ಕೊಟ್ಟೂರು ಬಸ್ ನಿಲ್ದಾಣದಲ್ಲಿ ಕೆರೆ ಕೊಡಿ ಬಿದ್ದಿದೆ ಈಜಾಡುಲು ಸರಕಾರಿ ಅಧಿಕಾರಿಗಳೇ,
ಸರಕಾರಿ ಬಸ್ ನಿಲ್ದಾಣದಲ್ಲಿ ಕೆರೆ ಉದ್ಭವಾಗಿದೆ
ಗಂಗಮ್ಮನ ಪೂಜೆಗೆ ತಯಾರಗಿ ಬನ್ನಿ ಜನ ಪ್ರತಿನಿಧಿಗಳು,
ಕೊಟ್ಟೂರು: ಕೊಟ್ಟೂರು ತಾಲೂಕಿನಲ್ಲಿರುವ ಅವ್ಯವಸ್ಥೆಯ ಬಗ್ಗೆ ಎಷ್ಟು ಬರೆದರೂ ಕಡಿಮೆಯೆ..! ಸುಸರ್ಜಿತ ಹೆರಿಗೆ ಆಸ್ಪತ್ರೆಯಿಲ್ಲ, ಕುಡಿಯಲು ನೀರಿಲ್ಲ… ಇನ್ನು ಉಧೋ ಉಧೋ ಮಳೆ ಸುರಿದರಂತೂ ಜನರ ರಕ್ಷಣೆಗೆ ದೇವರೇ ಬರಬೇಕು.
ನಿರಂತರ ಮಳೆ ಸುರಿದು ಭಾರೀ ಮಳೆ ಆಕಾಶಕ್ಕೆ ಮಾತ್ರ ಕನ್ನಡಿ ಹಿಡಿದಿಲ್ಲ, ಸರಕಾರ ತೋರುತ್ತಿರುವ ಅನಾದರಕ್ಕೆ, ಕೊಟ್ಟೂರು ತಾಲೂಕಿನ ಅವ್ಯವಸ್ಥೆಯ ಆಗರಕ್ಕೆ ಕನ್ನಡಿ ಹಿಡಿದಿದೆ. ಇದೇನು ತಾಲೂಕು ಕೇಂದ್ರದ ಬಸ್ ನಿಲ್ದಾಣವೋ, ಹೊಲಸು ತುಂಬಿರುವ ಕೆರೆಯೋ ಎಂಬಂತಾಗಿದೆ. ದಿನ ಸುರಿದ ಮಳೆಯಿಂದಾಗಿ ಬಸ್ ನಿಲ್ದಾಣದ ತುಂಬಾ ನೀರು ತುಂಬಿಕೊಂಡಿದ್ದು,
ಪ್ರಯಾಣಿಕರು ಪರದಾಡುವಂತಾಗಿದೆ
ನಿಲ್ದಾಣದಲ್ಲಿ ತುಂಬಿದ ನೀರು ಹರಿದುಹೋಗಲು ವ್ಯವಸ್ಥೆ ಮಾಡಲಾಗಿಲ್ಲ. ಜನರಂತೂ ಬಸ್ ತಲುಪಲು ಕೊಚ್ಚೆ ನೀರಿಗಿಳಿಯದೆ ಬೇರೆ ದಾರಿಯೇ ಇಲ್ಲದಂತಾಗಿ ಪರದಾಡುವ ಸ್ಥಿತಿ ಉಂಟಾಗಿದೆ. ಸರಕಾರವನ್ನು ಬೈದುಕೊಳ್ಳುತ್ತ, ಅಧಿಕಾರಿಗಳನ್ನು ಶಪಿಸುತ್ತ ಜನರು ತಾವು ತಲುಪಬೇಕಾದ ಗಮ್ಯಾ ತಲುಪುತ್ತಿದ್ದಾರೆ. ಯಾವ ಕರ್ಮಕ್ಕೆ ಕೊಟ್ಟೂರನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕಾಗಿತ್ತು ಎಂದು ಹೀಯಾಳಿಸುತ್ತಿದ್ದಾರೆ. ಸರಕಾರ ಮಾತ್ರ ತನಗೂ ಕೊಟ್ಟೂರಿಗೂ ಸಂಬಂಧವೇ ಇಲ್ಲ ಎಂಬಂತೆ ಕಣ್ಣುಮುಚ್ಚಿ ಕುಳಿತಿದೆ.
