ಕೊಟ್ಟೂರು:- ಉತ್ತಮ ಆರೋಗ್ಯವಂತರಾಗಿ ಉತ್ತಮ ಗುಣಮಟ್ಟದ ಆಹಾರ ಸೇವನೆಯಿಂದ ಪ್ರತಿನಿತ್ಯ ಬೆಳಿಗ್ಗೆ ಸಾಯಂಕಾಲ ವ್ಯಾಯಮ,ಯೋಗ ಆಟ ಕ್ರೀಡೆ,ಇತ್ಯಾದಿ ಚಟುವಟಿಕೆಗಳನ್ನು ರೂಢಿಸಿಕೊಂಡರೆ ಸದೃಡ ಆರೋಗ್ಯವಂತರಾಗುತ್ತಾರೆ ಎಂದು ಆಡಳಿತ ವೈದ್ಯಧಿಕಾರಿಗಳಾದ ಬದ್ಯನಾಯ್ಕ್ ಹೇಳಿದರು.
ಸಮುದಾಯ ಅರೋಗ್ಯ ಕೇಂದ್ರ ಕೊಟ್ಟೂರು,ನ್ಯಾಷನಲ್ ಏಡ್ಸ್ ಕಂಟ್ರೋಲ್ ಅರ್ಗನೈಜೆಶನ್,ಕರ್ನಾಟಕ ರಾಜ್ಯ ಏಡ್ಸ್ ಪ್ರಿವೇನ್ಶನ್ ಸೊಸೈಟಿ
ಮುತ್ತೂಟ್ ಫೈನಾನ್ಸ್ ಕೊಟ್ಟೂರು
ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಪಟ್ಟಣದ ತೇರು ಬಸವೇಶ್ವರ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ
ಸಮುದಾಯ ಆಧಾರಿತ ತಪಾಸಣಾ ಶಿಬಿರ ಚಾಲನೆ ನೀಡಿ ಅವರು ಮಾತನಾಡಿದರು.
ವೈದ್ಯರಲ್ಲಿ ಯಾವುದೇ ರೀತಿಯಲ್ಲಿ ಅಂಜದೆ ಮುಕ್ತವಾಗಿ ಆರೋಗ್ಯದ ಸಮಸ್ಯೆ ಹೇಳಿಕೊಂಡರೆ ಸೂಕ್ತ ಸಲಹೆ ನೀಡಬಹುದು ಎಂದರು. ಉಚಿತ ತಪಾಸಣೆ
ಶಿಬಿರದಲ್ಲಿ 146 ಕ್ಕೂ ಹೆಚ್ಚು ಜನರು ಭಾಗವಹಿಸಿ ಬಿಪಿ,ಸಕ್ಕರೆ,ಕಣ್ಣು ತಪಾಸಣೆ ಮಾಡಿಸಿಕೊಂಡರು.116 ಕ್ಕೂ ಹೆಚ್ಚು ಜನರು ಹೆಚ್ ಐ ವಿ ,
ಪರೀಕ್ಷೆ ಮಾಡಿಸಿಕೊಂಡರು. ಯಾವುದೇ ಹೆಚ್ ಐ ವಿ
ಪಾಸಿಟಿವ್ ಪ್ರಕರಣಗಳು ವರದಿಯಾಗಿರುವುದಿಲ್ಲ. ಸ್ವಯಂ ಪ್ರೇರಿತ ರಕ್ತದಾನ ತಪಾಸಣೆ ಹಾಗೂ ರಕ್ತದಾನವನ್ನು ಸಾರ್ವಜನಿಕರು
ಸ್ವಯಂ ಪ್ರೇರಿತವಾಗಿ ಭಾಗವಹಿಸಿ 20ಕ್ಕೂ ಹೆಚ್ಚು ದಾನಿಗಳು ರಕ್ತದಾನ ಮಾಡಿದರು.315 ಕ್ಕೂ ಹೆಚ್ಚು ಜನರಿಗೆ ಹೆಚ್ ಐ ವಿ ,ಬಿಪಿ, ಶುಗರ್, ಕ್ಷಯ ರೋಗ, ಮಲೇರಿಯಾ, ಕಣ್ಣಿನ ತಪಾಸಣೆ ಕುರಿತು ಮಾಹಿತಿ ತಿಳಿಸಲಾಹಿತು. ಈ ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಧಿಕಾರಿಗಳಾದ ಬದ್ಯನಾಯ್ಕ್, ವೈದ್ಯಧಿಕಾರಿಗಳಾದ ಸಂತೋಷ್, ಆಪ್ತ ಸಮಾಲೋಚಕರುಗಳಾದ ಮಹಾಂತೇಶ್,ಮರುಳಾರಾಧ್ಯ, ಚನ್ನಯ್ಯ.ಕಿರಿಯ ಪ್ರಯೋಗ ಶಾಲಾ ತಂತ್ರಜ್ಞಾರಾದ ಬಸವರಾಜ್, ವಿದ್ಯಾ, ನೀರಿಕ್ಷಣ ಅರೋಗ್ಯ ಅಧಿಕಾರಿಗಳಾದ ಶೀಲಾ,ಸರಳ, ಹಿರಿಯ ಅರೋಗ್ಯ ಅಧಿಕಾರಿಗಳಾದ ಪತ್ರೆಪ್ಪ, ಹಾಗೂ ನಾಗವೇಣಿ ಅರುಣ್ ಮುಂತಾದವರು ಭಾಗವಹಿಸಿದ್ದರು.
ರಕ್ತದಾನ ಮಾಡುವುದರಿಂದ ಯಾವುದೆ ರೀತಿಯ ತೊಂದರೆ ಆಗುವುದಿಲ್ಲ .ಪ್ರತಿಯೊಬ್ಬರಿಗೂ ರಕ್ತದ ಅವಶ್ಯಕತೆ ಇರುತ್ತದೆ.
ರಕ್ತದಾನ ಮಾಡುವುದರಿಂದ ಒಂದು ಜೇವ ಉಳಿಯುತ್ತದೆ ಎಂದು ಕಲ್ಪತರು ಕಲಾ ಟ್ರಸ್ಟ್ ಅಧ್ಯಕ್ಷರಾದ ಚಿಗಟೇರಿ ಕೊಟ್ರೇಶ್ ರವರು
ಸ್ವಯಂ ಪ್ರೇರಿತವಾಗಿ ಬಂದು ರಕ್ತದಾನ ಮಾಡುವುದರ ಮೂಲಕ ಅನೇಕರಿಗೆ ಮಾದರಿಯಾದರು.
ವರದಿ : ವಿಷ್ಣು . ಎಲ್. ಕೊಟ್ಟೂರು.