Spread the love

ಕೊಟ್ಟೂರು:- ಉತ್ತಮ ಮಳೆ ಹಿನ್ನಲೆಯಲ್ಲಿ ಭರ್ತಿಯಾದ ಕೊಟ್ಟೂರು ಪಟ್ಟಣದ ಕೆರೆಗೆ ಕರ್ನಾಟಕ ಜನಪರ ಅಹಿಂದ ವೇದಿಕೆ ಸಂಘಟನೆಯ ವಿಜಯನಗರ ಜಿಲ್ಲಾಧ್ಯಕ್ಷರಾದ ಸಣ್ಣ ಪವಾಡಿ ಹನುಮಂತಪ್ಪ ನವರ ನೇತೃತ್ವದಲ್ಲಿ ಕೆರೆಗೆ ಬಾಗಿನ ಅರ್ಪಿಸಿ,ಗಂಗೆ ಪೂಜೆ ಮಾಡಿ,ಮುತ್ತೈದೆ ಮಹಿಳೆಯರಿಗೆ ಉಡಿ ತುಂಬಿಸಲಾಯಿತು.
ಈ ಸಂದರ್ಭದಲ್ಲಿ ಮಾತಾನಾಡಿದ ಜಿಲ್ಲಾಧ್ಯಕ್ಷರಾದ ಸಣ್ಣ ಪವಾಡಿ ಹನುಮಂತಪ್ಪ ನವರು ಕೊಟ್ಟೂರು ಕೆರೆ ನೋಡಿ ಅತೀವ ಸಂತೋಷ ವ್ಯಕ್ತಪಡಿಸಿ ಕೆರೆಯು ನೀರು ತುಂಬಿಕೊಳ್ಳದೆ ಸುಮಾರು 13 ವರ್ಷಗಳು ಆಗಿತ್ತು.ಈ ವರ್ಷ ಉತ್ತಮ ಮಳೆಯಾಗಿ ಕೊಟ್ಟೂರು ಕೆರೆ ತುಂಬಿ,ಇಲ್ಲಿನ ರೈತರ ಮನಸ್ಸಿಗೆ ಸಂತೋಷವನ್ನುಂಟು ಮಾಡಿದೆ ಹಾಗೂ ಮತ್ತಷ್ಟು ಮಳೆ ಬೆಳೆಯಾಗಿ ನಾಡು ಸಮೃದ್ಧವಾಗಲೆಂದು ಹಾರೈಸಿದರು.
ಈ ಸಂದರ್ಭದಲ್ಲಿ ವಿಜಯನಗರ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಪಾಯಲ ಭಾನು,ಅಸ್ಲಾಂ ಭಾಷಾ,ಜಿಲ್ಲಾ ಕಾರ್ಯದರ್ಶಿ ಶಾದಿಕ್,ಹಗರಿ ಬೊಮ್ಮನಹಳ್ಳಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಕರಿಬಸಮ್ಮ,ಕೊಟ್ಟೂರು ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ತಸ್ಲೀಮಾ ಭಾನು,ಹೊನ್ನೂರು ಸಾಬ್,ಕೊಟ್ಟೂರು ತಾಲೂಕು ಮಹಿಳಾ ಘಟಕದ ಕಾರ್ಯದರ್ಶಿಯಾದ ಗುಲ್ಜಾರ್ ಭಾನು,ಮತ್ತು ಸದಸ್ಯರಾದ ಅಂಬುಜಮ್ಮ,ಶಾಂತಮ್ಮ, ಕೊಟ್ರಮ್ಮ,ದೇವಮ್ಮ ಇನ್ನಿತರರು ಉಪಸ್ಥಿತರಿದ್ದರು.

ವರದಿ:- ವಿಷ್ಣು.ಎಲ್ ಕೊಟ್ಟೂರು.


Spread the love