ನಿರಂತರ ಸುರಿದ ಮಳೆಗೆ ಇಲ್ಲಿಯ ಬಸ್ ನಿಲ್ದಾಣದಲ್ಲಿ ಹೊಲಸು ನೀರು ತುಂಬಿದ ಕೆರೆಯಂತಾಗಿದೆ. ಪ್ರಯಾಣಿಕರು ಕೆಸರು ನೀರಲ್ಲಿ ಈಜುತ್ತಾ ಈಜುತ್ತಾ ಬಸ್ ಏರಬೇಕಿದೆ.ಯಾರಾದರೂ ಕೊಟ್ಟೂರು ಬಸ್ ನಿಲ್ದಾಣಕ್ಕೆ ಬರುವವರು ಮತ್ತೊಂದು ಜೊತೆ ಬಟ್ಟೆ ತರಲು ಮರೆಯದಿರಿ ಎಂದು ಸಾರ್ವಜನಿಕರೇ ಘೋಷಿಸಬೇಕೆಂಬುದೊಂದು ಬಾಕಿ ಇದೆ…?
ಪ್ರತಿ ವರ್ಷ ಸಂತೆ ಮೈದಾನದಂತಿರುವ ನಿಲ್ದಾಣದಲ್ಲಿ ಮಳೆ ಬಂದರೆ ಸಾಕು ಕೆರೆ ನಿರ್ಮಾಣವಾಗುತ್ತದೆ.ಇಲ್ಲದಿದ್ದರೆ ಧೂಳುಮಯ.ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ.
ಕೋಟ್…( ಸಾರ್ವಜನಕರ ಮಾತು )
ಇಲ್ಲಿಯ ಬಸ್ ನಿಲ್ದಾಣಕ್ಕೆ ಈ ದುಸ್ಥಿತಿ ಬಂದಿದ್ದು ಇವತ್ತೇ ಅಲ್ಲ, ಮೊದಲಿಂದಲೂ ಹೀಗೆ ಇದೆ. ನಿಲ್ದಾಣದ ಕೆರೆಯ ಆವರಣದಲ್ಲಿ ಕೆಂಪು ನೀರು ತುಂಬಿ ನಿಂತಿರುತ್ತದೆ. ಬೇಸಿಗೆ ಕಾಲ ಬಂದರೂ ಧೂಳಿನ ಪರಿಸ್ಥಿತಿ ನಿರ್ಮಾಣವಾಗುತ್ತೆ. ನಿಲ್ದಾಣದ ಆವರಣದ ಡಾಂಬರು ಕಿತ್ತು ವರ್ಷವೇ ಕಳೆದರೂ ಇದುವರೆಗೂ ಸಾರಿಗೆ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.
ಕೆ ಶಿವಕುಮಾರ್ ಗೌಡ್ರು ( ಪಂಚಮಸಾಲಿ ನಗರ ಘಟಕ ಕೊಟ್ಟೂರು )
ಕೋಟ್…( ಸಾರ್ವಜನಕರ ಮಾತು )
ಒಂದು ದಿನ ಮಳೆ ಬಂದರೆ ಹೀಗೆ ಇನ್ನು ಇಡೀ ತಿಂಗಳು ಮಳೆ ಬಂದರೆ ಪರಿಸ್ಥಿತಿ ಹೇಗಿರಬಹುದು ಎಂದು ಸರಕಾರಿ ಅಧಿಕಾರಿಗಳು ಯೋಚಿಸಬೇಕು. ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಬಸ್ ನಿಲ್ದಾಣದಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಂಡು ಪ್ರಯಾಣಿಕರಿಗೆ ಸುಖ ಪ್ರಯಾಣ ನೀಡುವಲ್ಲಿ ಸಾರಿಗೆ ಇಲಾಖೆ ಮುಂದಾಗಬೇಕಿದೆ. ಮಳೆಗಾಲದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿಗೆ ಬರುವ ಕಾರ್ಯಕ್ರಮ ಹಾಕಿಕೊಳ್ಳಲಿ.
ದಲಿತ ಸಂಘರ್ಷ ಸಮಿತಿ ಕೊಟ್ಟೂರು ತಾಲೂಕು ಅಧ್ಯಕ್ಷ
ಪಿ ಚಂದ್ರಶೇಖರ್( ಕೊಟ್ಟೂರು ನಿವಾಸಿ)
ವರದಿ:- ವಿಷ್ಣು.ಎಲ್.ಕೊಟ್ಟೂರು