Spread the love

ಪಾವಗಡ : ತಾಲ್ಲೂಕು ಮಂಗಳವಾಡ ಗ್ರಾಮ ಪಂಚಾಯಿತಿ ಮುಂದೆ ದಲಿತ ಜನಾಂಗದ ಮಂಜಮ್ಮ ಎಂಬುವವರು ಅನಿರ್ದಿಷ್ಟಾವಧಿ ದರಣಿಸತ್ಯಾಗ್ರಹ ಹಮ್ಮಿಕೊಂಡಿ ಒಂಟಿ ಹೋರಾಟಕ್ಕೆ ಕುಳಿತಿದ್ದಾಳೆ. ತನಗಾದ ಅನ್ಯಾಯಕ್ಕೆ ಅಧಿಕಾರಿಗಳು ಪರಿಹಾರ ಕೊಡುವಲ್ಲಿ ಫಲವಾಗಿದ್ದಲ್ಲಿ ಮನನೊಂದ ಮಹಿಳೆ ಹೋರಾಟದ ಹಾದಿ ಹಿಡಿದಿದ್ದಾಳೆ. ಈಕೆಗೆ ಸೇರಿದ ಸ್ವಂತ ನಿವೇಶನದಲ್ಲಿ ಶ್ರೀದೇವಿ ಕೋಂ ಶ್ರೀನಿವಾಸ ಗುಪ್ತ ಎಂಬುವರು ಅನಧಿಕೃತವಾಗಿ ಕಟ್ಟಡ ನಿರ್ಮಿಸಿ ನಿರಂತರ ದೌರ್ಜನ್ಯವೆಸಗುತ್ತಿದ್ದು ಕಳೆದ ಎಂಟು ವರ್ಷಗಳಿಂದ ಕೋರ್ಟ್ ಕಛೇರಿಗೆ ಅಲೆದಾಡಿಸಿ ಈಕೆಗೆ 2010 ರಲ್ಲಿ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳ ನ್ಯಾಯಾಲಯ ನಿರ್ದೇಶನದ ಮೇರೆಗೆ ಸರ್ಕಾರದಿಂದ ಸಿಕ್ಕ ನಿವೇಶನದಲ್ಲಿ ಮಂಜೂರಾದ ಮನೆಯನ್ನು ಕಟ್ಟಿಸಲು ಬಿಡದೇ ಮನೆ ನಿವೇಶನದಲ್ಲಿ ಪೂ-ಪ : 15ಅಡಿ , ಉ-ದ : 8ಅಡಿ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ಪ್ರವೇಶಿಸಿ. ಅ ಜಾಗದಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಿಕೊಂಡು ಪರಿಶಿಷ್ಟ ಪಂಗಡದ ನಾಯಕ ಜನಾಂಗದ ಮಂಜಮ್ಮ ನವರಿಗೆ ಇದು ತನ್ನ ಬದುಕನ್ನೇ ನುಂಗಿ ಹಾಕಿದ ಸಮಸ್ಯೆ ಎಂದೇ ಪರಿಗಣಿಸಿದ ಕಾರಣ ತೊಂದರೆ ಕೊಟ್ಟಿರುವ ಶ್ರೀನಿವಾಸ ಗುಪ್ತ ಹಾಗೂ ಆತನ ಪತ್ನಿ ಶ್ರೀದೇವಿ ಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಜಮ್ಮ ಎಂಬುವವರು ದರಣಿಸತ್ಯಾಗ್ರಹ ಹೋರಾಟಕ್ಕೆ ಮುಂದಾಗಿರುವುದು ಕಂಡು ಬಂದಿದೆ.

ವರದಿ : ಅಜಿತ್ ಕುಮಾರ್ ಬೆಳ್ಳಿಬಟ್ಲು ಓ


Spread the love