ಕೊಟ್ಟೂರು:- ಬೇಡಿದ ವರ ಕೊಡುವ, ಲಕ್ಷಂತಾರ ಭಕ್ತರ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಅನುಗ್ರಹದಿಂದ ಈ ವರ್ಷ ಸಮೃದ್ಧ ಮಳೆಯಾಗಿ 13ವರ್ಷಗಳ ನಂತರ ಕೆರೆ ತುಂಬಿರುವುದು ಸಂತೋಷ ತಂದಿದೆ,ಕೊಟ್ಟೂರು ಕೆರೆಗೆ
ಗುರುವಾರ ಬಾಗಿನ ಅರ್ಪಿಸಿ ಸಂಸದರಾದ ವೈ ದೇವೇಂದ್ರಪ್ಪ ನವರು ಮಾತನಾಡಿದರು.
ಶ್ರೀ ಗುರು ಮರಿ ಕೊಟ್ಟೂರೇಶ್ವರ ಸ್ವಾಮಿ ಏಳು ದಿನಗಳ ಕಾಲ ಈ ಕೆರೆಯಲ್ಲಿ ಮುಳುಗಿದ್ದರು ಐತಿಹಾಸಿಕ ಹಿನ್ನಲೆಯನ್ನು ನೆನೆದು ಕೆರೆ ವಿಕ್ಷಣೆ ಮಾಡಿ ಎರಡನೇ ಗೇಟ್ ಬಳಿ ನೀರು ಹೊರಗಡೆ ಹೋಗುತ್ತಿರುವುದನ್ನು ಗಮನಿಸಿ ತಕ್ಷಣವೇ ಈ ಗೇಟ್ ನಿಂದ ನೀರು ಹೋಗದಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಹೇಳಿದರು. ಕೆರೆ ವಿಕ್ಷಣೆಗೆ
ಸಾರ್ವಜನಿಕರಿಗೆ ಅನುಕೂಲ ಮಾಡುವಂತೆ ಸೂಚನೆ ನೀಡಿ,
ತಾಲ್ಲೂಕಿನಲ್ಲಿ ಅತಿ ದೊಡ್ಡದಾದ ಕೆರೆ ಇದು.ಕೊಟ್ಟೂರು ಕೆರೆ ತುಂಬಿಸುವ ಯೋಜನೆ ಡಿ.ಪಿ.ಅರ್ ಹಂತದಲ್ಲಿ ಇದ್ದು,ನಮ್ಮ ಸರ್ಕಾರ ಅದನ್ನು ಮಾಡುತ್ತಿದೆ ಆದರೆ ಹಗರಿ ಬೊಮ್ಮನಹಳ್ಳಿ ಶಾಸಕ ಭಿಮನಾಯ್ಕ್ ಕೂಡ್ಲಿಗಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಕೊಟ್ಟೂರು ಮಾರ್ಗವಾಗಿ ಹೋಗಿರುವುದನ್ನು ಗಮನದಲ್ಲಿ ಇಟ್ಟುಕೊಂಡು ಕೊಟ್ಟೂರು ಕೆರೆ ತುಂಬಿಸಲು ಅಹೋರಾತ್ರಿ ಪ್ರತಿಭಟನೆ ನಡೆಸಲು ಮುಂದಾಗಿರುವುದು ತಪ್ಪು ಎಂದರು.
ಈ ಸಂಧರ್ಭದಲ್ಲಿ ತಹಶೀಲ್ದಾರ್ ಎಂ.ಕುಮಾರಸ್ವಾಮಿ,ಜಿಲ್ಲಾಧ್ಯಕ್ಷರಾದ
ಚನ್ನಬಸವನಗೌಡ,ಎಪಿಎಂಸಿ ಅಧ್ಯಕ್ಷರಾದ ಉಮೇಶ್ ಪೂಜಾರ್,ಉಪಾಧ್ಯಕ್ಷರಾದ ಜೆ.ಸಿದ್ದೇಶ್ ಮಂಗಾಪುರ,ಹಿರಿಯ ಮುಖಂಡ ತಿಂದಪ್ಪ,ನಗರ ಘಟಕ ಅಧ್ಯಕ್ಷರಾದ ಬಿ.ಅರ್ ವಿಕ್ರಂ,ವಿರೇಶ್ ಗೌಡ,ಎಂ.ಎಂ.ಜೆ ವಾಗಿಶ್,ಹ್ಯಾಳ್ಯಾ ಬಸವರಾಜ,ಕೊಟ್ಟೂರಿನ ಎಲ್ಲಾ ಬಿಜೆಪಿ ಯುವ ಮುಖಂಡರು ಮಹಿಳಾ ಪದಾಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.
ವರದಿ : ವಿಷ್ಣು. ಎಲ್ .ಕೊಟ್ಟೂರು