Spread the love

ಮಂಡ್ಯ : ಬಹುಜನ ಸಮಾಜ ಪಾರ್ಟಿ ವತಿಯಿಂದ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು .ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾರ್ಯದರ್ಶಿಗಳಾದ ವೆಂಕಟೇಶ್ ಎಂ ಎಸ್ ವಕೀಲರು ಬಹುಜನ ಸಮಾಜ ಪಾರ್ಟಿ, ವತಿಯಿಂದ ಸಂವಿಧಾನ ಸಂರಕ್ಷಣೆಗಾಗಿ ಕರ್ನಾಟಕ ರಾಜ್ಯ ವ್ಯಾಪ್ತಿ ಜೈ ಭೀಮ್ ಜನಜಾಗ್ರತಿ ಜಾಥ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು. ನ-5 ರಿಂದ ನ-6 ಕೆ.ಆರ್.ಪೇಟೆ, ಪಾಂಡವಪುರ , ಶ್ರೀರಂಗಪಟ್ಟಣ ,ಹಾಗೂ ಮಂಡ್ಯ ವಿಧಾನಸಭಾ ಕ್ಷೇತ್ರ ಗಳಲ್ಲಿ ಜಾತ ಸಂಚರಿಸಲಿದೆ.

ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವು ಜನವರಿ 26.1950 ರಂದು ಕಾರ್ಯರೂಪಕ್ಕೆ ಬಂದು ಸ್ವತಂತ್ರ ಭಾರತದಲ್ಲಿ ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ವಿಮೋಚನೆಯನ್ನು ಸ್ಥಾಪಿಸುವ ಸಲುವಾಗಿ ನಮ್ಮ ಸಂವಿಧಾನ ಹಲವರು ಮೂಲಭೂತ ಹಕ್ಕುಗಳು ಮತ್ತು ವಿಧಿ ವಿಧಾನಗಳನ್ನು ನೀಡಿದೆ.

ಕಾನೂನಿನ ಮುಂದೆ ಎಲ್ಲರೂ ಸಮಾನರು ಅಸ್ಪೃಶ್ಯತಾ ಆಚರಣೆಯನ್ನು ನಿಷೇಧಿಸಲಾಗಿದೆ, ಮತ್ತು ಜಾತಿ ಧರ್ಮ ಕೋಮು ಭಾಷೆ ಹುಟ್ಟಿದ ಸ್ಥಳ ಮತ್ತು ಲಿಂಗಭೇದಗಳನ್ನು ಆಧರಿಸಿ ತಾರತಮ್ಯವನ್ನು ನಿಷೇಧಿಸಲಾಗಿದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಧೀನದಲ್ಲಿರುವ ಎಲ್ಲಾ ಸೇವೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಎಸ್ಸಿ ಎಸ್ಟಿ ಮತ್ತು ಒಬಿಸಿ ಗಳು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಸೂಕ್ತ ಪ್ರಾತಿನಿಧ್ಯತೆಯನ್ನು ನೀಡುವ ಸಲುವಾಗಿ ಮೀಸಲಾತಿ ಸೌಲಭ್ಯವನ್ನು ನೀಡಲಾಗಿದೆ.

ಕೃಷಿ ಭೂಮಿ ಕೈಗಾರಿಕಾ ಬಂಡವಾಳ ವ್ಯಾಪಾರೋದ್ಯಮ ಎಲ್ಲ ರೀತಿ ಉತ್ಪಾದನಾ ಮತ್ತು ಆರ್ಥಿಕ ಕ್ಷೇತ್ರಗಳ ಒಡೆತನದಲ್ಲಿ ಸೂಕ್ತ ಪಾಲು ಪಡೆಯಲು ಎಲ್ಲಾ ನಾಗರಿಕರು ಸಮಾನ ಅವಕಾಶಗಳನ್ನು ಸೃಷ್ಟಿಸುವಂತಹ ನಿಯಮಗಳನ್ನು ಸರ್ಕಾರಗಳು ಜಾರಿಗೆ ತರಬೇಕು ಈ ನಾಡಿನ ಸಂಪತ್ತು ಯಾವುದೇ ಕಾರಣಕ್ಕು ಕೆಲವೆ ವರ್ಗಗಳ ಕೈಯಲ್ಲಿ ಕೇಂದ್ರೀಕೃತವಾಗದಂತೆ ಸರ್ಕಾರಗಳು ಆರ್ಥಿಕ ವ್ಯವಸ್ಥೆಯನ್ನು ರೂಪಿಸಬೇಕು ಇದುವರಗಿನ ಸರ್ಕಾರಗಳು ಮೂಲಭೂತ ಹಕ್ಕುಗಳು ಜಾರಿಗೊಳಿಸುವಲ್ಲಿ ವಿಫಲವಾಗಿವೆ .ಆದರಿಂದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳು ಜೈ ಭೀಮ್ ಜನಜಾಗೃತ ಜಾತದಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು.

