ಪಾಂಡವಪುರ: ಎಂ.ಬೆಟ್ಟಹಳ್ಳಿ ಗ್ರಾಮದಲ್ಲಿ
ದಲಿತ ಕಾಲೋನಿಗೆ ಸಂಪರ್ಕಿಸುವ ಮಣ್ಣಿನ ರಸ್ತೆ ಪ್ರಕೃತಿ ವಿಕೋಪಗಳಾದ ಮಳೆ.ಬಿಸಿಲು ಮುಂತಾದುವುಗಳಿಗೆ ಸಿಲುಕಿ ರಸ್ತೆ ಹಾಳಾಗಿ ಹೋಗಿದ್ದು ಈಗಾ ರಸ್ತೆಯು ಮಣ್ಣಿನ ಸವಕಳಿಯಿಂದ ಹಳ್ಳ ಗುಂಡಿ ಬಿದ್ದು ವಾಹನಗಳನ್ನಾಗಲಿ ಎತ್ತಿನ ಗಾಡಿಗಳನ್ನಾಗಲಿ ಚಲಾಯಿಸಲು ಸಾಧ್ಯವಾಗದಷ್ಟು ಹಾಳಾಗಿದೆ. ಸುಮಾರು 20 ವರ್ಷಗಳಿಂದ ಈ ರಸ್ತೆಯು ಸರಿ ಮಾಡಲು ಯಾವುದೇ ಸರ್ಕಾರ ಬಂದರೂ ಯಾವುದೇ ಶಾಸಕರಿಂದಲು ಸರಿಮಾಡಲು ಸಾಧ್ಯವಾಗಿಲ್ಲ.ಚುನಾವಣೆ ಸಂದರ್ಭದಲ್ಲಿ ಬರುತ್ತರೇ ಆಶ್ವಾಸನೆ ಕೊಟ್ಟು ಹೋಗುತ್ತರೇ ಚುನಾವಣೆ ಮುಗಿದ ನಂತರ ಇತ್ತ ಕಡೆ ತಿರುಗಿಯು ನೋಡುವುದಿಲ್ಲ.
ದಲಿತ ಕಾಲೋನಿಗೆ ಹೋಗುವ ರಸ್ತೆ ಎಂಬ ಕಾರಣಕ್ಕೆ ಸ್ಥಳಿಯ ಜನಪ್ರತಿನಿಧಿಗಳಾಗಲಿ ಶಾಸಕರಾಗಲಿ ಅಧಿಕಾರಿಗಳಾಗಿ ಗಮನಹರಿಸುತ್ತಿಲ್ಲವೆಂದು ದಲಿತ ಮುಖಂಡ ಎಂ.ಎ.ಮಂಜು(ರಾಷ್ಟ್ರೀಯ ಕ್ರೀಡಾ ಪಟ್ಟು) ಸಂಶಯ ವ್ಯಕ್ತಪಡಿಸಿದರು
ನಂತರ ಮಾತನಾಡಿದ ಗ್ರಾಮಸ್ಥರಾದ ಲೋಕೇಶ್ ರವರು ಮಾತನಾಡಿ ಈ ರಸ್ತೆಯು ಹಳ್ಳ ಗುಂಡಿ ಬಿದ್ದು ರಸ್ತೆ ಹದಗೆಟ್ಟಿದೆ ರಸ್ತೆಯಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಶಾಲಾವಾಹನಗಳು ಹೋಗುತ್ತವೇ ಅದ್ದರಿಂದ ಅಪಘಾತ ಗಳು ಸಂಭವಿಸುವ ಮುನ್ನ ಎಚ್ಚರಿಕೆ ವಹಿಸಿ ಸೂಕ್ತ ರಸ್ತೆ ನಿರ್ಮಿಸಿಕೋಡಬೇಕೆಂದು ,ಈ ವಿಚಾರವಾಗಿ ಕೆ.ಬೆಟ್ಟಹಳ್ಳಿ ಪಂಚಾಯತಿ ಪಿಡಿಓ ರವರಿಗೆ ತಿಳಿಸಿದರೇ ಇದು ನಮಗೆ ಸಂಬಂಧಪಟ್ಟದಲ್ಲ ತಾಲೂಕು ಪಂಚಾಯಿತಿಗೆ ಒಳಪಡುವಂತದ್ದು ಎಂದು ಸಭಾಬು ಹೇಳುತ್ತರೇ
ದಯವಿಟ್ಟು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪರಿಶೀಲಿಸಿ ಸೂಕ್ತ ರಸ್ತೆ ನಿರ್ಮಿಸಿಕೋಡಬೇಕೆಂದು ಮನವಿ ಮಾಡಿದರು .
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಲೋಕೇಶ್ ,ಕುಮಾರ ,ಉಮೇಶ್ ಇತರರು ಹಾಜರಿದ್ದರು.
ವರದಿ : ಲೋಕರಕ್ಷಕ ಪಾಂಡುಪುರ.