ಕೊಟ್ಟೂರು:- ಕೆರೆಗೆ ಇಂದು ಉಜ್ಜಿನಿ ಪೀಠದ ಜಗದ್ಗುರುಗಳು ಶ್ರೀ ಗಳಿಂದ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ನೆರವೇರಿಸಿದರು.
ನಂತರ ಮಾತನಾಡಿದ ಶ್ರೀಗಳು ಈ ಕೊಟ್ಟೂರಿನ ಕೆರೆಯು ಐತಿಹಾಸಿಕ ಇತಿಹಾಸ ಹೊಂದಿರುವ ಒಂದು ಕೆರೆಯಾಗಿದೆ.ಈ ಪ್ರಕೃತಿಯ ಮಡಿಲಿನಲ್ಲಿ ನೀರಿನ ಮಹತ್ವ ಹಾಗೂ ಪ್ರತಿಯೊಂದು ಜೀವಿಗಳಿಗೂ ನೀರು ಬಹಳ ಮುಖ್ಯವಾದದ್ದು.ಈ ಜಗತ್ತಿನ ಮೂಲ ಧಾತು ಎಂದರೆ ಅದು ಜಲ. ಜಲದಿಂದಲೇ ಮೂಲ ಸೃಷ್ಟಿ ಆಯಿತು ಎಂದು ವೇದದಲ್ಲಿ ಉಲ್ಲೇಖಿಸಿದ್ದಾರೆ.
ಈ ಭೂಮಂಡಲವನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದೆ ಆದರೆ ಮೂರು ಭಾಗ ಜಲದಿಂದಲೆ ಕೂಡಿದೆ ಒಂದು ಭಾಗ ಮಾತ್ರ ಭೂಮಿಯಿಂದ ಕೂಡಿದೆ.13 ವರ್ಷಗಳ ನಂತರ ನಮ್ಮ ಕೊಟ್ಟೂರು ಕೆರೆ ತುಂಬಿ ಕೊಡಿ ಬಿದ್ದಿರುವುದರಿಂದ ರೈತ ವರ್ಗದವರು ಸಡಗರ ಸಂಭ್ರಮದಿಂದ ಇದ್ದಾರೆ. ಅಂತರ್ಜಲ ಹೆಚ್ಚಿ ಸಕಲ ಜಲಚರ ಜೀವಿ ರಾಶಿಗಳು ಸಮೃದ್ಧಿಯಾಗಿ ಜೀವಿಸುತ್ತವೆ.ಪ್ರತಿ ವರ್ಷ ಕೊಟ್ಟೂರಿನ ಕೆರೆಯು ತುಂಬಲಿ ಸಮೃದ್ಧಿ ಜೀವನ ಸಾಗಲಿ ಎಂದು ಶ್ರೀಗಳು ಹೇಳಿದರು.
ಈ ಸಂದರ್ಭದಲ್ಲಿ ಡೋಣುರೂ ಚಾನುಕೊಟಿ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಶ್ರೀಗಳು,ಕೂಡ್ಲಿಗಿಯ ಪ್ರಶಾಂತ್ ಶಿವಾಚಾರ್ಯ ಶ್ರೀಗಳು, ನಂದಿಪುರದ ಮಹೇಶ್ವರ ಸ್ವಾಮೀಜಿಗಳು,ಅಡಿವಿಹಳ್ಳಿಯ ಹಾಲಸ್ವಾಮಿ ಶ್ರೀಗಳು,ಜಿ.ಪಂ.ಮಾಜಿ ಸದಸ್ಯರಾದ ಎಂ.ಎಂ.ಜೆ ಹರ್ಷವರ್ಧನ್,ಪ.ಪಂ.ಅಧ್ಯಕ್ಷೆ ಶ್ರೀ ಭಾರತಿ ಸುಧಾಕರ್ ಪಾಟೀಲ್,ಪ.ಪಂ.ಸದಸ್ಯರಾದ ವಿನಯ್ ಕುಮಾರ್,ತೆಗ್ಗಿನಕೆರಿ ಜಗದೀಶ್,ವಿದ್ಯಾಶ್ರೀ ಮೇಘರಾಜ,ಅಡಿಕೆ ಮಂಜುನಾಥ್, ಎ.ಸಂತೋಷ್ ಕುಮಾರ್,ಹಾಗೂ ಕೊಟ್ಟೂರಿನ ಹಿರಿಯ ನಾಗರಿಕರು ಉಪಸ್ಥಿತರಿದ್ದರು.
ವರದಿ : ವಿಷ್ಣು . ಎಲ್. ಕೊಟ್ಟೂರು