ನಂತರ ಮಾತನಾಡಿದ ಮಂಡ್ಯ ಜಿಲ್ಲಾಧ್ಯಕ್ಷರಾದ ಎಸ್. ಶಿವಶಂಕರ್ ವಕೀಲರು ಸರ್ಕಾರಗಳು ರೈತರ ಮತ್ತು ಕಾರ್ಮಿಕರ ಹಿತಶಕ್ತಿಗಳನ್ನು ಕಾಪಾಡುವಂತಹ ನಿಯಮಗಳನ್ನು ರೂಪಿಸಬೇಕು ದುರ್ಬಲ ಅಸಹಾಯಕ ವೃದ್ಧರ ಮತ್ತು ದೈಹಿಕ ಹಸಮರ್ಥತೆಯ ಕಾರಣದಿಂದಾಗಿ ಶಿಕ್ಷಣ ಮತ್ತು ಉದ್ಯೋಗವನ್ನು ಪಡೆಯಲಾಗದವರಿಗೆ ಸರ್ಕಾರಗಳು ಸಹಾಯವನ್ನು ಮಾಡಬೇಕು ಬಹು ಮುಖ್ಯವಾಗಿ ಜನತೆಗೆ ಆರೋಗ್ಯವಂತ ಪರಿಸರ ಸ್ವಚ್ಛ ಕುಡಿಯುವ ನೀರು ಮತ್ತು ಪೌಷ್ಟಿಕ ಆಹಾರವನ್ನು ಒದಗಿಸಿ ಅವರ ಜೀವನ ಮಟ್ಟವನ್ನು ಉತ್ತಮಪಡಿಸುವುದು ಸರ್ಕಾರಗಳ ಪ್ರಾಥಮಿಕ ಕರ್ತವ್ಯವಾಗಿದೆ ಇದರಲ್ಲಿ ಸರ್ಕಾರಗಳು ವಿಫಲವಾಗಿವೆ.

ಹಳ್ಳಿಗಾಡಿನ ಬದುಕಿಗೆ ಬೇಸತ್ತು ನಗರ ಪ್ರದೇಶಗಳಿಗೆ ವಲಸೆ ಬರುವ ಇವರು ಅಲ್ಲಿ ಅಸಂಘಟಿತ ಅಸುರಕ್ಷಿತ ಕೂಲಿ ಕಾರ್ಮಿಕರಾಗಿ ಬದುಕುತ್ತಿದ್ದಾರೆ ಬೀದಿ ಗುಡಿಸುವ ಹಾಗೂ ಒಳಚರಂಡಿಗಳಲ್ಲಿ ಇಳಿದು ಹೊಲಸು ಬಾಚುವ ಕನಿಷ್ಠ ಕೂಲಿ ಪಡೆದ ಪೌರಕಾರ್ಮಿಕರಾಗಿ ಬದುಕುತ್ತಿದ್ದಾರೆ ಕರ್ನಾಟಕ ರಾಜ್ಯದಲ್ಲಿ 33,000 ಹಳ್ಳಿಗಳ ಪೈಕಿ 11,000 ಕ್ಕಿಂತ ಹೆಚ್ಚಿನ ಹಳ್ಳಿಗಳಲ್ಲಿ ಎಸ್ಸಿ ಎಸ್ಟಿ ಗಳಿಗೆ ಪ್ರತ್ಯೇಕ ಸ್ಮಶಾನ ಭೂಮಿಯು ಇಲ್ಲದಂತಾಗಿದೆ ಇದು ದೊಡ್ಡ ದುರಂತವಾಗಿದೆ ಇನ್ನು ಹಲವಾರು ಸೌಕರ್ಯಗಳು 75 ವರ್ಷಗಳ ಕಾಲ ಸಂವಿಧಾನಕ್ಕೆ ವಿರೋಧವಾದ ದುರಾಡಳಿತ ದ ಬಲಿಪಶುಗಳಾಗಿರುವ ನಾವು ಇದೀಗ ಜಾಗೃತರಾಗೋಣ ಮತ್ತು ಸಂವಿಧಾನದ ಎಲ್ಲಾ ಸದಾಶಿಯಗಳನ್ನು ಯಥಾವತಾಗಿ ಜಾರಿಗೆ ತರಲು ನಾವೇ ಸಜ್ಜಾಗೋಣ ಜಾತಿಯತೆ ಕೋಮುವಾದದ ಕರಳತೆಯಿಂದ ಬಿಡುಗಡೆ ಪಡೆಯಲು ಮತ್ತು ಬಡತನದ ಬೇಗೆಯಿಂದ ವಿಮೋಚನೆಯಾಗಲು ಸಂವಿಧಾನ ನೀಡಿರುವ ಹಕ್ಕು ಅಧಿಕಾರ ಸಂರಕ್ಷಣೆ ಮತ್ತು ಅವಕಾಶಗಳ ಬಗ್ಗೆ ಅರಿತುಕೊಳ್ಳೋಣ ಹಾಗೂ ಸಂವಿಧಾನಾತ್ಮಕ ಹೋರಾಟದ ಮೂಲಕ ಗೆಲುವು ಸಾಧಿಸೋಣ ಈ ನಿಟ್ಟಿನಲ್ಲಿ ಇಡೀ ಕರ್ನಾಟಕ ರಾಜ್ಯದಾದ್ಯಂತ ನಡೆಯುತ್ತಿರುವ ಜೈ ಭೀಮ್ ಜನಜಾಗೃತಿ ಜಾತವನ್ನು ಬೆಂಬಲಿಸಬೇಕೆಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿಯಾದ ಎಂ ಎಸ್ ವೆಂಕಟೇಶ್ ಜಿಲ್ಲಾ ಉಸ್ತುವಾರಿಗಳಾದ ಚೆಲುವರಾಜು,ಜಿಲ್ಲಾಧ್ಯಕ್ಷರಾದ S. ಶಿವಶಂಕರ್ ಜಿಲ್ಲಾ ಸೋದರತ್ವ ಸಮಿತಿಯ ಅಧ್ಯಕ್ಷರಾದ ರವಿ ಗೌಡ ಹಾಗೂ ಮಂಡ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಕೆಎಂ ಅನಿಲ್ ಕುಮಾರ್, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಯೋಗಾನಂದ ಗೌಡ ಮಂಡ್ಯ ವಿಧಾನಸಭಾ ಕ್ಷೇತ್ರದ ನಗರ ಘಟಕದ ಅಧ್ಯಕ್ಷರಾದ ರೋಹಿತ್ ರವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು


Spread the love