Spread the love

ಜಮ್ಮು ಜಿಲ್ಲೆಯ ಸಿಧ್ರಾ ಪ್ರದೇಶದಲ್ಲಿ ಇಂದು ಬೆಳಗ್ಗೆ ನಡೆದ ಎನ್​ಕೌಂಟರ್​ನಲ್ಲಿ ಮೂವರು ಉಗ್ರರ ಸದ್ದಡಗಿಸಲಾಗಿದೆ.ಭಯೋತ್ಪಾದಕರು ಟ್ರಕ್​​ನಲ್ಲಿ ಸಾಗುತ್ತಿದ್ದ ವೇಳೆ ತಡೆದು ನಿಲ್ಲಿಸಿದಾಗ ಉಗ್ರರು ಭದ್ರತಾ ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿದಾಳಿ ನಡೆಸಿದ ಸೇನಾಪಡೆ ಮೂವರನ್ನು ಹೊಡೆದುರುಳಿಸಿದ್ದಾರೆ.

ಸಿಧ್ರಾದಲ್ಲಿ ಟ್ರಕ್​ ಅನುಮಾನಾಸ್ಪದವಾಗಿ ಚಲಿಸುತ್ತಿದ್ದಾಗ ಅದನ್ನು ತಡೆದು ಪರಿಶೀಲನೆಗೆ ಮುಂದಾದೆವು. ಟ್ರಕ್​​​ ಚಾಲಕ ಪರಾರಿಯಾದ. ಅದರಲ್ಲಿದ್ದ ಉಗ್ರರು ಗುಂಡು ಹಾರಿಸಲು ಶುರು ಮಾಡಿದರು. ಬಳಿಕ ಭದ್ರತಾ ಪಡೆಗಳು ದಾಳಿ ನಡೆಸಿದರು ಎಂದು ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಮಾಹಿತಿ ನೀಡಿದರು.

ಈ ಪ್ರದೇಶದಲ್ಲಿ ಉಗ್ರಗಾಮಿಗಳು ಅಡಗಿದ್ದಾರೆ ಎಂಬ ಮಾಹಿತಿಯ ಮೇರೆಗೆ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಲಾಯಿತು. ಮಂಗಳವಾರವಷ್ಟೇ ಉಧಮ್‌ಪುರ ಜಿಲ್ಲೆಯಲ್ಲಿ 15 ಕಿಲೋ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ನಿಷ್ಕ್ರಿಯಗೊಳಿಸಿದ ನಂತರ ಈ ಗುಂಡಿನ ಚಕಮಕಿ ನಡೆದಿದೆ. ಇದಕ್ಕೂ ಮೊದಲು ಬಸಂತ್‌ಗಢ ಪ್ರದೇಶದಲ್ಲಿ ಸಿಲಿಂಡರ್​ ಆಕಾರದ ಐಇಡಿ, 400 ಗ್ರಾಂ ಆರ್‌ಡಿಎಕ್ಸ್, ಏಳು ಬಂದೂಕುಗಳು ಮತ್ತು 5 ಡಿಟೋನೇಟರ್‌ಗಳನ್ನು ವಶಪಡಿಸಿಕೊಂಡು, ದೊಡ್ಡ ಭಯೋತ್ಪಾದನಾ ಸಂಚನ್ನು


Spread the love

By admin