Spread the love

ಮಂಡ್ಯ: ಕರ್ನಾಟಕದ ಕೆಎಂಎಫ್ ಗೆ ಗುಜರಾತ್ ನ ಅಮೂಲ್ ಸಾಥ್ ನೀಡಲಿದ್ದು, ದೇಶಾದ್ಯಂತ ಕ್ಷೀರ ಕ್ರಾಂತಿ ಮಾಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.

ಮಂಡ್ಯದ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ಮೆಗಾ ಡೇರಿ ಉದ್ಘಾಟಿಸಿ ಮಾತನಾಡಿದ ಅವರು, ಕೆ ಎಂ ಎಫ್ ಗೆ ಗುಜರಾತ್ ನ ಅಮೂಲ್ ನಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು.

ದೇಶಾದ್ಯಂತ 3 ವರ್ಷಗಳಲ್ಲಿ 2 ಲಕ್ಷ ಪ್ರಾಥಮಿಕ ಡೇರಿ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.

ಕರ್ನಾಟಕದಲ್ಲಿ 15,210 ಸಹಕಾರಿ ಹಾಲು ಉತ್ಪಾದನಾ ಡೇರಿಗಳಿವೆ. 210 ಗ್ರಾಮಗಳು ಇದರಲ್ಲಿ ಭಾಗಿಯಾಗಿವೆ. 22 ಲಕ್ಷ ರೈತರ ಶ್ರಮವಿದೆ. ಕರ್ನಾಟಕದಲ್ಲಿ ಸಹಕಾರ ಕ್ಷೇತ್ರದ ಸಾಧನೆಗೆ ಸಿಎಂ ಬೊಮ್ಮಾಯಿ ಸರ್ಕಾರಕ್ಕೆ ಹಾಗೂ ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಿಗೂ ಅಭಿನಂದನೆ ಎಂದು ಹೇಳಿದರು.


Spread the love

By admin