ಪಾಂಡವಪುರ: ತಾಲೂಕಿನ ಟಿ.ಎಸ್ ಛತ್ರ ಗ್ರಾಮದಲ್ಲಿಮಲೆ ಮಾದೇಶ್ವರ ಹುಲಿವಾಹನ.. ಮಾದೇಶ್ವರ ಗ್ರಾಮದ ದೇವಸ್ಥಾನ ಜಾತ್ರೆ ಮಹೋತ್ಸವದ ಅಂಗವಾಗಿ ಹುಲಿವಾಹನಕ್ಕೆ ಹೂವುಗಳಿಂದ ಅಲಂಕಾರ ಮಾಡಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ಟಿ.ಎಸ್ ಛತ್ರ ಗ್ರಾಮದ ಮುಖಂಡರ ನೇತೃತ್ವದಲ್ಲಿ ಸಿಡಿ ಮದ್ದಿನ ಸಮೇತ ಹುಲಿವಾಹನಕ್ಕೆ ನಾನು ವಿಧದ ಹೂವುಗಳಿಂದ ಕಾರ್ಯಕ್ರಮವು ವಿಧಿ ವಿಧಾನಗಳೊಂದಿಗೆ ನೆರವೇರಿತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ವಿಜೇಂದ್ರ ಮಾತನಾಡಿ. ಎರಡು ವರ್ಷ ಕೊರೋನಾ ದಿಂದ ನಿಂತು ಹೋಗಿದ್ದ ಹಬ್ಬವನ್ನು ಈ ಬಾರಿ ಆಚರಿಸುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಅಪಾರ ಮಳೆಯಿಂದಾಗಿ ದೇಶವೇ ತೊಂದರೆಗೆ ಸಿಲುಕಿತು. ಮುಂದಿನ ದಿನಗಳಲ್ಲಿ ಮಳೆಯಿಂದ ರೈತರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಪ್ರತಿಯೊಬ್ಬರಿಗೂ ಆಯಸ್ಸು. ಆರೋಗ್ಯ. ಸುಖ ಶಾಂತಿ, ನೆಮ್ಮದಿ ಸಿಗಲಿ ಎಂದು ಹೇಳಿದರು.
ನಂತರ ವಿವಿಧ ಕಲಾತಂಡದೊಂದಿಗೆ ಟಿಎಸ್ ಛತ್ರ ಗ್ರಾಮದಿಂದ ಮದೇಶ್ವರ ಊರಿನ ದೇವಸ್ಥಾನದವರೆಗೂ ಮೆರವಣಿಗೆ ಮೂಲಕ ದೇವರಿಗೆ ಪೂಜೆ ಸಲ್ಲಿಸಿ, ದೈನತೆ ಮೆರೆದರು.
ಗ್ರಾಮದ ಮುಖಂಡರಾದ . ಯುವ ಮುಖಂಡ ವಿಜಯೇಂದ್ರ. ಮಂಜು. ಚಂದ್ರಪ್ಪ. ಸಂದೇಶ್. ಚೆಲುವೆಗೌಡ. ಸಂತೋಷ್. ಕಾರ್ತಿಕ್. ಹುಚ್ಚೇಗೌಡ. ರಘು. ನಿಂಗರಾಜ್. ಹಿರೇಗೌಡ. ಕೃಷ್ಣ. ನಿಂಗಪ್ಪ ಇತರರು ಇದ್ದರು