ರಕ್ತ ಹೆಪ್ಪುಗಟ್ಟಿ ಕೆಂಪಾಗಿ ತರಿಸಿಕೊಂಡ ರೀತಿ ಗಾಯಾಗಳು ಉಂಟಾಗಿದ್ದು ಇದರ ನಡುವೆಯೇ ಕೊನೆಗೆ ಗಲಾಟೆ – ಘರ್ಷಣೆಗಳನ್ನು ನಿಯಂತ್ರಿಸಿ ದಲಿತ ಸಂಘಟನೆಗಳ ಮುಖಂಡರೊಂದಿಗೆ ಚರ್ಚೆ ನಡೆಸಿ ಕಾಮಗಾರಿಗೆ ಶಾಶ್ವತ ಪರಿಹಾರ ನೀಡಿದ್ದಾರೆ.

ಇವೇಳೆ ಸ್ಥಳದಲ್ಲಿ ಮಾದಿಗ ದಂಡೋರ ಕಾರ್ಯ ಅಧ್ಯಕ್ಷರಾದ ನರಸಿಂಹಪ್ಪ ರಾಪ್ಟೆ , ಮಹಿಳಾ ಅಧ್ಯಕ್ಷರಾದ ಲಕ್ಷ್ಮಿದೇವಮ್ಮ, ತುಮಕೂರು ಜಿಲ್ಲಾಧ್ಯಕ್ಷರಾದ ವಿಜಯ ಬಸವರಾಜು, ಜಿಲ್ಲಾ ಕಾರ್ಯದರ್ಶಿಯಾದ ರವೀಂದ್ರಮ್ಮ,ಮತ್ತು
ಮಾದಿಗ ದಂಡೋರ ತಾಲೂಕ ಅಧ್ಯಕ್ಷರಾದ ಕಡಮಲ ಕುಂಟೆ ಹನುಮಂತ ರಾಯಪ್ಪ,  ಎಚ್ಚ ಆರ್ ಎಫ್ ಡಿ ಎಲ್ ತಾಲೂಕ್ ಸಂಚಾಲಕರಾದ ನರಸಿಂಹಪ್ಪ ಕಡಪಲ ಕೆರೆ,  HRFDL ಜಿಲ್ಲಾ ಸದಸ್ಯರು ಮದ್ಲೆಟಪ್ಪ ದೊಡ್ಡಬೆಟ್ಟ , ಡಿಎಸ್ಎಸ್ ತಾಲೂಕು ಸಂಚಾಲಕರಾದ ಮೀನುಕುಂಟನಹಳ್ಳಿ  ನರಸಿಂಹಪ್ಪ, ವೈ ಎನ್ ಹೊಸ ಕೋಟಿ ಹೋಬಳಿಯ ಸಂಚಾಲಕರಾದ ರವಿ ಇಂದ್ರಬೆಟ್ಟ,   ಸಂಘಟನಾ ಸಂಚಾಲಕರಾದ ಮಾರಪ್ಪ D A,
ಮತ್ತು ನಾಗಲಮಡಿಕೆಯ ಹೋಬಳಿ ಸಂಚಾಲಕರಾದ ನಾಗರಾಜು,  ಇವರೆಲ್ಲರೂ ಹಾಜರಿದ್ದರು.

ವರದಿ : ಅಜಿತ್ ಕುಮಾರ್ ಬೆಳ್ಳಿಬಟ್ಲು ಓ


Spread the love