ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್(100) ನಿಧನರಾಗಿದ್ದಾರೆ. ಟ್ವೀಟ್ ಮೂಲಕ ಮೋದಿ ಸಂತಾಪ ಸೂಚಿಸಿದ್ದಾರೆ.
ಶತಮಾನದ ದೀಪ ಪರಮಾತ್ಮನ ಪಾದಕ್ಕೆ ಶರಣಾಗಿದೆ. ನನ್ನ ತಾಯಿಯಲ್ಲಿ ಮೂರು ಗುಣಗಳನ್ನು ಕಂಡಿದ್ದೇನೆ.
ತಪಸ್ವಿಯ ಪ್ರಯಾಣ, ನಿಸ್ವಾರ್ಥ ಕರ್ಮ ಯೋಗಿ ಅವರಾಗಿದ್ದರು. ಮೌಲ್ಯಗಳಿಗೆ ಬದ್ಧವಾದ ಜೀವನ ನಡೆಸಿದರು ಎಂದು ಮೋದಿ ಸಂತಾಪ ಸೂಚಿಸಿದ್ದಾರೆ.
ಅವರ 100 ನೇ ಹುಟ್ಟುಹಬ್ಬದಂದು ನಾನು ಅವರನ್ನು ಭೇಟಿಯಾದಾಗ, ಬದ್ಧತೆ, ಬುದ್ಧಿವಂತಿಕೆಯಿಂದ ಕೆಲಸ ಮಾಡಿ, ಶುದ್ಧತೆಯಿಂದ ಜೀವನ ಮಾಡಿ ಎಂದು ಹೇಳಿದ್ದರು ಎಂದು ಸ್ಮರಿಸಿದ್ದಾರೆ.