Spread the love

ಇಲ್ಲೊಬ್ಬ ಕವಿ,ಕಲಾವಿದ,ದನಗಾಯಿಯೊಬ್ಬ ಕನ್ನಡ ಚಲನಚಿತ್ರಗಳನ್ನು ಉಲ್ಟಾ ಹಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.
ಹೌದು ಪಾಂಡವಪುರ ತಾಲ್ಲೂಕಿನ ಬೇವಿನಕುಪ್ಪೆ ಗ್ರಾಮದ ಕವಿ, ಕಲಾವಿದ ಎಂದೇ ಖ್ಯಾತಿ ಪಡೆದ ಪ್ರಕಾಶ್ ಎಂಬಾತ ಹಸು ಮೇಯಿಸ್ಕೊಂಡು ಕನ್ನಡ ಚಲನಚಿತ್ರಗೀತೆಗಳನ್ನು ಉಲ್ಟಾ ಹಾಡುವುದರ ಮೂಲಕ ಮಂಡ್ಯ ಜಿಲ್ಲೆಯಾದ್ಯಂತ ಉಲ್ಟಾ ಸಿಂಗರ್ ಎಂದೇ ಮನೆ ಮಾತಾಗಿದ್ದಾನೆ. ಯಾವುದೇ ಭಾಷೆಯ ಹಾಡುಗಳನ್ನು ಹಾಡಿನ ಪುಸ್ತಕಗಳಲ್ಲಿ ನೋಡಿಕೊಂಡು ಹಾಡುವುದೆ ಕೆಲವರಿಗೆ ಕಷ್ಟ ಸಾಧ್ಯ. ಆದರೆ ದ್ವೀತಿಯ ಪಿಯುಸಿ ವಿಧ್ಯಾಭ್ಯಾಸ ಮಾಡಿರುವ ಪ್ರಕಾಶ್ ಹಸು ಮೇಯಿಸ್ಕೊಂಡು ಉಲ್ಟಾ ಹಾಡುವುದನ್ನು ಕರಗತ ಮಾಡಿಕೊಂಡಿರುವ ಪ್ರಕಾಶ್ ವಿಭಿನ್ನ ಪ್ರತಿಭೆಯಾಗಿ ಕಾಣಿಸಿಕೊಳ್ಳತ್ತಾರೆ. ಮೂಲತ ದನಗಾಯಿ ಆಗಿರುವ ಪ್ರಕಾಶ್ ಕನ್ನಡ ಚಲನಚಿತ್ರಗೀತೆಗಳನ್ನು ನಿರರ್ಗಳವಾಗಿ ಉಲ್ಟಾ ಹಾಡುವುದರ ಮೂಲಕ ಮಂಡ್ಯ ಜಿಲ್ಲೆಯಾದ್ಯಂತ ಉಲ್ಟಾ ಸಿಂಗರ್ ಎಂದೆ ಮನೆಮಾತಾಗಿದ್ದಾನೆ. ಇವರ ಉಲ್ಟಾ ಹಾಡುಗಳು ಪೇಸ್ ಬುಕ್ , ಸೇರಿದಂತೆ ವಿಧದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬೇವಿನಕುಪ್ಪೆ ಪ್ರಕಾಶ್ ಅವರು ಕೇವಲ ಗಾಯಕರಾಗಿರದೆ ಕವಿಯು ಹೌದು.ಕುಳಿತಲ್ಲಿಯೆ ಕವನ ರಚಿಸುವ ಚಾಕಚಕ್ಯತೆ ಹೊಂದಿರುವ ಪ್ರಕಾಶ್ ಈಗಾಗಲೇ ತಾಲ್ಲೂಕು. ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕವಿಗೋಷ್ಟಿಗಳಲ್ಲಿ ಭಾಗವಹಿಸಿ ರೈತರ ಪರ ಕವನ ವಾಚಿಸುವುದರ ಮೂಲಕ ಕಂಚಿನ ಕಂಠದ ಕವನ ವಾಚನಗಾರ ಎಂದೇ ಖ್ಯಾತಿಯಾಗಿ ದಿವಂಗತ ಪುಟ್ಟಣ್ಣಯ್ಯರವರಿಂದ ರೈತಕವಿ ಎಂಬ ಬಿರುದನ್ನು ಪಡೆದಿದ್ದಾರೆ. ಪ್ರಕಾಶ್ ಅವರು ” ಕನ್ನಡದ ತೇರು ಮತ್ತು ರೈತನ ಬದುಕು” ಎಂಬ ಕವನ ಸಂಕಲನಗಳನ್ನು ಹಾಗೂ “ನಗುವೆ ಮಾಣಿಕ್ಯ” ಎಂಬ ಹನಿಗವನ ಪುಸ್ತಕಗಳನ್ನು ಹೊರತಂದಿದ್ದಾರೆ. ಈ ಪುಸ್ತಕಗಳನ್ನು ಹೊರ ತರಲು ತನ್ನ ಕುಟುಂಬಕ್ಕೆ ಆಧಾರ ಸ್ಥಂಭವಾಗಿದ್ದ ತನ್ನೆರಡು ಹಸುಗಳನ್ನು ಮಾರಿ ಸಾಹಿತ್ಯಕ್ಕೆ ಸಾಹಿತ್ಯ ಸೇವೆಗೈದು ಮಾರಿದ ಹಳ್ಳಿ ಹೈದನಾಗಿ ಹೊರಹೊಮ್ಮಿದ್ದಾರೆ ಇಂತಹ ಎಲೆ ಮರೆ ಕಾಯಿಯ ಪ್ರತಿಭೆಗಳನ್ನು ಗುರುತಿಸಿ ಸಾಹಿತ್ಯ ಪರಿಷತ್ತು ,ಜನಪ್ರತಿನಿದಿಗಳು, ಸಮಾಜ ಸೇವಕರು ಆರ್ಥಿಕ ವಾಗಿ ಪ್ರೋತ್ಸಾಹಿಸಿದರೆ ಇಂತಹ ಎಷ್ಟೋ ಪ್ರತಿಭೆಗಳು ಬೆಳಕಿಗೆ ಬರುತ್ತಾರೆ ಎಂದು ಸ್ಥಳೀಯರ ಮತ್ತು ನಮ್ಮ ವಾಹಿನಿಯ ಆಶಯವಾಗಿದೆ.

ವರದಿ : ಲೋಕರಕ್ಷಕ ಪಾಂಡುಪುರ


Spread the love