Spread the love


ಪಾವಗಡ : ಅಧಿಕಾರಿ ಗಳು ಉತ್ತಮ ಕಾರ್ಯನಿರ್ವಸಿದರೆ ಮಾತ್ರ ತಾಲ್ಲೂಕಿನ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಸಚಿವರು ಹಾಗೂ ಶಾಸಕ ವೆಂಕಟರಮಣಪ್ಪ ಹೇಳಿದರು.
ತಾಲ್ಲೂಕಿನ ದೊಮ್ಮತಮರಿ ಗ್ರಾಪಂ ವ್ಯಾಪ್ತಿ ಗುಮ್ಮಘಟ್ಟ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಯಕಡೆ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅತಿವೃಷ್ಟಿಯಿಂದಾಗಿ ಬೆಳೆಹಾನಿ, ಮನೆಕುಸಿತ ಸೇರಿದಂತೆ ಹೀಗೆ ಹತ್ತಾರು ಸಮಸ್ಯೆಗಳು ತಾಲ್ಲೂಕಿನಾದ್ಯಂತ ಉಲ್ಬಣಿಸಿವೆ. ಜಿಲ್ಲಾಧಿಕಾರಿಗಳು ಸೂಕ್ತ ಪರಿಹಾರ ನೀಡ ಬೇಕು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು.
ಇನ್ನೂ ಜನೆತೆ ಮನೆ ಮಂಜೂರಾದರು ಬಿಲ್ ಗಳು ಪಾವತಿಯಾಗದೇ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಈ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸ ಬೇಕು ಎಂದರು.
ತಾಲ್ಲೂಕಿನಾದ್ಯಂತ 50ಕೋಟಿಗೂ ಅಧಿಕ ರಸ್ತೆ ಕಾಮಗಾರಿಗಳು ಕೈಗೆತ್ತಿಕೊಳ್ಳಾಗುತ್ತದೆ ಎಂದರು.
ಜನತೆಯ ಸರ್ವತೋಮುಖ ಅಭಿವೃದ್ಧಿಯೇ ನನ್ನ ಗುರಿ ಎಂದರು.
ನಂತರ ಜಿಲ್ಲಾಧಿಕಾರಿಗಳಾದ ಡಾ.ವೈ.ಎಸ್.ಪಾಟೀಲ್ ಮಾತಾಡಿ,ಸ್ಥಳೀಯವಾಗಿ 18 ಮನೆಗಳಿಗೆ ವಿದ್ಯುತ್ ಸಂಪರ್ಕ ವಿಲ್ಲ ಎಂಬ ಮಾಹಿತಿ ನೀಡಿದ ತಕ್ಷಣವೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದು ಇನ್ನೆರಡು ಮೂರು ವಿದ್ಯುತ್ ಸಂಪರ್ಕ ನೀಡಲಾಗುತ್ತದೆ ಎಂದರು.
ಪೈಕಿಪಹಣಿಗಳ ಪ್ರಕರಣಗಳನ್ನು ಎರಡು ಲಕ್ಷದಿಂದ ಇತ್ಯರ್ಥಗೊಳಿಸಲಾಗಿದೆ. ಇನ್ನೂ ಎರಡು ನೂರು ಪ್ರಕರಣಗಳು ಬಾಕಿಉಳಿದಿವೆ.ತಾಲೂಕಿನ ಲ್ಲಿ ಯಾವುದೇ ಪೈಕಿ ಪಾಣಿಗಳು ಇಲ್ಲ.
ಹಲವು ಕಡೆ ಸ್ಮಶಾನ ಭೂಮಿಯನ್ನು ಒದಗಿಸಿದ್ದೇವೆ.ಕೆಲವುಕಡೆ ಖಾಸಗಿ ಭೂಮಿಯನ್ನು ಖರೀದಿ ಮಾಡಿ ನೀಡಲಾಗುವುದು ಎಂದು ತಿಳಿಸಿದರು.
