Spread the love

ಇಂದು ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ DVP ರಾಜ್ಯ ಕಾನೂನು ಸಲಹೆಗಾರರಾದ ಅಡ್ವೋಕೇಟ್ ‘ಸತೀಶ್ ನಾಟೇಕರ್’ ರವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( KEA ) ಕ್ಕೆ ನೋಂದಣಿ ಮತ್ತು ದಾಖಲೆಗಳ ಅಪ್‌ಲೋಡ್ ಮಾಡು ವಿಚಾರಕ್ಕೆ ಸಂಬಂಧಿಸಿದಂತೆ UGNEET ಸರ್ವರ್ ಸಮಸ್ಯೆಯ ಉಂಟಾಗುತ್ತಿದ್ದು ನೋಂದಣಿಯ ಪ್ರಕ್ರಿಯೆಯು ತಡವಾಗುತ್ತಿತ್ತು . ವಿಚಾರವಾಗಿ ಅನೇಕ ವಿದ್ಯಾರ್ಥಿಗಳಿಗೆ ನೋಂದಣಿ ವಂಚಿತರಾಗುತ್ತಿದ್ದಾರೆ. ವಿಶೇಷವಾಗಿ ಗ್ರಾಮೀಣ ಮತ್ತು ಕನ್ನಡ ಮಾಧ್ಯಮದ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳು ಸೇರಿದಂತೆ ಅನೇಕ ಮೀಸಲು ವರ್ಗದ ವಿದ್ಯಾರ್ಥಿಗಳಿಗೆ ನೋಂದಣಿ ಮತ್ತು ಶುಲ್ಕ ಪಾವತಿಯ ಸಮಸ್ಯೆಗಳು ಎದುರಾಗಿದ್ದು ಕಾರಣ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಸಹಾಯಕವಾಗುವಂತಹ ಅನುಕೂಲತೆಗಳ ಅಗತ್ಯವನ್ನು ಮಾಡಿಕೊಡಲು. ಹಾಗೂ ಕನ್ನಡ ಮಾಧ್ಯಮ ಮತ್ತು ಗ್ರಾಮೀಣ SC , ST ಯ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳು ನೋಂದಣಿ ಮಾಡಲು ಸಾಧ್ಯವಾಗುವುದಿರುವುದು KEA ಜವಾಬ್ದಾರರಾಗಿರುತ್ತದ್ದೆ. ವಿದ್ಯಾರ್ಥಿಗಳು ಕೌನ್ಸೆಲಿಂಗ್ ಮತ್ತು ವೈದ್ಯಕೀಯ , ದಂತ ವೈದ್ಯಕೀಯ ಮತ್ತು ಆಯುಷ್ನಲ್ಲಿ ಪ್ರವೇಶ ಪಡೆಯುವ ಅವಕಾಶವನ್ನು ಈ ಸಮಸ್ಯೆಯಿಂದ ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ. ಎಂಬ ವಾಸ್ತವಿಷಯವನ್ನು ಅಧಿಕಾರಿಗಳಿಗೆ ತಿಳಿಯ ಪಡಿಸಿ ನೊಂದಣಿ ಪ್ರಕ್ರಿಯೆಯ ಅವಧಿಯನ್ನು ವಿಸ್ತಾರ ಮಾಡಿಕೊಡುವಂತೆ ಸೂಚಿಸಿದ ಕಾರಣ . ಮನವಿ ಪತ್ರವನ್ನು ಸ್ವೀಕರಿಸಿದ ಇಲಾಖೆಯು ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಇಲಾಖೆಯ ಲೋಪದೋಷಗಳನ್ನು ಸರಿಪಡಿಸಿ ವಿದ್ಯಾರ್ಥಿಗಳಿಗೆ ದಿನಾಂಕವನ್ನು : 31-10-200 ಮತ್ತು 02-11-2022 ನೊಂದಣಿ ಪ್ರಕ್ರಿಯೆಯ ಅವಧಿಯನ್ನು ವಿಸ್ತಾರಣೆ ಮಾಡಿದೆ .

ವರದಿ : ಅಜಿತ್ ಕುಮಾರ್ ಬೆಳ್ಳಿಬಟ್ಲು


Spread the love