Spread the love

ವದೆಹಲಿ: ಚೀನಾದಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ ಭಾರತದಲ್ಲಿಯೂ 4ನೇ ಡೋಸ್ ಲಸಿಕೆ ಬಗ್ಗೆ ಚಿಂತನೆ ಆರಂಭವಾಗಿದೆ.

ಮೂಗಿನ ಮೂಲಕ ಕೊಡುವ ಲಸಿಕೆ ಮಾತ್ರವಲ್ಲ ನಾಲ್ಕನೇ ಡೋಸ್ ಲಸಿಕೆಯನ್ನು ಆರಂಭಿಸುವ ಅಗತ್ಯವಿದೆ ಎಂಬ ಚರ್ಚೆ ಆರಂಭವಾಗಿದೆ.

 

ನಾಸಲ್ ವ್ಯಾಕ್ಸಿನ್ ಗೆ ಮ್ಯೂಕೋಸಲ್ ಇಮ್ಯುನಿಟಿ ಶ್ವಾಸಕೋಶ ಸೇರಿದಂತೆ ಅತಿಮುಖ್ಯ ಅಂಗಗಳಲ್ಲಿ ರೋಗನಿರೋಧಕ ಶಕ್ತಿ ಬೆಳೆಸುವ ಶಕ್ತಿಯಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ತಜ್ಞರು ಈ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಮೂಗಿನ ಮೂಲಕ ಕೊಡುವ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳೂ ಇಲ್ಲ, ಹಾಗಾಗಿ ಮೂಗಿನ ಮೂಲಕ ಕೊಡುವ ಲಸಿಕೆಗಳಿಗೆ ಆದ್ಯತೆ ಕೊಡಬೇಕು ಎಂಬ ಅಭಿಪ್ರಾಯವೂ ಕೇಳಿಬಂದಿದೆ.

ಇನ್ನೊಂದು ವಾದದ ಪ್ರಕಾರ ಈಗಾಗಲೇ ಪಡೆದಿರುವ ಲಸಿಕೆಯಿಂದ ಜನರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿರುವುದರಿಂದ ನಾಲ್ಕನೇ ಡೋಸ್ ಲಸಿಕೆಯ ಅಗತ್ಯವಿಲ್ಲ ಎಂದು ಹೇಳಲಾಗುತ್ತಿದೆ.


Spread the love

By admin