ಬೆಂಗಳೂರು: ಸಾರಿಗೆ ನೌಕರರಿಗೆ ಶಾಕ್ ನೀಡಿರುವ ರಾಜ್ಯ ಸರ್ಕಾರ ಮುಂದಿನ 6 ತಿಂಗಳ ಕಾಲ ಮುಷ್ಕರ ನಡೆಸದಂತೆ ಆದೇಶ ಹೊರಡಿಸಿದೆ.
ಒಂದು ವೇಳೆ ಸಾರಿಗೆ ನೌಕರರು ಮುಷ್ಕರಕ್ಕೆ ಯೋಜಿಸಿದ್ದರೆ ಮುಷ್ಕರ ಆಲೋಚನೆ ನಿಲ್ಲಿಸಿ ಎಂದು ಹೊಸ ವರ್ಷದ ಮೊದಲೇ ಸೂಚನೆ ನೀಡಿದೆ.
ಅಗತ್ಯ ಸೇವಾ ನಿರ್ವಹಣೆ ಕಾಯ್ದೆ 2013ರ ಅಡಿ ಸಾರಿಗೆ ನೌಕರರು ಮುಷ್ಕರ ನಡೆಸುವಂತಿಲ್ಲ ಎಂದು ಆದೇಶ ಹೊರಡಿದೆ.
2023ರ ಜ.1ರಿಂದ ಜೂನ್ 30ರವರೆಗೆ ನಿರ್ಬಂಧ ಹೇರಿ ಆದೇಶ ಹೊರಡಿಸಲಾಗಿದೆ. ಈ ಸಂಬಂಧ ಇಲಾಖೆಯ ಪ್ರತಿಯನ್ನು ಎಲ್ಲಾ ಘಟಕ, ಕಾರ್ಯಾಗಾರ, ಕಚೇರಿಯ ಸೂಚನಾ ಫಲಕಗಳಲ್ಲಿ ಪ್ರಕಟಿಸಲು ಸೂಚಿಸಲಾಗಿದೆ. ಕಾರ್ಮಿಕ ಸಂಘಟನೆಗಳಿಗೂ ಪ್ರತಿ ತಲುಪಿಸುವಂತೆ ಆದೇಶಿಸಲಾಗಿದೆ. ಈ ಮೂಲಕ ಸಾರಿಗೆ ಇಲಾಖೆಯಿಂದ ಮುಷ್ಕರ ಹತ್ತಿಕ್ಕುವ ಯತ್ನ ನಡೆಸಲಾಗಿದೆ.