Spread the love

ಬೆಂಗಳೂರು : ನಗರದಲ್ಲಿ ಹೊಸ ವರ್ಷಾಚರಣೆಗೆ ಕೆಲವು ನಿಯಮಗಳನ್ನು ಜಾರಿಗೆ ತರಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೊಟೇಲ್ ಅಸೋಸಿಯೇಷನ್, ಪಬ್ ಅಂಡ್ ಕ್ಲಬ್, ಬಾರ್ ಅಸೋಸಿಯೇಷನ್, ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳ ಜತೆ ವರ್ಚುವಲ್ ಸರಣಿ ಸಭೆ ನಡೆಸಿದ್ದಾರೆ. ರಾಜ್ಯದಲ್ಲಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ರಾಜ್ಯಾದ್ಯಂತ  ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಸಚಿವ ಆರ್​ ಅಶೋಕ್​​, ರಾಜ್ಯದಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸದಿದ್ದರೆ ಸದ್ಯಕ್ಕೆ ದಂಡ ವಿಧಿಸಲಾಗುವುದಿಲ್ಲ. ಆದರೆ, ಜನರ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ವಹಿಸಿ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಹೇಳಿದರು.

ಎಲ್ಲಾ ಸಿನಿಮಾ ಥಿಯೇಟರ್​ಗಳು, ಮಾಲ್​​ಗಳು, ಹೋಟೆಲ್, ರೆಸ್ಟೋರೆಂಟ್, ಒಳಾಂಗಣ ಕಾರ್ಯಕ್ರಮ, ಸಾರ್ವಜನಿಕ ಸ್ಥಳಗಳು, ಸಭೆ, ಸಮಾರಂಭ, ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚಿಸಲಾಗಿದೆ. ರಾಜ್ಯದ ಎಲ್ಲ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್ ಹಾಗೂ ರೆಸಾರ್ಟ್​ಗಳಲ್ಲಿನ ಮಾಲೀಕರು ಹಾಗೂ ಸಿಬ್ಬಂದಿಗೆ ಮಾಸ್ಕ್ ಹಾಗೂ 2 ಡೋಸ್ ಲಸಿಕೆ ಕಡ್ಡಾಯ ಮಾಡಲಾಗಿದೆ. ಹೊಟೇಲ್, ಪಬ್, ರೆಸ್ಟೋರೆಂಟ್​​ಗಳಲ್ಲಿ ಈಗಿರುವಷ್ಟೇ ಸೀಟ್​ಗಳಿಗೆ ಮಾತ್ರ ಜನರಿಗೆ ಅವಕಾಶ ನೀಡಬೇಕು. ಹೊಸದಾಗಿ ಹೆಚ್ಚುವರಿ ಸೀಟ್​ಗಳ ವ್ಯವಸ್ಥೆ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.

ಬೆಂಗಳೂರಿನ ಎಂ.ಜಿ.ರೋಡ್, ಬ್ರಿಗೇಡ್ ರೋಡ್ ಸೇರಿದಂತೆ ಎಲ್ಲೆಲ್ಲಿ ಸಂಭ್ರಮಾಚರಣೆ ಮಾಡಲಾಗುವುದೋ ಅಲ್ಲಿ ಪ್ರತಿಯೊಬ್ಬರಿಗೂ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಸಂಭ್ರಮಾಚರಣೆಗೆ ರಾತ್ರಿ 1 ಗಂಟೆಯವರೆಗೆ ಮಾತ್ರ ಅವಕಾಶವಿದೆ. 1 ಗಂಟೆಯ ಬಳಿಕ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ವಿಶೇಷವಾಗಿ ಹಿರಿಯ ನಾಗರೀಕರು, ಗರ್ಭಿಣಿಯರು, ಮಕ್ಕಳು ಜನಸಂದಣಿಯಿರುವ ಪ್ರದೇಶಗಳಲ್ಲಿ ಹಾಗೂ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳದಿರುವುದು ಒಳ್ಳೆಯದು.

ಪಾಲಿಕೆಯ ಗೈಡ್ ಲೈನ್ಸ್ ಹೀಗಿದೆ..:

  • ಅಪಾರ್ಟ್‌ಮೆಂಟ್‌ಗಳಲ್ಲಿ ಪಾರ್ಟಿ ಆಯೋಜನೆಗೆ ಎಲ್ಲ ಸದಸ್ಯರ ಒಪ್ಪಿಗೆ ಇರಬೇಕು.
  • ಕಾರ್ಯಕ್ರಮಗಳು ಸೇರುವ ಜನಸಂಖ್ಯೆೆ, ಕಾರ್ಯಕ್ರಮದ ರೂಪದ ಕುರಿತ ಮಾಹಿತಿ ಸ್ಥಳೀಯ ಪಾಲಿಕೆ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ಕೊಟ್ಟಿರಬೇಕು.
  • ಕ್ಲೋಸ್ ಡೋರ್-ಎಸಿ ಹಾಲ್‌ನಲ್ಲಿ ಸಭೆ ಮಾಡಿದರೆ ಮಾಹಿತಿ ಕೊಡಬೇಕು.
  • ಹೊರ ದೇಶದಿಂದ ಬಂದ ಪ್ರಯಾಣಿಕರ ಕೋವಿಡ್ ಪರೀಕ್ಷೆೆ ನಡೆಸಬೇಕಾಗಿದ್ದು, ಈ ಜವಾಬ್ದಾಾರಿ ಅಪಾರ್ಟ್‌ಮೆಂಟ್ ಆಡಳಿತ ಮಂಡಳಿಯದ್ದಾಗಿದೆ.
  • ಬೂಸ್ಟರ್ ಡೋಸ್ ಪಡೆಯುವಂತೆ ಪ್ರೇರೇಪಿಸುವುದು ಸೇರಿದಂತೆ ಹಲವು ಸುರಕ್ಷತಾ ಕ್ರಮಗಳ ಬಗ್ಗೆೆ ಚರ್ಚೆ ನಡೆದಿದೆ.

Spread the love

By admin