Spread the love

ಇಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಹಿರಿಯ ರಾಜಕಾರಣಿ , ಧೀಮಂತ ನಾಯಕ , ದಲಿತ ಸಮುದಾಯಗಳ ಆಶಾಕಿರಣರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಗೊಂಡಿದ್ದಾರೆ. 24 ವರ್ಷಗಳ ನಂತರ ಗಾಂಧೀಯೇತರ ಕುಟುಂಬದ ಸದಸ್ಯರೊಬ್ಬರು ಅಧ್ಯಕ್ಷರಾಗಿ ಆಯ್ಕೆಗೊಂಡ ಅನೇಕ ರಾಜಿಕಿಯ ವಿಷಯಕ್ಕೂ ಒಂದು ತೆರೆ ಎಳೆದಂತಾಗಿದೆ ಇನ್ನೂ ಈ ವಿಚಾರವಾಗಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನಲ್ಲಿ ದಲಿತ ಸಮುದಾಯಗಳ ಮುಖಂಡರುಗಳು ಸೇರಿ ಭೀಮ ಧ್ವಜವನ್ನು ಮತ್ತು ಜಯಶಾಲಿ ಮಲ್ಲಿಕಾರ್ಜುನ ಖರ್ಗೆಯವರ ಭಾವಚಿತ್ರವಿಡಿದು ನಗರದ ಅಂಬೇಡ್ಕರ್ ವೃತ್ತದಿಂದ ಗಾಂಧಿ ಸರ್ಕಲ್, ಜುಲೈ ನಗರ ಹೀಗೆ ನಗರದಾದ್ಯಂತ ವಿಜಯ ಘೋಷಣೆಯನ್ನು ಕೂಗುತ್ತಾ ಪಟಾಕಿ ಸಿಡಿಸಿ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳುವ ಮೂಲಕ ಹರ್ಷ ವ್ಯಕ್ತಪಡಿಸಿದರು.
ಈ ವೇಳೆ ವಿವಿಧ ದಲಿತ ಪರ ಸಂಘಟಕರು ಹಾಗೂ ದಲಿತ ಸಮುದಾಯಗಳ ಮುಖಂಡರುಗಳಾದ ಮುತ್ತುರಾಜ್ ಅಮರಾವತಿ, ರಾಜಶೇಖರ್ ದುರುಗಪ್ಪ, ಹನುಮಂತ ಮೂಳೆ, ಚಲವಾದಿ ಸಮಾಜದ ಅಧ್ಯಕ್ಷರಾದ ಯಮನಪ್ಪ.ಜಿ, ಹಾಗೂ ಇನ್ನುಳಿದ ಸದಸ್ಯರು ಭಾಗಿಯಾಗಿದ್ದರು.

ವರದಿ : ಹನುಮಂತ ದಾಸರ


Spread the love