Spread the love

ಬೆಳಗಾವಿ: ಬೀದಿ ಬದಿ ವ್ಯಾಪಾರಿಗಳಿಗೆ ಸ್ಟಾಂಪ್ ಶುಲ್ಕ ವಿನಾಯಿತಿ ಮಸೂದೆ ವಿಧಾನ ಪರಿಷತ್ ನಲ್ಲಿ ಪಾಸ್ ಆಗಿದೆ.

ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆಯಡಿ ಸಾಲ ಪಡೆಯುವ ಬೀದಿ ಬದಿ ವ್ಯಾಪಾರಿಗಳು ಬರೆದುಕೊಡುವ ಸಾಲ ಕರಾರು ಪತ್ರಗಳ ಮೇಲಿನ ಮುದ್ರಾಂಕ ಶುಲ್ಕಕ್ಕೆ ವಿನಾಯಿತಿ ನೀಡುವ ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ.

 

ಕಂದಾಯ ಸಚಿವ ಆರ್. ಆಶೋಕ್ ಅವರು ವಿಧಾನ ಪರಿಷತ್ ನಲ್ಲಿ ಕರ್ನಾಟಕ ಸ್ಟಾಂಪ್ 4ನೇ ತಿದ್ದುಪಡಿ ವಿಧೇಯಕ 2022 ಮಂಡಿಸಿದ್ದು, ಕೇಂದ್ರ ಯೋಜನೆ ಅಡಿ ಸಾಲ ಪಡೆದುಕೊಳ್ಳುವ ಬೀದಿಬದಿ ವ್ಯಾಪಾರಿಗಳು ಪಡೆಯುವ ಸಾಲದ ಆಧಾರದ ಮೇಲೆ ಕರಾರು ಪತ್ರ ನೋಂದಣಿಗೆ ಮುದ್ರಾಂಕ ಶುಲ್ಕ ಪಾವತಿಸಬೇಕಿತ್ತು. ಇದನ್ನು ಮಾಫಿ ಮಾಡಲು ತಿದ್ದುಪಡಿ ವಿಜಯ ತರಲಾಗಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ವಿಧಾನ ಪರಿಷತ್ ನಲ್ಲಿ ಧ್ವನಿ ಮತದ ಮೂಲಕ ಒಪ್ಪಿಗೆ ನೀಡಲಾಗಿದೆ.


Spread the love

By admin