ಸ್ವಚ್ಚತೆಯ ದೃಷ್ಟಿಯಿಂದಾಗಿ 33ಗ್ರಾಪಂ ಗಳಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡಲಾಗಿದೆ. ಒಂದು ಪಂಚಾಯತಿ ಯಲ್ಲಿ ಮಾತ್ರ ಜಾಗದ ಸಮಸ್ಯೆ ಇದ್ದು‌ಅದನ್ನು ಸಹ ಶೀಘ್ರದಲ್ಲೇ ಇತ್ಯರ್ಥಗೊಳಿಸಲಾಗುತ್ತದೆ ಎಂದರು.
ನಂತರ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವಿದ್ಯಾಕುಮಾರಿ ಅವರು ಮಾತನಾಡಿ,
ಗ್ರಾಮೀಣ ಭಾಗದ ಮೂಲಭೂತ ಸೌಲಭ್ಯಗಳಿಗೆ ನಮ್ಮ ಮೊದಲ ಆಸ್ತೆಯಾಗಿದ್ದು, ಮನರೇಗಾ ಯೋಜನೆಯ ಮೂಲಕ ಶಾಲೆಗಳಿಗೆ ಕಾಂಪೌಂಡ್, ಶೌಚಾಲಯ, ಅಂಗನವಾಡಿ ಕಟ್ಟಡ, ಚರಂಡಿ ಕಾಮಗಾರಿಗಳನ್ನು ಮಾಡಲಾಗುತ್ತಿದ್ದು,ಮನರೇಗಾ ಯೋಜನೆಯಲ್ಲಿ ಬರುವ ಸೌಲಭ್ಯಗಳನ್ನು ಗ್ರಾಮೀಣಾ ಭಾಗದ ಜನತೆ ಸದುಪಯೋಗ ಪಡಿಸಿಕೊಳ್ಳ ಬೇಕು ಎಂದರು.
ಡಿಜಿಟಲ್ ಲೈಬ್ರರಿ,ಜಲಜೀವನ್ ಮೀಷನ್ ಮೂಲಕ ಪ್ರತಿ‌ ಮನೆಮನೆಗೂ ನಳ ಸಂಪರ್ಕ ಕಲ್ಪಸಲಾಗುವುದು ಎಂದರು.
ಗ್ರಾಮೀಣ ಭಾಗದ ಸ್ವಚ್ಚತೆಯ ದೃಷ್ಟಿಯಿಂದ
ಸ್ವಚ್ಛ ಭಾರತ ಯೋಜನೆ ಯಡಿ, ಕಸ ಸಂಗ್ರಹಣೆಗೆ ವಾಹನ, ಕಸವಿಲೇವಾರಿ ಘಟಕ ಮೂಲಕ ವಿಲೆವಾರಿ ಮಾಡಲಾಗುತ್ತಿದೆ ಎಂದರು.
ಸ್ವಚ್ಚತೆ ಪ್ರತಿಯೊಬ್ಬರು ಪಾಲಿಸ ಬೇಕು
ನಾವು ಶೌಚಾಲಯ ಬಳಸಿದಾಗ, ಹೊರಗಡೆ ನಾವು ಕೆಲಸ ಕಾರ್ಯಗಳನ್ನು ಮಾಡಿದಾಗ ಕೈಯನ್ನು ಶುಭ್ರವಾಗಿ ತೊಳೆದರೆ ಮಾತ್ರ ಆರೋಗ್ಯ ವನ್ನು ಕಾಪಡಲು ಸಾಧ್ಯ.
ವಿಶ್ವ ಕೈ ತೊಳೆಯುವ ದಿನ ಅಂಗವಾಗಿ ಎಲ್ಲರು ಕೈ ತೊಳೆಯುವ ಮೂಲಕ ಸಾಂಕ್ರಾಮಿಕ ರೋಗದಿಂದ ಆರೋಗ್ಯ ಕಾಪಾಡಿಕೊಳ್ಳ ಬೇಕು ಎಂದರು.
ಈ ವೇಳೆ ಉಪ ವಿಭಾಗಧಿಕಾರಿಗಳಾದ ಸೋಮಪ್ಪ ಕಡಕೋಳ, ತಹಶಿಲ್ದಾರ್ ವರದರಾಜು ,ಕಾರ್ಯನಿರ್ವಾಹಕ ಅಧಿಕಾರಿ ಶಿವರಾಜಯ್ಯ,
ಗ್ರಾಪಂ ಅಧ್ಯಕ್ಷರು ಭೂಲಕ್ಷ್ಮಮ್ಮ, ಉಪಾಧ್ಯಕ್ಷರು ಗಂಗಮ್ಮ, ಗ್ರಾಪಂ ಸದಸ್ಯರು,
ಎಲ್ಲ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ದೊಮ್ಮತಮರಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ರಂಗಧಾಮಪ್ಪ, ಗ್ರಾಮದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.

.


Spread the love