Spread the love

ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಬೌಲರ್ ಶಾಹೀನ್ ಶಾ ಆಫ್ರಿದಿ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಶಾಹೀನ್, ಪಾಕ್‌ ತಂಡದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಅವರ ಪುತ್ರಿ ಅನ್ಷಾ ಜೊತೆ ನಿಕಾಹ್‌ ಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಈಗಾಗ್ಲೇ ಮದುವೆ ದಿನಾಂಕ ಕೂಡ ಫಿಕ್ಸ್‌ ಆಗಿದೆ.

ಅನ್ಷಾ, ಆಫ್ರಿದಿಯ ಹಿರಿಯ ಪುತ್ರಿ.

ಶಾಹೀನ್ ಶಾ ಹಾಗೂ ಅನ್ಷಾ ಜೋಡಿ ಫೆಬ್ರವರಿ 3 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಶಾಹೀನ್ಗೆ ಈ ಹಿಂದೆಯೇ ನಿಶ್ಚಿತಾರ್ಥವಾಗಿತ್ತು. ಎರಡು ವರ್ಷಗಳ ಹಿಂದೆ ಆಫ್ರಿದಿ ಪುತ್ರಿ ಅನ್ಷಾ ಹಾಗೂ ಶಾಹಿನ್‌ ಎಂಗೇಜ್ಮೆಂಟ್‌ ನೆರವೇರಿತ್ತು. ಮದುವೆ ಕುರಿತಂತೆ ಖುದ್ದು ಆಫ್ರಿದಿ ಅಧಿಕೃತ ಹೇಳಿಕೆಯನ್ನೂ ನೀಡಿದ್ದಾರೆ. ಪಾಕಿಸ್ತಾನದ ಕರಾಚಿಯಲ್ಲಿ ಮದುವೆ ಸಮಾರಂಭ ನೆರವೇರಲಿದೆ. ಆರತಕ್ಷತೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ.


Spread the love