Spread the love

ಬೀಜಿಂಗ್: ವಿಶ್ವಾದ್ಯಂತ ಮತ್ತೆ ಕೊರೊನಾ ರೂಪಾಂತರಿ ಭೀತಿ ಇನ್ನಿಲ್ಲದಂತೆ ಕಾಡುತ್ತಿದ್ದು, ಇದೀಗ ಅಮೆರಿಕ ನೀಡಿರುವ ವರದಿ ಜಗತ್ತೇ ಬೆಚ್ಚಿ ಬೀಳುವಂತೆ ಮಾಡಿದೆ.

ಫೆಬ್ರವರಿ ವೇಳೆಗೆ ಚೀನಾದಲ್ಲಿ 80 ಕೋಟಿ ಜನರಿಗೆ ಕೊರೊನಾ ಸೋಂಕು ಹರಡಲಿದ್ದು, ದಿನವೊಂದಕ್ಕೆ 4 ಕೋಟಿ ಜನರಿಗೆ ಪಾಸಿಟಿವ್ ಬರುವ ಸಾಧ್ಯತೆ ಇದೆ.

10 ಲಕ್ಷಕ್ಕೂ ಅಧಿಕ ಜನರು ವೈರಸ್ ಗೆ ಬಲಿಯಾಗುವ ಸಾಧ್ಯತೆ ಇದೆ ಎಂದು ವರದಿ ನೀಡಿದೆ.

ಚೀನಾದಲ್ಲಿ ಕೋವಿಡ್ ಟೆಸ್ಟ್ ಕೈಬಿಟ್ಟಿದ್ದೇ ವೈರಸ್ ಆರ್ಭಟಕ್ಕೆ ಕಾರಣವಾಗಿದೆ. ಕೋವಿಡ್ ನಿರ್ಬಂಧಗಳ ತೆರವು, ಟೆಸ್ಟಿಂಗ್ ನಿರ್ಲಕ್ಷವೇ ಚಿನಾದಲ್ಲಿ ಕೋವಿಡ್ ಅಟ್ಟಹಾಸಕ್ಕೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


Spread the love

By admin