“ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ”
ಕೊಟ್ಟೂರು 15.10.2022 : ಕೊಟ್ಟೂರು ತಾಲೂಕಿನ ನಿಂಬಳಗೇರಿಯಲ್ಲಿ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” 12ನೇ ಕಾರ್ಯಕ್ರಮವು ತಾಲೂಕು ಆಡಳಿತದಿಂದ ನಡೆಸಲಾಯಿತು. ಗ್ರಾಮದಲ್ಲಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರೊಂದಿಗೆ ಸಂಚಾರ ಮಾಡಿ ವೀಕ್ಷಣೆ ನಡೆಸಲಾಯಿತು. ಚರಂಡಿ ವ್ಯವಸ್ಥೆ ಹಾಗೂ ಸಿಸಿ ರಸ್ತೆಯ ದುರವಸ್ಥೆಯ ಬಗ್ಗೆ ಗ್ರಾಮಸ್ಥರು ಮನವಿ ಮಾಡಲಾಗಿ 1ವಾರದಲ್ಲಿ ಚರಂಡಿಯನ್ನು ಸ್ವಚ್ಛಗೊಳಿಸಲು ಪಿಡಿಒ ರವರಿಗೆ ಗಡುವು ನೀಡಲಾಯಿತು. 15ನೇ ಹಣಕಾಸು ಯೋಜನೆಯಲ್ಲಿ ಕೂಡಲೇ ಗ್ರಾಮದಲ್ಲಿ ಸಿಸಿ ರಸ್ತೆಯನ್ನು ಕೈಗೊಳ್ಳುವುದಾಗಿ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದರು..
ಗ್ರಾಮದಲ್ಲಿರುವ 2.50 ಎಕರೆ ಸ್ಮಶಾನ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿಪಡಿಸಲು ಕೋರಲಾಗಿ ಗ್ರಾಮ ಪಂಚಾಯಿತಿಯಿಂದ ಕೂಡಲೇ ಅಭಿವೃದ್ಧಿಗೆ ಕ್ರಮವಹಿಸಲು ತಹಶೀಲ್ದಾರರು ತಿಳಿಸಿದರು. ಶಾಲೆಯಲ್ಲಿ ಶಿಕ್ಷಕರ ಕೊರತೆ ಬಗ್ಗೆ ಮನವಿ ಸಲ್ಲಿಸಲಾಗಿ ಇಸಿಒ ಅಜ್ಜಪ್ಪ ಇವರು 4 ಜನ ಅತಿಥಿ ಶಿಕ್ಷಕನ್ನು ನಿಯೋಜಿಸಲಾಗಿದ್ದು, 15 ದಿನಗಳಲ್ಲಿ ಶಿಕ್ಷಕರ ಭರ್ತಿಮಾಡಲಾಗುತ್ತಿದ್ದು ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು. ಬಸ್ ನಿಲ್ದಾಣದ ಹತ್ತಿರ ಶಿಥಿಲವಾಗಿರುವ ನೀರಿನ ಟ್ಯಾಂಕನ್ನು ತೆರವುಗೊಳಿಸಿ ಜೆಜೆಎಂ ಯೋಜನೆ ಅಡಿಯಲ್ಲಿ ಕೂಡಲೇ ನೂಥನ ಟ್ಯಾಂಕ್ ನಿರ್ಮಿಸಲು ಕ್ರಮವಹಿಸಲಾಗುವುದು. ಎಸ್ ಕರಿಬಸಪ್ಪ ಇವರ ಜಮೀನಿನಲ್ಲಿ ಪಪ್ಪಾಯಿ ಬೆಳೆಗೆ ನರೇಗಾ ಯೋಜನೆ ಅಡಿಯಲ್ಲಿ ನಡೆದ ಕಾಮಗಾರಿಗೆ 1ವಾರದಲ್ಲಿ ಹಣ ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಂದಾಯ-25, ಆರ್.ಡಿ.ಪಿ.ಆರ್.-7, ಕೆಇಬಿ-2, ಕೃಷಿ-1 ಒಟ್ಟು 42 ಅರ್ಜಿಗಳು ಸ್ವೀಕೃತವಾಗಿದ್ದು, ಕಂದಾಯ ಇಲಾಖೆಯ 15ಅರ್ಜಿಗಳು ಸ್ಥಳದಲ್ಲೇ ವಿಲೇಗೊಳಿಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಂಗಮ್ಮ ಮಹಾಂತೇಶ, ಉಪಾಧ್ಯಕ್ಷ ಮ್ಯಾಸರ ಪಾಲಾಕ್ಷಿ, ಸದಸ್ಯರು, ಅಜ್ಜಪ್ಪ ಇಸಿಒ, ಕೊಟ್ರೇಶ್ ಕೆ ಮುಖ್ಯಗುರುಗಳು, ಅಜಮತುಲ್ಲಾ ಶಿರಸ್ತೇದಾರರು, ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು. ಸಿ.ಮ.ಗುರುಬಸವರಾಜ ನಿರ್ವಹಿಸಿದರು.
ವರದಿ : ವಿಷ್ಣು . ಎಲ್.ಕೊಟ್ಟೂರು