Spread the love

ಪಾಂಡವಪುರ: ಶ್ರೀರಂಗಪಟ್ಟಣ ತಾಲೂಕು ದರಸಗುಪ್ಪೆ ಗ್ರಾಮ ಪಂಚಾಯಿತಿ ನೂತನವಾಗಿ ಚುನಾಯಿತ ಪ್ರಕ್ರಿಯೆ ನಡೆದಿದ್ದು. ಪೋಟಿ ಮಾಡಿದವರ ಪೈಕಿ ಅಧ್ಯಕ್ಷರಾಗಿ ಶಿವಮ್ಮ ದೇವರಾಜು ಆಯ್ಕೆಯಾಗಿದ್ದಾರೆ ಮತ್ತು ಉಪಾಧ್ಯಕ್ಷರಾಗಿ ರಾಧಾ ರಜಿನೀಶ್ ರವರು ಅವಿರೋಧವಾಗಿ ಆಯ್ಕೆಚುನಾಯಿತ ಗೊಂಡಿದ್ದು.
ಅ.15 ಇಲ್ಲಿನ ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಶಿವಮ್ಮ ಅವರಿಗೆ ಕಾಂಗ್ರೆಸ್ ಪಕ್ಷ ಬೆಂಬಲಿಸಿದ ಕಾರಣ ಅವರ ಅವಿರೋಧ ಆಯ್ಕೆಯಾಗಿದ್ದು. ಸ್ಥಳೀಯ ಕಾಂಗ್ರೇಸ್ ರಾಜಕೀಯಕ್ಕೆ ಪ್ರಬಲವಾದ ಬಳಸಿಕ್ಕಿದಂತಾಗಿದೆ. ಇನ್ನು ಚುನಾಯಿತ ಪ್ರತಿನಿಧಿಗಳಿಗೆ ಪಕ್ಷದ ಕಾರ್ಯಕರ್ತರು ಅಭಿನಂದನೆ ಸಲ್ಲಿಸುವ ಮೂಲಕ ಹರುಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಮೋಹನ್ ಕುಮಾರ್ (ಮುರಳಿ), ಕೆ.ಸಿ. ಮಾದೇಶ್, ಶ್ರೀಧರ್ ಸಂಜಯ್, ರಜಿನಿ ವಿಶ್ವನಾಥ್, ಮುಖಂಡರುಗಳಾದ ಆರ್ ಎನ್ ಗುರುಪ್ರಸಾದ್, ಪ್ರಾಣೇಶ್, ಮಲ್ಲಯ್ಯ, ಮಹದೇವ್, ವಿಶ್ವನಾಥ್, ರಾಮಚಂದ್ರ, ಶಿವಮಾದ, ಮಹೇಶ್, ನವೀನ, ಪ್ರಕಾಶ್, ಸುರೇಶ್, ಕೆಂಪಯ್ಯ, ಚಿರಣ್, ಸ್ವಾಮಿಣ್ಣ , ಹಲವು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ : ಲೋಕರಕ್ಷಕ ಪಾಂಡುಪುರ


Spread the love