Spread the love

ಕೊಟ್ಟೂರು:- ಆಯುಷ್ಮಾನ್ ಭಾರತ ಇಲಾಖೆಯ ಉಚಿತ ಆಭಾ (ಆರೋಗ್ಯ ಭಾರತ್ ಹೆಲ್ತ್ ಅಕೌಂಟ್ ಕಾರ್ಡ್) ಕಾರ್ಡ್ ನ್ನು ಗ್ರಾಮೀಣ ಭಾಗದಲ್ಲಿ ಉಚಿತವಾಗಿ ನೊಂದಣಿ ಮಾಡಿಸಿಕೊಂಡು ಪ್ರತಿಯೊಬ್ಬ ನಾಗರೀಕರು ಸರ್ಕಾರದ ಸೌಲಭ್ಯವನ್ನ ಪಡೆಯಲು ವಿನಂತಿಸಿದರು.ತಾಲೂಕ ಕಛೇರಿ, ಕೊಟ್ಟೂರಿನಲ್ಲಿ ಇಂದು ನಡೆದ ಆಭಾ ಕಾರ್ಡ್ ನೊಂದಣಿ ಪ್ರಗತಿ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿಗಳು ರೂ.5ಲಕ್ಷದವರೆಗೆ ಹಾಗೂ ಎಪಿಎಲ್ ಕಾರ್ಡ್ ದಾರರು ರೂ.1.50ಲಕ್ಷದವರೆಗೆ ವೈಧ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ಪಡೆಯಲು ಪ್ರತಿಯೊಬ್ಬ ನಾಗರೀಕರು ಆಭಾ ಕಾರ್ಡ್ ನ್ನು ಹೊಂದಿರಬೇಕು.ಈ ಕಾರ್ಡ್ ನ್ನು ಗ್ರಾಮ-1 ಕೇಂದ್ರಗಳ ಮೂಲಕ ಉಚಿತವಾಗಿ ನೊಂದಣಿ ಮಾಡಲಾಗುತ್ತಿದ್ದು, ಆಧಾರ್ ಕಾರ್ಡ್, ಆಹಾರ ಪಡಿತರ ಚೀಟಿ ಹಾಗೂ ಆಧಾರ್ ಲಿಂಕ್ ಹೊಂದಿದ ಮೊಬೈಲ್ ಸಂಖ್ಯೆಯೊಂದಿಗೆ ಹಾಜರಾಗಬೇಕು.

ಸದರಿ ಸೌಲಭ್ಯವನ್ನು ಗ್ರಾಮ-1 ಕೇಂದ್ರಗಳಲ್ಲಿ,ನ್ಯಾಯ ಬೆಲೆ ಅಂಗಡಿಗಳಲ್ಲಿ,ಶಾಲಾ-ಕಾಲೇಜಿನಲ್ಲಿ ನೊಂದಣಿ ಕಾರ್ಯವನ್ನು ಪ್ರಾರಂಭಿಸಲಾಗಿದ್ದು, ತಾಲೂಕಿನ ಪ್ರತಿಯೊಬ್ಬ ನಾಗರೀಕರು ಪಡೆದುಕೊಂಡು ಆರೋಗ್ಯ ತೊಂದರೆಯಿಂದ ಆಗುವ ವೈಧ್ಯಕೀಯ ವೆಚ್ಚಗಳ ಭಾರವನ್ನು ಕಡಿಮೆ ಮಾಡಿಕೊಳ್ಳಲು ವಿನಂತಿಸಿದ್ದಾರೆ.

ಸಭೆಯಲ್ಲಿ ಬೆಣ್ಣಿ ವಿಜಯಕುಮಾರ್ ಕಾರ್ಯನಿರ್ವಾಹಕ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಇಸಿಒ ಸಿ.ಅಜ್ಜಪ್ಪ, ಭರತ್ ಆಹಾರ ಶಿರಸ್ತೇದಾರರು, ಕೊಟ್ರಯ್ಯ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷರು ಹಾಗೂ ನ್ಯಾಯ ಬೆಲೆ ಅಂಗಡಿ ಮಾಲೀಕರು,ಕಂದಾಯ ನಿರೀಕ್ಷಕರು,ಗ್ರಾಮ-ಒನ್ ಆಪರೇಟರ್ ಗಳು,ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.

ವರದಿ : ವಿಷ್ಣು. ಎಲ್. ಕೊಟ್ಟೂರು


Spread the love