Spread the love

ಳ್ಳಾರಿ : ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ಜೊತೆಗಿನ ಸಂಬಂಧಕ್ಕೆ ವಿದಾಯ ಹೇಳಿ ಕಳೆದ ಕೆಲ ದಿನಗಳ ಹಿಂದಷ್ಟೇ ಕಲ್ಯಾಣ ರಾಜ್ಯ ಪ್ರಗತಿ ಎಂಬ ಹೊಸ ಪಕ್ಷವನ್ನು ಘೋಷಿಸಿದ್ದರು. ಇದೀಗ ಹೊಸವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಕೆಆರ್​ಪಿ‌ ಪಕ್ಷದ ಬಾವುಟವನ್ನು ಇಂದು‌ ಅಧಿಕೃತವಾಗಿ‌ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಬಿಡುಗಡೆಗೊಳಿಸಿದ್ದಾರೆ.

ಬೆಣಕಲ್ ಗ್ರಾಮದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅರುಣಾ ಲಕ್ಷ್ಮಿ ಪಕ್ಷದ ಬಾವುಟವನ್ನು ಬಿಡುಗಡೆ ಮಾಡಿದರು. ಹಸ್ತಲಾಘವ ಹೊಂದಿರುವ ಸಹಕಾರ ಮಾದರಿಯ ಚಿಹ್ನೆಯನ್ನು ಬಾವುಟದಲ್ಲಿ ಬಳಕೆ ಮಾಡಲಾಗಿದೆ.

ಬಳಿಕ ಮಾತನಾಡಿದ ಅರುಣಾ ಲಕ್ಷ್ಮಿ, ‘ಇಡೀ ರಾಜ್ಯ ಕಲ್ಯಾಣ ಕರ್ನಾಟಕ ಆಗಬೇಕೆಂಬುದು ಜನಾರ್ದನ ರೆಡ್ಡಿಯವರ ಬಯಕೆ. ತಾವು ಹುಟ್ಟಿ ಬೆಳೆದ ಬಳ್ಳಾರಿ ಪ್ರಚಂಚದ ಭೂಪಟದಲ್ಲಿ ಕಾಣಬೇಕು. ಅವರ ಆಶಯದಂತೆ ಕೆಲಸ ಮಾಡುವುದು ನನ್ನ ಜವಾಬ್ದಾರಿ. ರೆಡ್ಡಿಯವರಿಗೆ ಕೋರ್ಟ್ ನಿರ್ಬಂಧ ಇರುವುದರಿಂದ ನಾನು ಬೆಣಕಲ್ ಗ್ರಾಮಕ್ಕೆ ಬಂದಿದ್ದೇನೆ. ಕುರುಬ ಸಮಾಜದ ಜನರ ಆಶೀರ್ವಾದ ನಮ್ಮ ಮೇಲಿದ್ದರೆ ಚುನಾವಣೆ ಗೆದ್ದೇ ಗೆಲ್ಲುತ್ತೇವೆ ಎಂಬುದು ನನ್ನ ಪತಿಯ ನಂಬಿಕೆ. ಹಾಗಾಗಿ,‌ ಬಾವುಟ ಬಿಡುಗಡೆ ಕಾರ್ಯಕ್ರಮವನ್ನು ಕುರುಬ ಸಮಾಜದವರೊಂದಿಗೆ ಸೇರಿ ಚಾಲನೆ ನೀಡಲಾಯಿತು’ ಎಂದರು.

ಈ ಸಂದರ್ಭದಲ್ಲಿ ಬಸವಣ್ಣ, ವಾಲ್ಮೀಕಿ, ಕನಕದಾಸರನ್ನು ನೆನೆದ ಅರುಣಾ ಲಕ್ಷ್ಮಿ, ಬಸವಣ್ಣನವರ ಕುಲ ಕುಲವೆಂಬ ವಚನ ವಾಚಿಸಿದರು. ಕುಲ, ಮತ, ಜಾತಿ ಬೇಧವಿಲ್ಲದೆ ಪಕ್ಷ ಕಟ್ಟೋಣ. ಅನೇಕ ರೀತಿಯ ನೋವು, ಅವಮಾನವನ್ನು ರೆಡ್ಡಿಯವರು ಸಹಿಸಿಕೊಂಡಿದ್ದಾರೆ. ಜನಸೇವೆ ಮಾಡಬೇಕೆಂದು ಪಕ್ಷ ಕಟ್ಟಿದ್ದಾರೆ. ರೆಡ್ಡಿಯನ್ನು ಜ‌ನರಿಂದ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ತಂದೆ-ತಾಯಿ, ಬಂಧು ಬಳಗ ಎಲ್ಲವೂ ನೀವೇ. ನಿಮ್ಮನ್ನು ಬಿಟ್ಟು ನಮಗೆ ಯಾರೂ ಇಲ್ಲ ಎಂದರು.


Spread the love

By admin