Spread the love

ಭಾರತದ ಫುಟ್ಬಾಲ್ ದಂತಕಥೆ ಮಹೇಂದ್ರ ಸಿಂಗ್ ಧೋನಿ ಓರ್ವ ಫುಟ್ಬಾಲ್ ಪ್ರೇಮಿ ಎನ್ನುವುದೇನು ರಹಸ್ಯವಾಗಿ ಉಳಿದಿಲ್ಲ. ಇದೀಗ ತಂದೆಯಂತೆ ಎಂ ಎಸ್ ಧೋನಿ ಪುತ್ರಿ ಝಿವಾ ಧೋನಿ ಕೂಡಾ ಫುಟ್ಬಾಲ್‌ ಕ್ರೀಡೆಯನ್ನು ಇಷ್ಟಪಡುತ್ತಾರೆ. 7 ವರ್ಷದ ಝಿವಾ ಧೋನಿ ಕೂಡಾ ಅರ್ಜೆಂಟೀನಾ ತಂಡದ ಅಭಿಮಾನಿಯಾಗಿದ್ದು, ಇದೀಗ ಅರ್ಜೆಂಟೀನಾ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿಯವರಿಂದ ವಿಶೇಷ ಗಿಫ್ಟ್ ಪಡೆದುಕೊಂಡಿದ್ದಾರೆ.

ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಇತ್ತೀಚೆಗಷ್ಟೇ ಮುಕ್ತಾಯವಾದ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಝಿವಾ ಧೋನಿ, ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿಯವರ ಅಪ್ಪಟ ಅಭಿಮಾನಿಯಾಗಿದ್ದು, ಇದೀಗ ಸ್ವತಃ ಮೆಸ್ಸಿಯವರೇ ಸಹಿ ಮಾಡಿದ ಜೆರ್ಸಿಯೊಂದನ್ನು ಧೋನಿ ಪುತ್ರಿಗೆ ಕಳಿಸಿಕೊಟ್ಟಿದ್ದಾರೆ. ಇದೀಗ ಝಿವಾ ಧೋನಿ, ಮೆಸ್ಸಿ ಕಳಿಸಿಕೊಟ್ಟ ಜೆರ್ಸಿಯನ್ನು ತೊಟ್ಟ ಫೋಟೋವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗಿದೆ.

ಝಿವಾ ಧೋನಿ ಧರಿಸಿರುವ ಆಟೋಗ್ರಾಫ್‌ ಜೆರ್ಸಿಯಲ್ಲಿ ಝಿವಾ, ಮೆಸ್ಸಿ ಸಹಿ ಮಾಡಿರುವ ಕಡೆ ಕೈ ಸನ್ನೆ ಮಾಡಿದ್ದಾರೆ. ಇದರಲ್ಲಿ “Para Ziva” ಎಂದು ಬರೆದು ಮೆಸ್ಸಿ ಸಹಿ ಮಾಡಿದ್ದಾರೆ. ಇದರರ್ಥ “For Ziva”(ಝಿವಾಳಿಗಾಗಿ) ಎಂದು ಬರೆದು ಮೆಸ್ಸಿ ಸಹಿ ಮಾಡಿದ್ದಾರೆ. ಈ ಫೋಟೋದೊಂದಿಗೆ ” ತಂದೆಯಂತೆ ಮಗಳು” ಎಂದು ಅಡಿ ಬರಹ ಬರೆದು ಝಿವಾ ಈ ಫೋಟೋ ಶೇರ್ ಮಾಡಿದ್ದಾಳೆ.


Spread the love

By admin