ಬೆಂಗಳೂರು: ಚರ್ಚ್ ಗೆ ಪ್ರಾರ್ಥನೆಗೆಂದು ತೆರಳುತ್ತಿದ್ದಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಗೋಪಾಲಗೌಡ ಜಂಕ್ಷನ್ ಬಳಿ ನಡೆದಿದೆ.
ಕ್ರಿಸ್ ಮಸ್ ಹಿನ್ನೆಲೆಯಲ್ಲಿ ಹಬ್ಬದ ಸಡಗರದಲ್ಲಿದ್ದ ಯುವಕ ಪ್ರಾರ್ಥನೆಗೆಂದು ಚರ್ಚ್ ಗೆ ಹೊಸ ಬೈಕ್ ನಲ್ಲಿ ತೆರಳುತ್ತಿದ್ದ.
ಈ ವೇಳೆ ಬೈಕ್ ಗೋಪಾಲಗೌಡ ಜಂಕ್ಷನ್ ಬಳಿ ರಸ್ತೆ ಬದಿಯ ಪುಟ್ ಪಾತ್ ತಡೆಗೋಡೆಗೆ ಗುದ್ದಿದೆ. ಕೆಳಗೆ ಬಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಅಲೆಕ್ಸ್ (25) ಮೃತ ಯುವಕ. ಬೈಕ್ ಹಿಂಬದಿ ಕುಳಿತಿದ್ದ ಸತೀಶ್ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ.