Spread the love

ಉತ್ತರಕಾಶಿ: ಉತ್ತರಾಖಂಡ್​ದಲ್ಲಿ 10 ದಿನಗಳ ಅಂತರದಲ್ಲಿ ಎರಡನೇ ಬಾರಿ ಮತ್ತೆ ಭೂಕಂಪನ ಸಂಭವಿಸಿದೆ ಉತ್ತರ ಕಾಶಿಯಲ್ಲಿ ನಿನ್ನೆ ಮಧ್ಯರಾತ್ರಿ ಭೂಮಿ ಕಂಪಿಸಿದೆ.ಮಧ್ಯರಾತ್ರಿ ಸುಮಾರು 2. 19ಕ್ಕೆ ಭೂ ಕಂಪನ ಆಗಿದ್ದು, ರಿಕ್ಟರ್​ ಮಾಪಕದಲ್ಲಿ 3.1 ತೀವ್ರತೆ ದಾಖಲಾಗಿದೆ.

ಮಧ್ಯರಾತ್ರಿ ಭೂ ಕಂಪನ: ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಅನುಸಾರ ಉತ್ತರ ಕಾಶಿಯಲ್ಲಿ ರಿಕ್ಟರ್​ ಮಾಪಕದ ಅನುಸಾರ 3.1 ರ ತೀವ್ರತೆ ದಾಖಲಾಗಿದೆ. ಭೂಕಂಪನದ ಕೇಂದ್ರಬಿಂದು ಅಕ್ಷಾಂಶ 30.87 ಮತ್ತು ರೇಖಾಂಶ 78.19 ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ವರದಿ ಮಾಡಿದೆ. ಭೂಕಂಪದ ಆಳವು 5 ಕಿ.ಮೀ ಇದ್ದು, ಈ ಘಟನೆಯಿಂದ ಯಾವುದೇ ಪ್ರಾಣ ಹಾನಿ, ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ವರದಿ ಆಗಿಲ್ಲ.


Spread the love

By admin