Spread the love

ಪಾಂಡವಪುರ: ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಪಟ್ಟಣದ ಐದು ದೀಪ ವೃತ್ತದಲ್ಲಿ ಜಮಾವಣೆಗೊಂಡ ನೂರಾರು ಕಾರ್ಯಕರ್ತರು ಮಲ್ಲಿಕಾರ್ಜುನ ಖರ್ಗೆ ,ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರಿಗೆ ಜೈಕಾರ ಕೂಗಿ ಕನ್ನಡಿಗ ಪಕ್ಷದ ಉನ್ನತ ಹುದ್ದೆ ಅಲಂಕರಿಸಿದಕ್ಕೆ ಸಂತಸ ವ್ಯಕ್ತಪಡಿಸಿದರು.

ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ರವಿಂದ್ರ ಮಾತನಾಡಿ,ಮಲ್ಲಿಕಾರ್ಜುನಾ ಖರ್ಗೆ ಅವರು ತಮ್ಮ ಕಾರ್ಯವೈಖರಿ ಮತ್ತು ಪಕ್ಷದ ನಿಷ್ಠೆಯಿಂದ ಪಕ್ಷದ ಅತ್ಯಂತ ದೊಡ್ಡ ಹುದ್ದೆ ಅಲಂಕರಿಸಿದ್ದಾರೆ.ತಮಗೆ ಸಿಕ್ಕಿರುವ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುತ್ತಾರೆ ಎಂಬ ವಿಶ್ವಾಸ ಇದೆ‌.ಪಕ್ಷ ಕೂಡ ಪ್ರಮುಖ ವ್ಯಕ್ತಿಯಾಗಿ ಖರ್ಗೆ ಅವರನ್ನು ಆಯ್ಕೆ ಮಾಡಿದೆ .ದಲಿತರು ಮುಖ್ಯಮಂತ್ರಿ ಆಗಬೇಕು ಎಂಬ ಕೂಗು ಎದ್ದಿದ್ದಾಗಲೂ ದಲಿತ ಎಂಬ ಕಾರಣಕ್ಕೆ ನನಗೆ ಮುಖ್ಯಮಂತ್ರಿ ಹುದ್ದೆ ನಿಡುವುದಾದರೆ ಆ ಹುದ್ದೆ ನನಗೆ ಬೇಡ ಎಂದು ನಯವಾಗಿ ಹೇಳಿದ್ದರು.ಇಂತಹ ವ್ಯಕ್ತಿತ್ವದ ಖರ್ಗೆ ಪಕ್ಷದ ಪ್ರಧಾನ ಸ್ಥಾನ ಅಲಂಕರಿಸಿರುವುದು ನಮಗೆ ಹೆಮ್ಮ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಖರ್ಗೆ ಅವರನ್ನು ಗುರುತಿಸಿ ಅಸೆಂಬ್ಲಿ ಟಿಕೆಟ್ ನೀಡಿ ರಾಜಕೀಯ ವಾಗಿ ಬೆಳಸಿದರು.ಅರಸು ಮತ್ತು ಇಂದಿರಾ ಗಾಂಧಿ ಅವರ ನಡುವೆ ಮನಸ್ತಾಪವುಂಟಾದಗಲೂ ಖರ್ಗೆ ಅವರು ಅರಸು ಪರವಾಗಿ ನಿಲ್ಲದೆ ಪಕ್ಷನಿಷ್ಠೆ ಮೆರೆದರು ಇದು ಖರ್ಗೆ ಅವರ ವ್ಯಕ್ತಿತ್ವ ಎಂದು ವಿವರಿಸಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನಗನಹಳ್ಳಿ ಕೃಷ್ಣೇಗೌಡ,ಮುಖಂಡರಾದ ವಕೀಲ ಮುರಿಳೀಧರ್,ಕೆ.ಬಿ.ರಾಮು,ಆಶಾ ಲವಕುಮಾರ್,ಲೋಹಿತ್,ಅಂತನಹಳ್ಳಿ ಬಸವರಾಜು, ಪುರಸಭೆ ಸದಸ್ಯರಾದ ಜಯಲಕ್ಷಮ್ಮ,ಉಮಾಶಂಕರ್,ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಹುಚ್ಚೆಗೌಡ, ಸಿದ್ದಲಿಂಗಯ್ಯ, ದಯಾನಂದ ಬಾಬು, ಚಂದ್ರಶೇಖರ್, ಹಾಳಯ್ಯ ಇತರರು ಇದ್ದರು.

ವರದಿ : ಲೋಕರಕ್ಷಕ ಪಾಂಡವಪುರ


Spread the love