Spread the love

ಕೊಟ್ಟೂರು:- ಕಲೆ ಸಂಗೀತ ಸಾಹಿತ್ಯ ಪ್ರೋತ್ಸಾಹಿಸಬೇಕು
ಎಲೆ ಮರಿ ಕಾಯಿಯಂತೆ ಇರುವ ಕಲಾವಿದರಿಗೆ ವೇದಿಕೆ ಕಲ್ಪಿಸುವುದರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶ್ಲಾಘನೀಯ ಕಾರ್ಯಕ್ರಮ ಮಾಡುತ್ತಿದೆ ಎಂದು ಕಲ್ಪತರು ಕಲಾ ಟ್ರಸ್ಟ್ ಅಧ್ಯಕ್ಷರಾದ ಚಿಗಟೀರಿ ಕೊಟ್ರೇಶಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯನಗರ ಇವರ ಸಹಯೋಗದಲ್ಲಿ ಕೊಟ್ಟೂರು ತಾಲ್ಲೂಕಿನ ಗಾಣಗಟ್ಟೆ ಗ್ರಾಮದ ಮಾಯಮ್ಮ ದೇವಿ ಆವರಣದಲ್ಲಿ ಹಮ್ಮಿಕೊಂಡಿದ್ದ ಗಿರಿಜನ ಉತ್ಸವ ಸಾಂಕ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ ಕಲೆ ಪ್ರೋತ್ಸಾಹಿಸುವ ನಿಟ್ಪಿನಲ್ಲಿ ನಿರಂತರ ಸೇವೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹ ಕಾರ್ಯಕ್ರಮವನ್ನು ಒಂದು ಹಬ್ಬದಂತೆ ಮಾಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ನೇತ್ರಾವತಿ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯ ರಂಗಭೂಮಿ ಕಲಾವಿದರು ರಾಜ್ಯ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರು ಕೆ.ಪದ್ಮಾ,ನಾಗರತ್ನಮ್ಮ ಮರಿಯಮ್ಮನಹಳ್ಳಿ ರವರು ರಂಗ ಭೂಮಿ ಬಗ್ಗೆ ಕುರಿತು ಮಾತನಾಡಿದರು.

ಅಂಜಲಿ ಹೊಸಪೇಟೆ ಭರತನಾಟ್ಯ,
ಅನುರಾಧ ಹೊಸಪೇಟೆ ಶಾಸ್ರೀಯ ಸಂಗೀತ,ಬಿ.ಶಿವಕುಮಾರಿ ಸುಗಮ ಸಂಗೀತ, ಪುಷ್ಪ ಮತ್ತು ತಂಡ ಸಮೂಹ ನ್ಯತ್ಯ,
ಪೂಜಾ ತುಮಕೂರು ಕುಣಿತ, ಶಶಿಕಲಾ ಶೃಂಗೇರಿ
ವೀರಗಾಸೆ ನೃತ್ಯ,
ರಾಮಕ್ಕ ಮರಿಯಮ್ಮನಹಳ್ಳಿ ಜೋಗತಿ ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ನಾಗರತ್ನಮ್ಮ ಮರಿಯಮ್ಮನಹಳ್ಳಿ
ರಂಗಗೀತೆಗಳು,ಪಿ.ಪದ್ಮಾ ಕೂಡ್ಲಿಗಿ
ಬಯಲಾಟ ಪದಗಳು ನಡೆಸಿಕೊಟ್ಟರೆ, ರಾಧ ಡಿ ಇವರಿಂದ ಜಾನಪದ ಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮೆರುಗು ತಂದರು.ಮಾರುತಿ ಬೇವೂರು
ತಂಡದಿಂದ ಐತಿಹಾಸಿಕ ರಕ್ತರಾತ್ರಿ ನಾಟಕ ಪ್ರದರ್ಶನಗೊಂಡಿತು.
ಈ ಸಂಧರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೌಭಾಗ್ಯ,ಕಿರಣ್ ಇತರರು ಇದ್ದರು.

ವರದಿ : ವಿಷ್ಣು .ಎಲ್.ಕೊಟ್ಟೂರು


Spread the love