Spread the love

ಪಾವಗಡ: ತಾಲೂಕಿನಲ್ಲಿ ಕಳೆದೆ ಒಂದು ವಾರದಿಂದ ಸತತವಾಗಿ ಮಳೆ ಸುರಿದ ಕಾರಣ ಪಾವಗಡ ತಾಲ್ಲೂಕಿನಲ್ಲಿ ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ಅನೇಕ ಕಡೆ ಜಲಾವೃತಗೊಂಡಿದೆ. ಕ್ಯಾತಗಾನ ಚೆರ್ಲು ಬಳಿಯ ಸೋಲಾರ್ ಪಾರ್ಕ್ ಮುಕ್ಕಾಲು ಭಾಗ ಮುಳುಗಡೆ ಆಗಿದೆ. ಕ್ಯಾತಗಾನ ಚೆರ್ಲು ಬಳಿ ಕೆರೆ ತುಂಬಿದ ಹಿನ್ನೆಲೆಯಲ್ಲಿ ಪಾರ್ಕ್‌ನ 30 ಹೆಕ್ಟೇರ್‌ನಷ್ಟು ಪ್ರದೇಶ ಸೋಲಾರ್ ಪಾರ್ಕ್ ಜಲಾವೃತಗೊಂಡಿದೆ. ಹಾಗೂ ಸೋಲಾರ್ ಪ್ಯಾನಲ್‌ಗಳು, ಎಲೆಕ್ಟ್ರಾನಿಕ್ ಉಪಕರಣಗಳು ಸಂಪೂರ್ಣಾವಾಗಿ ಜಲಾವೃತವಾಗಿವೆ.

13,000 ಹೆಕ್ಟೇರ್ ಸೋಲಾರ್‌ ಪಾರ್ಕ್‌ ಮುಕ್ಕಾಲು ಪಾಲು ಜಲಾವೃತ

ತುಮಕೂರು ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಇದರಿಂದ ಪಾವಗಡದ ಸೋಲಾರ್ ಪಾರ್ಕ್ ಹಲವೆಡೆ ಮುಳುಗಡೆಯಾಗಿದೆ. ಇದು ಏಷ್ಯಾದ ಅತೀ ದೊಡ್ಡ ಸೌರ ಘಟಕ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಲಾವೃತವಾಗಿರುವ ಸೋಲಾರ್ ಪಾರ್ಕ್‌ನಲ್ಲಿ ಯುವಕನೋರ್ವ ಈಜು ಹೊಡೆದಿದ್ದಾನೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ತಿರುಮಣಿ ಗ್ರಾಮದಲ್ಲಿ ಈ ಸೋಲಾರ್ ಪಾರ್ಕ್ ಇದ್ದು, ಸುಮಾರು 13,000 ಎಕರೆ ವಿಸ್ತೀರ್ಣದಲ್ಲಿ ಸುಮಾರು 14,425 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ.
ವಳ್ಳೂರು ಮತ್ತು ಕ್ಯಾತಗಾನ ಕೆರೆ ಗ್ರಾಮಗಳ ಮದ್ಯೆ ಸೋಲಾರ್ ಘಟಕ ಮುಳುಗಡೆ ಆಗಿದೆ. ಮುಳುಗಡೆ ಆಗಿರುವ ಸೋಲಾರ್ ಪ್ಯಾನೆಲ್‌ಗಳ ಸುತ್ತಲೂ ವಿದ್ಯುತ್ ಪ್ರವಹಿಸುತ್ತಿದೆ. ಆದರೆ ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟಕದಲ್ಲಿ ಯುವಕ ಈಜಾಡಿದ್ದಾನೆ. ಈ ವೇಳೆ ಅವಘಡ ಸಂಭಸಿದ್ದರೆ ಯಾರು ಹೊಣೆ? ಅನ್ನುವುದು ಸಾರ್ವಜನಿಕರ ಪ್ರಶ್ನೆ ಆಗಿದೆ. ಸಾರ್ವಜನಿಕ ವಲಯದಲ್ಲಿ ಸೌರ ಪಾರ್ಕ್ ಅಧಿಕಾರಿಗಳ ವೈಫಲ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಅಧಿಕಾರಿಗಳಿಗೆ ಸಾರ್ವಜನಿಕರಿಂದ ತರಾಟೆ

