ಹೈದರಾಬಾದ್: ಬೆಟಾ ಪರೀಕ್ಷೆ ಮೂಲಕ ವಾಟ್ಸ್ಆಯಪ್ ಹೊಸ ಫೀಚರ್ ಅನ್ನು ತನ್ನ ಬಳಕೆದಾರರಿಗೆ ಪರಿಚಯಿಸಿದೆ. ಇದರ ಅನುಸಾರ ಡೆಸ್ಕ್ಟಾಪ್ನಲ್ಲಿ ಬಳಕೆದಾರರು ಗ್ರೂಪ್ಚಾಟ್ ವೇಳೆ ಫ್ರೋಫೈಲ್ ಫೋಟೋಗಳನ್ನು ವೀಕ್ಷಿಸಬಹುದಾಗಿದೆ.
ಈ ಹೊಸ ಫೀಚರ್ನಿಂದ ಗ್ರೂಪ್ ಮೆಂಬರ್ಗಳು ಫೋನ್ ನಂಬರ್ ಇರದೇ ಹೋದರೂ ಅಥವಾ ಅದೇ ಹೆಸರು ಹೊಂದಿದ್ದಾಗಲೂ ಅವರನ್ನು ಪತ್ತೆ ಮಾಡಬಹುದಾಗಿದೆ. ಒಂದು ವೇಳೆ ಗ್ರೂಪ್ ಸದಸ್ಯರು ತಮ್ಮ ಪ್ರೋಫೈಲ್ ಚಿತ್ರ ಹೊಂದಿಲ್ಲದಿದ್ದಾಗ ಅಥವಾ ಪ್ರೊಫೈಲ್ ಫೋಟೋ ಹೈಡ್ ಮಾಡಿದಾಗ ಡೀಫಾಲ್ಟ್ ಪ್ರೊಫೈಲ್ ಐಕಾನ್ ಕಾಣಿಸಿಕೊಳ್ಳುತ್ತದೆ. ಜೊತೆಗೆ ಕಾಂಟಾಕ್ಟ್ ನೇಮ್ನಲ್ಲಿಯೂ ಅದೇ ಬಣ್ಣವನ್ನು ಹೈಲೈಟ್ ಮಾಡಲಾಗುತ್ತದೆ.
ಈ ಹೊಸ ಫೀಚರ್ ಅನ್ನು ಶೀಘ್ರದಲ್ಲೇ ಆಂಡ್ರಾಯ್ಡ್ ವಾಟ್ಸ್ಆಪ್ ಬೆಟಾಗೆ ಬಿಡುಗಡೆ ಮಾಡಲಾಗುವುದು. ಕಳೆದ ಅಕ್ಟೋಬರ್ನಲ್ಲಿ ವಾಟ್ಸಾಪ್ ಡೆಸ್ಕ್ಟಾಪ್ ಬೆಟಾದ ಮೇಲೆ ವಾಟ್ಸಾಪ್ ಕೆಲಸ ಶುರು ಮಾಡಿತ್ತು. ಡೆಸ್ಕ್ಟಾಪ್ ಮತ್ತು ಐಒಎಸ್ ಬೆಟಾ ಈ ಫೀಚರ್ ಪರಿಚಯಿಸುವ ಮೂಲಕ ಗ್ರೂಪ್ ಮೆಂಬರ್ ಪತ್ತೆ ಮಾಡಲು ಸಹಾಯಕವಾಗಲಿದೆ.