Spread the love

ಬೆಂಗಳೂರು : ಬೆಂಗಳೂರಿನ ಸ್ಫೂರ್ತಿ ಧಾಮದ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿಗಳ ಐಕ್ಯತೆ ಹೋರಾಟದ ಚಾಲನಾ ಸಭೆಯಲ್ಲಿ ಬೀದರ ದಲಿತ ಸಂಘಟನೆಗಳ ಜಿಲ್ಲಾ ಮುಖಂಡರು ಭಾಗವಹಿಸಿದರು, ಈ ಸಭೆಯಲ್ಲಿ ಇತ್ತೀಚಿನ ಸರ್ಕಾರದ ದಲಿತ ವಿರೋಧಿ ನೀತಿಗಳನ್ನು ಖಂಡಿಸಿ ಇವುಗಳ ವಿರುದ್ದ ಹೊರಟ ರೂಪಿಸುವ ಕುರಿತು ಸುಧೀರ್ಘವಾಗಿ ಚರ್ಚಿಸಲಾಯಿತು, ಈ ಸಭೆಯು ಸ್ಫೂರ್ತಿ ಧಾಮದ ಟ್ರಸ್ಟ್ ನ ಅಧ್ಯಕ್ಷರಾದ ನಿವೃತ್ತ ಐಪಿಎಸ್ ಅಧಿಕಾರಿ ಮರಿಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.

ಈ ಸಭೆಯಲ್ಲಿ ಗುರುಪ್ರಸಾದ ಕೇರಾಗೂಡು, ಇಂದುರು ಹೊನ್ನಾಪುರ, ಏನ್ ಮುನಿಸ್ವಾಮಿ, ವೇಕಟೇಶ ಗಡ್ಡದ, ಜಿಗಣಿ ಶಂಕರ, ಡಿಜಿ ಸಾಗರ, ಮಾವಳ್ಳಿ ಶಂಕರ್, ಲಕ್ಷ್ಮಿನಾರಾಯಣ ನಾಗವಾರ, ಅಣ್ಣಯ್ಯ, ಸೋಮಶೇಖರ ಎಂ, ಹೆಣ್ಣೂರು ಶ್ರೀನಿವಾಸ, ಎಂ ಗುರುಮೂರ್ತಿ, ವಿ ನಾಗರಾಜ, ಅರ್ಜುನ ಭದ್ರೆ, ಎಸ್ ಆರ್ ಕೊಳ್ಳುರು ಸೇರಿದಂತೆ ಇತರ ಹಾಜರಿದ್ದರು, ಬೀದರ ಜಿಲ್ಲೆಯಿಂದ ರಾಜಕುಮಾರ ಮೂಲಭಾರತಿ, ರಮೇಶ ಡಾಕುಳಗಿ, ಮಾರುತಿ ಬೌಧೆ, ಬಾಬುರಾವ ಪಾಸ್ವಾನ, ಶ್ರೀಪತರಾವ ದೀನೆ, ಶಿವಕುಮಾರ ನಿಲಿಕಟ್ಟಿ, ಸಂದೀಪ ಕಾಂಟೆ, ರಾಜಕುಮಾರ ಶೇರೀಕರ ಶಿವರಾಜ ಲಾಡ್ಕರ, ಸುಭಾಷ ಜ್ಯೋತಿ, ಶಿವರಾಜ ತಡಪಳ್ಳಿ, ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಸಂಚಾಲಕರು, ಸೇರಿದಂತೆ 1000 ಕ್ಕೂ ಹೆಚ್ಚು ಕಾರ್ಯಕರ್ತರು ಹಾಜರಿದ್ದರು.

ವರದಿ : ಸಂದೀಪ್ ಕಾಂಟೆ


Spread the love