ಇದು ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್ ಎಂದು ಪ್ರಖ್ಯಾತಿ ಪಡೆದಿದ್ದು, ಈ ಪಾರ್ಕ್ 2050 ಮೆಗಾವಾಟ್ ಸೌರ ವಿದ್ಯುತ್‌ ಅನ್ನು ಉತ್ಪಾದನೆ ಮಾಡುತ್ತದೆ. ತುಮಕೂರು ಜಿಲ್ಲೆಯಲ್ಲಿ ಸತತವಾಗಿ ಮಳೆ ಸುರಿಯುತ್ತಲೇ ಇದ್ದು, ಇಲ್ಲಿನ ರೈತರು ಕಂಗಾಲಾಗಿದ್ದಾರೆ. ಇದರ ನಡುವೆಯೇ ಪಾವಗಡದ ಬಳಿ ಇರುವ ಸೋಲಾರ್ ಪಾರ್ಕ್ ಮುಳುಗಡೆ ಆಗಿದ್ದು, ಜನರನ್ನು ಮತ್ತಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಯುವಕನೋರ್ವ ಸೋಲಾರ್‌ ಪಾರ್ಕ್‌ ಬಳಿ ಸಂಗ್ರಹವಾಗಿದ್ದ ನೀರಿನಲ್ಲಿ ಈಜಾಡಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಸೋಲಾರ್‌ ಪಾರ್ಕ್‌ ಬಳಿ ವಿದ್ಯುತ್‌ ಹರಿಯುತ್ತಲೇ ಇದೆ. ಇದರಿಂದ ಅನಾಹುತಗಳು ಸಂಭವಸಿದರೆ ಯಾರು ಹೊಣೆ? ಎಂದು ಪ್ರಶ್ನಿಸುವ ಮೂಲಕ ಸೋಲಾರ್‌ ಪಾರ್ಕ್‌ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಿ ಯಾರು ಒಳಗೆ ಬರದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಾರ್ವಜನಿಕರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ತುಂಬಿದ ಕೆರೆ ಕಟ್ಟೆಗಳಿಂದ ಅನೇಕ ಅವಗಡಗಳು ಸಂಭವಿಸುತ್ತದೆ ಇದೀಗ ಸ್ಥಳೀಯರಿಗೆ ಹೊಸ ಸಮಸ್ಯೆ ಎದುರಂತೆ ಆಗಿದೆ.

ಇನ್ನೂ ವಿಶ್ವದ ಅನೇಕ ಪ್ರಖ್ಯಾತ ಕಂಪನಗಳು ಇಲ್ಲಿ ಬಂಡವಾಳ ಹೂಡಿದ್ದು . ಅನೇಕ ಲಾಭದ ನಿರೀಕ್ಷೆಯಲ್ಲಿದ್ದ ಕಂಪನಿಗಳು ಇದೀಗ ಜಲಾವೃತಗೊಂಡು ಸೋಲಾರ್ ಫ್ಯಾನ್ ಗಳು ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳು ನೀರಿನಲ್ಲಿ ಮುಳುಗಿಯೇ ಹಾಳಾದ ಕಾರಣ ಪುನರುತ್ಚೇತನಕ್ಕೆ ಅಥವಾ ನವೀಕರಣಕ್ಕೆ ಮತ್ತಷ್ಟು ವೆಚ್ಚವನ್ನು ಉಂಟುಮಾಡಿದ್ದ ಕಾರಣ ಮಳೆಯಿಂದ ಇದೀಗ ಹೊಸ ರೀತಿಯ ಆರ್ಥಿಕ ಸಮಸ್ಯೆಯೂ ಉಂಟಾಗಿದೆ.

ವರದಿ : ಏಜೆನ್ಸಿ ಮತ್ತು ಅಜಿತ್ ಕುಮಾರ್ ಬೆಳ್ಳಿಬಟ್ಲು ಓ


Spread the love