Spread the love

ತುಮಕೂರು ಅಕ್ಟೋಬರ್ 20: ತುಮಕೂರು ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಬುಧವಾರ ರಾತ್ರಿ ಸುರಿದ ಸುದೀರ್ಘ ಜೋರು ಮಳೆಯಿಂದಾಗಿ ತುಮಕೂರು ಮಾರ್ಗದ ರಾ‍ಷ್ಟ್ರೀಯ ಹೆದ್ದಾರಿ (NH 4) ಗಳು ಜಲಾವೃತವಾಗಿದೆ. ತುಮಕೂರಿನ ಹೊರ ವಲಯಗಳಿಂದ ಹಾದು ಹೋಗುವ ಬೆಂಗಳೂರು – ತುಮಕೂರು – ಪೂನಾ ಸೇರಿದಂತೆ ನಾಡಿನ ಹೊರ ಜಿಲ್ಲೆಗಳಿಗೆ ಹಾದು ಹೋಗುವ ತುಮಕೂರು-ಚಿತ್ರದುರ್ಗ-ದಾವಣಗೆರೆ -ಹಾವೇರಿ-ಹುಬ್ಬಳ್ಳಿ-ಬೆಳಗಾವಿ ಪ್ರಮುಖ ರಸ್ತೆಗಳು ಬಾರಿ ಮಳೆಗೆ ಜಲಾವೃತ ಗೊಂಡಿದ್ದವೆ.

ತುಮಕೂರು ತಾಲೂಕಿನ ಅಂಚಿಹಳ್ಳಿ ಗ್ರಾಮದಲ್ಲಿ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಕೆರೆ ಮಳೆಗೆ ಪೂರ್ತಿ ತುಂಬಿದ್ದು, ಹೆಚ್ಚುವರಿ ಕೆರೆ ನೀರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದು ಸಂಗ್ರಹವಾಗಿದ್ದ ಕಾರಣ ಹೆದ್ದಾರಿಯಲ್ಲಿ ನದಿಯನ್ನೇ ಬಿಂಬಿಸುವ ರೀತಿಯಲ್ಲಿ ನೀರು ಹರಿದು ಹೋಗವಂತ ವ್ಯವಸ್ಥೆ ನಿರ್ಮಾಣ ವಾಗಿದೆ. ಇದರಿಂದ ಗುರುವಾರ ಈ ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೇ ವಾಹನಗಳು ನಿಂತು ಸಂಚಾರ ಅಸ್ತವ್ಯಸ್ತವಾಗಿದೆ. ಇನ್ನು ತುಮಕೂರಿನ ಹೆಬ್ಬಾಕ ಕೆರೆ ಏರಿ ಒಡೆದು ಹರಿದಿದೆ. ಪರಿಣಾಮ ರಾಷ್ಟ್ರೀಯ ಹೆದ್ದಾರಿ-4ರ ಮೇಲೆಲ್ಲ ನೀರು ಹರಿದು ಆವಾಂತರಗಳನ್ನು ಸೃಷ್ಟಿಸಿದೆ ಬೆಂಗಳೂರಿನಿಂದ – ಪುಣೆ ಕಡೆಗೆ ತೆರಳಲು ಇರುವ ಈ ಮಾರ್ಗದ ರಸ್ತೆಯಲ್ಲಿ ಸುಮಾರು ಒಂದೆರಡು ಅಡಿಯಷ್ಟು ನೀರು ನಿಂತಿದ್ದು. ವಾಹನ ಸವಾರರಿಗೆ ಪರದಾಡುವ ಪಜೀತಿ ಸೃಷ್ಟಿಸಿದೆ. ಈ ಮಾರ್ಗದಲ್ಲಿ ಎರಡು ಬದಿಗಳಲ್ಲಿ ನಿತ್ಯ ಲಕ್ಷಗಟ್ಟಲೆ ವಾಹನಗಳು ಸಂಚರಿಸುತ್ತಿದ್ದು. ಗುರುವಾರ ಮಳೆಯಿಂದಾಗಿ ಕಾರು, ಬಸ್‌, ಲಾರಿ ಸವಾರರು ರಸ್ತೆ ದಾಟಲು ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ .

ಬಾರಿ ಮಳೆಯಿಂದ ಬೆಳೆಗೂ ಹಾನಿ : ರೈತ ಕಂಗಾಲು

ಹೆದ್ದಾರಿ ಮಾತ್ರವಲ್ಲ ತುಮಕೂರಿನ ಗ್ರಾಮಾಂತರ ಪ್ರದೇಶವಾದ ಕೋರಾ, ಹೆಬ್ಬಾಕ ಕೆರೆ ಸುತ್ತಮುತ್ತಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆಗಳಿಗೆ ಹಾನಿ ಉಂಟಾಗಿದೆ. ಅಡಿಕೆ, ರಾಗಿ, ತೆಂಗು ಬೆಳೆಗಳ ನಡುವೆ ಮೂರ್ನಾಲ್ಕು ಅಡಿಗಳಷ್ಟು ನೀರಲ್ಲಿ ನಿಂತಿವೆ. ವರ್ಷಪೂರ್ತಿ ದುಡಿದ ರೈತ ಕಂಗಾಲಾಗಿದ್ದು, ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾನೆ. ಹಿಂದೆ ಬರ ಪರಿಹಾರಕ್ಕೆ ಮೊರೆ ಇಟ್ಟ ರೈತ ಇಂದು ನೆರಪರಿಹಾರಕ್ಕೆ ಸರ್ಕಾರದಿದ್ದರು ಕೈ ಚರ್ಚೆ ನಿಲ್ಲುವಂತಾಗಿದೆ.

ವರದಿ : ಅಜಿತ್ ಕುಮಾರ್ ಬೆಳ್ಳಿಬಟ್ಲು ಓ


Spread the love