Spread the love

ಬಾಲಿವುಡ್ ಬಾದ್ ಶಾ ಅವರ ಅಭಿಮಾನಿಗಳು ಅದೊಂದು ಫೋಟೋ ನೋಡಿ ತುಂಬಾ ಭಾವುಕರಾಗಿದ್ದಾರೆ. ಬಾಲಿವುಡ್ ಬಾದ್ ಶಾನ ಅಭಿಮಾನಿಯೊಬ್ಬ ಶಾರುಖ್ ಅವರ ತಂದೆ- ತಾಯಿ ಪೇಂಟಿಂಗ್ ಮೇಲೆ ಸಹಿ ಮಾಡಿಕೊಂಡುವಂತೆ ಕೇಳಿದ್ದು, ಅದಕ್ಕಾಗಿ ಶಾರುಖ್ ಫೋಟೋ ಮೇಲೆ ಸಹಿ ಮಾಡಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾವುಕತೆ ಸೃಷ್ಟಿಸಿದೆ.

 

ಕೆಲವು ದಿನಗಳ ಹಿಂದೆ ಶಾರುಖ್ ಖಾನ್ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಪಠಾಣ್‌ ಪ್ರಚಾರಕ್ಕಾಗಿ ಕತಾರ್‌ನಲ್ಲಿದ್ದರು. ಪಠಾಣ್ ಸುತ್ತಲಿನ ಎಲ್ಲಾ ಝೇಂಕಾರದ ನಡುವೆ, ಅಭಿಮಾನಿಯೊಬ್ಬರು ಶಾರುಖ್ ಅವರ ದಿವಂಗತ ಪೋಷಕರ ಪೇಂಟಿಂಗ್‌ ತಂದು ಅದರ ಮೇಲೆ ಸಹಿ ಮಾಡುವಂತೆ ಕೇಳಿಕೊಂಡರು. ತಮ್ಮ ಪೋಷಕರ ಪೇಂಟಿಗ್ ಮೇಲೆ ಶಾರುಖ್ ಖಾನ್ ಸಹಿ ಹಾಕುತ್ತಿರುವ ಫೋಟೋ ನೋಡಿ ಅವರ ಅಭಿಮಾನಿಗಳು ಭಾವುಕರಾಗಿದ್ದಾರೆ. ಶಾರುಖ್ ನಡೆ ಹಲವು ಹೃದಯಗಳನ್ನು ಗೆದ್ದಿದೆ.

ಶಾರುಖ್ ಖಾನ್ ಅವರು ಕೇವಲ 15 ವರ್ಷದವರಾಗಿದ್ದಾಗ ಅವರು ತಮ್ಮ ತಂದೆ ತಾಜ್ ಮೊಹಮ್ಮದ್ ಖಾನ್ ಅವರನ್ನು ಕ್ಯಾನ್ಸರ್ ನಿಂದ ಕಳೆದುಕೊಂಡರು. 1990 ರಲ್ಲಿ ಅವರ ತಾಯಿ ಲತೀಫ್ ಫಾತಿಮಾ ತೀರಿಹೋದರು. ಆಗ ಶಾರುಖ್ ಖಾನ್ ಗೆ 25 ವರ್ಷ. ಅವರು ಪೇಂಟಿಂಗ್ ಮೇಲೆ ಹಸ್ತಾಕ್ಷರ ಹಾಕಿದ್ದನ್ನು ನೋಡಿ ಅಭಿಮಾನಿಗಳು ಇದೀಗ ಭಾವುಕರಾಗಿದ್ದಾರೆ.


Spread the love

By admin