Spread the love

ಕೊಟ್ಟೂರು:- ದಿ.ಡಾಕ್ಟರ್ ಪುನೀತ್ ರಾಜಕುಮಾರ್ ರವರ ಮೊದಲನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ನಗರದಲ್ಲಿ
ಪುನೀತ್ ರಾಜಕುಮಾರ ಅಭಿಮಾನಿ ಬಳಗ ಹಾಗೂ ಇಲೇವನ್ ಸ್ಪೋರ್ಟ್ಸ್ ಕ್ಲಬ್ ಇವರ ಸಹಯೋಗದಲ್ಲಿ
ಗಚ್ಚಿನ ಮಠದ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು.

ದಿ.ಡಾಕ್ಟರ್ ಪುನೀತ್ ರಾಜಕುಮಾರ ಅವರ ಭಾವ ಚಿತ್ರಕ್ಕೆ ಗುರುಬಸವರಾಜ ರವರು ನಮನಗಳನ್ನು ಸಲ್ಲಿಸುವುದರ
ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಸ್ವಾಮಿ ವಿವೇಕಾನಂದ ರಕ್ತ ಭಂಡಾರ ಸಂಸ್ಥೆ ಬಳ್ಳಾರಿ ಇವರಿಂದ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು.ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ಪುನೀತರಾದರು.ನಂತರ ಬಂದಿರುವವರಿಗೆ ಅನ್ನ ಸಂತರ್ಪಣೆ ಮಾಡಿದರು.
“11” ಬುಲೆಟ್ಸ್ ಸ್ಪೋರ್ಟ್ಸ್ ಕ್ಲಬ್ ಕೊಟ್ಟೂರು ಇವರು ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ ಯಶಸ್ವಿಯಾಗಿ ನೇರವೇರಿಸಲಾಯಿತು.

ಈ ಸಂದರ್ಭದಲ್ಲಿ ಪಿ.ಎಚ್ ರಾಘವೇಂದ್ರ ಅಧ್ಯಕ್ಷರು
ಹ್ಯಾಳ್ಯ ಗ್ರಾಮ ಪಂಚಾಯ್ತಿ,
ಇಂದ್ರಜಿತ್,ಬಿ ಅರ್ ವಿಕ್ರಂ ನಂದಿ ಮೆಡಿಕಲ್ಸ್,ರಮೇಶಕುಮಾರ, ರಾಕೇ ಶ್,ವೆಂಕಟೇಶ್,ಹರಿಶ್, ರಾಘು,ಬಣಕಾರ ಗುರು, ಮಂಜು,ಇತರರು ಇದ್ದರು.

ವರದಿ : ವಿಷ್ಣು . ಎಲ್. ಕೊಟ್ಟೂರು


Spread the love