Spread the love

ಪಾಂಡುವಪುರ : ಪಟ್ಟಣದಲ್ಲಿ,ಶ್ರೀ ಕ್ಷೇತ್ರ ಸಿದ್ದಗಂಗಾ ಮಠದ, ರಥಕ್ಕೆ ಭಕ್ತರ ಸ್ವಾಗತ,
ಮಂಡ್ಯ ಜಿಲ್ಲೆ ,ಪಾಂಡುಪುರ ಪಟ್ಟಣದಲ್ಲಿ ಸಿದ್ದಗಂಗಾ ಮಠದ ರಥಕ್ಕೆ ಬೇಬಿ,ಬೆಟ್ಟ ಶ್ರೀರಾಮ ಯೋಗೇಶ್ವರ ಮಠಾಧ್ಯಕ್ಷರಾದ ಶ್ರೀ ಶ್ರೀ ಶಿವ ಬಸವ ಸ್ವಾಮೀಜಿಯವರು ರಥಕ್ಕೆ ಪುಷ್ಪಾರ್ಚನೆ ನೀಡುವ ಮುಖಾಂತರ ಬರಮಾಡಿಕೊಂಡರು, ವೀರಶೈವ ಲಿಂಗಾಯತ ಮಹಾ ವೇದಿಕೆಯ ರಾಜ್ಯಧ್ಯಕ್ಷರಾದ ಪ್ರಶಾಂತ್, ಕಲ್ಲೂರ್ ರವರ ಸಹಯೋಗದೊಂದಿಗೆ ಜಿಲ್ಲಾಧ್ಯಕ್ಷರಾದ,ಹಾಲ್ಕೆರೆ.ಎ ಎಸ್ ಮಾದೇಶ್, ರವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಬಹುತೇಕ ಗ್ರಾಮಗಳಿಗೆ ರಥವು ಸಾಗಲಿದ್ದು ನ.21ರಂದು ಪ್ರಮಪೂಜ್ಯ ತ್ರಿವಿಧ ದಾಸೋಹಿ ಡಾ,ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಜಿಯವರ ಗದ್ದಿಗೆಗೆ ತೃತೀಯ ವರ್ಷದ ಅಂಗವಾಗಿ,ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮಕ್ಕೆ ಭಕ್ತರನ್ನು ಸ್ವಾಗತಿಸಲು ರಥದ ಮುಖಾಂತರ ಜಿಲ್ಲೆಯ ಬಹುತೇಕ ಗ್ರಾಮಗಳಿಂದ ಭೇಟಿ ನೀಡಲಾಗುತ್ತಿದೆ ಭಕ್ತರು ತನು ಮನ ಧನವನ್ನು ಶ್ರೀಮಠಕ್ಕೆ ಅರ್ಪಿಸಬೇಕು ನ.21 ರಂದು ಬೆಳಿಗ್ಗೆ 5:30 ರಿಂದ ಮಧ್ಯಾಹ್ನ 12:30 ಮಹಾಮಂಗಳಾರತಿ ಪರಮಪೂಜ್ಯರ ಪುತ್ತಳಿಯ ಅದ್ದೂರಿ ಮೆರವಣಿಗೆ ಸಂಜೆ 6 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ ಪೂಜ್ಯರ ಗದ್ದಿಗೆಗೆ ,ಬಿಲ್ವಾರ್ಜನೆ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಲು ಅವಕಾಶವಿರುತ್ತದೆ ಎಂದು ಬೇಬಿ ಬೆಟ್ಟದ ಶ್ರೀ ಶಿವಬಸವ ಸ್ವಾಮೀಜಿ ರವರು ತಿಳಿಸಿದರು ಜಿಲ್ಲಾಧ್ಯಕ್ಷ ಮಾದೇಶ್ ಮಾತನಾಡಿ ಪರಮಪೂಜ್ಯರ ಗದ್ದಿಗೆ ಪುಷ್ಪಾರ್ಚನೆ, ದರ್ಶನ,ಮಾಡುವ ಭಾಗ್ಯವನ್ನು ಎಲ್ಲರೂ ಪಡೆದುಕೊಳ್ಳಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ ಆದ್ದರಿಂದ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ 30, 10, 22 ರ ಭಾನುವಾರ ಮಂಡ್ಯ ನಗರದಲ್ಲಿ ಬೆಳಿಗ್ಗೆ 10, ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಮಹಾವೀರ ಸರ್ಕಲ್ ಅವರಿಗೆ ಸಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅನೇಕ ಮಠಾಧೀಶ್ವರರು ರಾಜಕಾರಣಿಗಳ ಮುಖಂಡರ ರಥಕ್ಕೆ ಸ್ವಾಗತವನ್ನು ನೀಡಲಿದ್ದಾರೆ, ಮೆರವಣಿಗೆಯಲ್ಲಿ ಜಿಲ್ಲೆಯ ಎಲ್ಲಾ ಭಕ್ತರು ಆಗಮಿಸಬೇಕೆಂದು ಕೋರಿದರು, ಕರ್ನಾಟಕ ರತ್ನ ತ್ರಿವಿಧ ದಾಸೋಹಿಗಳು ಪರಮ ಪೂಜ್ಯರು ವಿಶ್ವಗುರು ಬಸವಣ್ಣ ಬಸವಾದಿ ಶರಣರ ತತ್ವ ಆದರ್ಶಗಳನ್ನು ಪಾಲನೆ ಮಾಡಿ ಎಲ್ಲಾ ಜನಾಂಗವನ್ನು ಅಪ್ಪಿ ಒಪ್ಪಿದಂತಹ ಪರಮಪೂಜ್ಯರು ಕೋಟ್ಯಾಂತರ ಕುಟುಂಬಕ್ಕೆ ಬೆಳಕನ್ನು ಚೆಲ್ಲಿದ ಪೂಜ್ಯರ ಈ ಒಂದು ಕಾರ್ಯಕ್ರಮ ಅರ್ಥಗರ್ಭಿತವಾಗಿದೆ ಈ ಕಾರ್ಯಕ್ರಮಕ್ಕೆ ಎಲ್ಲರೂ ಭಾಗವಹಿಸುವುದು ನಮ್ಮೆಲ್ಲರ ಪುಣ್ಯ ಎಂದು ಭಾವಿಸಿದ್ದೇವೆ ಎಂದು ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಎಂಎಸ್ ಮಂಜುನಾಥ್ ಮಾತನಾಡಿದರು ಕಾರ್ಯಕ್ರಮದಲ್ಲಿ ಮಾದೇಶ್ ಅಭಿನಂದನಾ ಪಾಟೀಲ್ ಮಹಾಸಭಾ ತಾಲೂಕ್ ಅಧ್ಯಕ್ಷ,ನಿರಂಜನ ಬಾಬು ಎಂ ಎಸ್ ಮಂಜುನಾಥ್ ರಾಜಶೇಖರ್ ಎಸ್ ಮಂಜುನಾಥ್ ಎಂರಾಜಕುಮಾರ್ ಪ್ರಕಾಶ್ ನಿಂಗಪ್ಪವಿಷಕಂಠ ವಿಶ್ವನಾಥ್ ರಾಜಶೇಖರ್ ಅಭಿ ನಿರಂಜನ್,ಜಗದೀಶ್ ಚಿಕ್ಕಣ್ಣ ಬಸವರಾಜ್ ಅನೇಕರು ಭಾಗವಹಿಸಿದರು.

ವರದಿ : ಲೋಕರಕ್ಷಕ ಪಾಂಡುವಪುರ.


Spread the love