Spread the love

ಬೆಳಗಾವಿ: ಕರ್ನಾಟಕದ ಹಲವು ವರ್ಷಗಳ ಬೇಡಿಕೆಯಾದ ಕಳಸಾ-ಬಂಡೂರಿ ನಾಲಾ ವಿಸ್ತೃತ ಯೋಜನೆಗೆ ಕೇಂದ್ರ ಜಲಶಕ್ತಿ ಆಯೋಗ ಅನುಮತಿ ನೀಡಿದೆ.

ಈ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದು, ಕಳಸಾ-ಬಂಡೂರಿ ನಾಲಾ ಯೋಜನೆಯ ಡಿಪಿಆರ್ ಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅನುಮತಿ ನೀಡಿದೆ.

ಇದು ಉತ್ತರ ಕರ್ನಾಟಕ ಭಾಗದ ಜನತೆಗೆ ಪ್ರಧಾನಿ ಮೋದಿ ಕೊಡುಗೆ ಎಂದು ಹೇಳಿದ್ದಾರೆ.

ಉತ್ತರ ಕರ್ನಾಟಕ ಭಾಗದ ಮಹತ್ವದ ಯೋಜನೆಯಾಗಿದ್ದ ಕಳಸಾ ಬಂಡೂರಿ ಯೋಜನೆಗಾಗಿ 2002ರಿಂದ ಕಳಸಾದಿಂದ ಡೈವರ್ಟ್ ಮಾಡಲು ಚರ್ಚಿಸಲಾಗಿತ್ತು. ಆದರೆ ಗೋವಾ ಸರ್ಕಾರ ಯೋಜನೆಗೆ ತಗಾದೆ ತೆಗೆದಿತ್ತು. ಈಗ ಕಳಸಾ-ಬಂಡೂರಿ ಯೋಜನೆಯ ಡಿಪಿಆರ್ ಗೆ ಪ್ರಧಾನಿ ಮೋದಿಯವರು ಒಪ್ಪಿದ್ದಾರೆ. ಪ್ರಮುಖವಾಗಿ ಅಂತರಾಜ್ಯ ವಿವಾದ ವಿಚಾರದಲ್ಲಿಯು ರಾಜ್ಯದ ನಿಲುವು ಸೂಕ್ತವಾಗಿದೆ ಎಂದು ಹೇಳಿದ್ದಾರೆ ಎಂದರು.

ಕೂಡಲೇ ಡಿಪಿಆರ್ ಸಿದ್ಧಪಡಿಸಿ ಕಾರ್ಯಯೋಜನೆ ಆರಂಭಿಸುತ್ತೇವೆ. ನಾವೇ ಅಡಿಗಲ್ಲು ಹಾಕಿ ಪೂಜೆ ನೆರವೇರಿಸುತ್ತೇವೆ ಎಂದು ತಿಳಿಸಿದ್ದಾರೆ.


Spread the love

By admin