Spread the love

ಬೆಂಗಳೂರು:  ಚೀನಾದಿಂದ ಬೆಂಗಳೂರಿಗೆ ಆಗಮಿಸಿದ ವ್ಯಕ್ತಿಯೊಬ್ಬರಲ್ಲಿ ಕೊರೋನಾ ಸೋಂಕು  ಕಾಣಿಸಿಕೊಂಡಿದ್ದು ಕೋವಿಡ್ ಭೀತಿ ಇನ್ನಷ್ಟು ಹೆಚ್ಚಿಸಿದೆ. ನಿನ್ನೆ ಚೀನಾದಿಂದ ಬಂದ 40 ವರ್ಷದ ವ್ಯಕ್ತಿಯನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ. ಅದರಂತೆ ಬಂದ ವರದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದ್ದು, ತಕ್ಷಣವೇ ಖಾಸಗಿ ಆಸ್ಪತ್ರೆಗೆ ರವಾನಿಸಿ ಐಸೋಲೇಷನ್ ಮಾಡಲಾಗಿದ್ದು, ಹೆಚ್ಚಿನ ತಪಾಸಣೆಗಾಗಿ ವ್ಯಕ್ತಿಯ ಮಾದರಿ ಸಂಗ್ರಹ ಮಾಡಿ ಜಿನೋಮಿಕ್ ಸೀಕ್ವೆನ್ಸಿಂಗ್​ಗೆ ರವಾನಿಸಲಾಗಿದೆ. ಸದ್ಯ ಕೊರೋನಾ ಸೋಂಕು ದೃಢಪಟ್ಟ ವ್ಯಕ್ತಿ ಉತ್ತರಪ್ರದೇಶದ ಆಗ್ರಾ ಮೂಲದವರಾಗಿದ್ದಾರೆ.

ಇವರು ಚೀನಾದಿಂದ ಬೆಂಗಳೂರಿಗೆ ಬಂದು ಆಗ್ರಾಗೆ ಪ್ರಯಾಣ ಮಾಡಿರುವ ವಿಚಾರ ತಿಳಿದುಬಂದಿದೆ. ಸದ್ಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಚೀನಾದ ರೂಪಾಂತರಿ ಸೋಂಕಿನ ಭೀತಿ ಕರ್ನಾಟಕಕ್ಕೂ ತಟ್ಟಿದೆ. ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ಸದ್ಯ ರಾಜ್ಯದಲ್ಲಿ ಯಾವುದೇ ರೂಪಾಂತರಿ ಸೋಂಕುಗಳು ಪತ್ತೆಯಾಗಿಲ್ಲ. ಯಾವುದೇ ಶಂಕಿತ ಕೇಸ್‌ಗಳು ಇನ್ನು ಕಂಡು ಬಂದಿಲ್ಲ ಎಂದರು.


Spread the love

By admin