Spread the love

ಪಾಂಡವಪುರ : ಇತ್ತೀಚೆಗೆ ಸುರಿದ ಬಾರಿ ಮಳೆಗೆ ಮನೆ – ಮಠಗಳು ಹಾಳಾಗಿ ಜನಜೀವನವೆ ಅಸ್ತವ್ಯಸ್ತವಾಗಿರುವುದು ಕಂಡು ಬರುತ್ತಿದ್ದು ಇದೀಗ ಮನೆಯ ಗೋಡೆ ಕುಸಿದು ಎರಡು ದಿನಗಳ ನಂತರ PDO ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಹಾರದ ಭರವಸೆ ನೀಡಿದ್ದಾರೆ.
ತಾಲ್ಲೂಕಿನ ಚಿನಕುರುಳಿ ಹೋಬಳಿ ಹೊನಗಾನಹಳ್ಳಿ ಪಂಚಾಯಿತಿಗೆ ಸೇರಿದ ಕಣಿವೆ ಕೊಪ್ಪಲು ಗ್ರಾಮದಲ್ಲಿ ಅಕ್ಟೋಬರ್ 15 ರಂದು ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಗ್ರಾಮದ ಲೇಟ್ ಬೆಟ್ಟಯ್ಯ ಅವರ ಪತ್ನಿ ಭಾಗ್ಯಮ್ಮ ಎಂಬವರ ಮನೆಯ ಗೋಡೆ ಕುಸಿದ್ದು ಅಪಾರ ನಷ್ಟವಾಗಿದೆ.
ಭಾಗ್ಯಮ್ಮ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ, ಇಂದು ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯತಿ ಪಿಡಿಓ ಪರಿಶೀಲನೆ ನಡೆಸಿ ಸಂತ್ರಸ್ಥ ಕುಟುಂಬಕ್ಕೆ ಸಾಂತ್ವನ ಹೇಳಿದರಲ್ಲದೇ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಗ್ರಾಮ ಸಹಾಯಕ ನಿಂಗಯ್ಯ, ಮುಖಂಡರಾದ ಕಣಿವೆ ಚಲುವರಾಜ್ ಮತ್ತಿತರರು ಇದ್ದರು.

ವರದಿ : ಲೋಕರಕ್ಷಕ ಪಾಂಡುಪುರ.


Spread the love