Spread the love

ಶಿವಮೊಗ್ಗ: ಹೊಸ ವರ್ಷ ಸ್ವಾಗತಕ್ಕೆ ಏರ್ ಪೈರ್ ಮಾಡಲು ಹೋದವನಿಗೆ ಕೈಕೊಟ್ತು ಟ್ರಿಗ್ಗರ್ ಮಿಸ್ ಫೈರ್ ಆಗಿ ಎದುರಿದ್ದವನ ಮೇಲೆ ಹಾರಿತು ಗುಂಡು. ಹೊಸವರ್ಷದ ಆರಂಭದಲ್ಲಿಯೇ ಶಿವಮೊಗ್ಗದ ಮೊದಲ ಕ್ರೈಂ ಹೇಗಾಯ್ತು ಗೊತ್ತಾ? ಶಿವಮೊಗ್ಗ ನಗರದಲ್ಲಿ ಎಲ್ಲರು 2023 ರನ್ನು ವೆಲ್ ಕಮ್ ಮಾಡಲು ವಿವಿಧ ರೀತಿಯಲ್ಲಿ ಪಾರ್ಟಿಗೆ ಸಿದ್ದತೆ ಮಾಡಿಕೊಂಡಿದ್ರು.ಕೆಲವರು ಪಾರ್ಟಿ ಕ್ಲಬ್ ಗಳಿಗೆ ಹೋಗಿದ್ರೆ, ಮತ್ತೆ ಕೆಲವರು ತೋಟ ಫಾರಂ ಹೌಸ್ ಹೋಮ್ ಸ್ಟೇ ಗಳಲ್ಲಿ ಹಬ್ಬಕ್ಕೆ ಸಿದ್ದತೆ ಮಾಡಿಕೊಂಡಿದ್ರು, ಇನ್ನು ಕೆಲವರು ತಮ್ಮ ಮನೆ ಸುತ್ತಮುತ್ತದ ಕುಟುಂಬಗಳನ್ನೇ ಒಗ್ಗೂಡಿಸಿಕೊಂಡು ಹೊಸವರ್ಷಕ್ಕೆ ಸ್ವಾಗತ ಕೋರಲು ಅಣಿಯಾಗಿದ್ರು.

ಎಲ್ಲರೂ ಸಂತೋಷವಾಗಿರುವಾಗಲೇ ಶಿವಮೊಗ್ಗದ ವಿದ್ಯಾನಗರದಲ್ಲಿ ಘಟನೆಯೊಂದು ನಡೆದು ಹೋಯ್ತು.

ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಬಳಿ ಇರುವ ಗೋಪಾಲ್ ಗ್ಲಾಸ್ ಹೌಸ್ ಮನೆ ಮಾಲೀಕ ಮಂಜುನಾಥ್ ಓಲೈಕರ್ ಎಂಬುವರ ಮನೆಯಲ್ಲಿ ಹೊಸವರ್ಷದ ಪಾರ್ಟಿಯಲ್ಲಿ ಎಡವಟ್ಟೊಂದು ನಡೆದು, ದುರಂತ ಸಂಭವಿಸಿದೆ. ಮನೆ ಸುತ್ತಮುತ್ತಲ ಕುಟುಂಬದವರೊಡನೆ ಹೊಸವರ್ಷದ ಸಂಭ್ರಮಚಾರಣೆಯಲ್ಲಿದ್ದ ಮಂಜುನಾಥ್ ಮನೆಯಲ್ಲಿದ್ದ ಗನ್ ತೆಗೆದುಕೊಂಡು ಹನ್ನೆರಡು ಗಂಟೆ ರಾತ್ರಿಯಲ್ಲಿ ಏರ್ ಫೈರ್ ಮಾಡಿ 2033 ಕ್ಕೆ ಶುಭಕೋರಲು ಮುಂದಾಗಿದ್ದಾರೆ. ಆದ್ರೆ ಅದು ಮಿಸ್ ಪೈರ್ ಆಗಿ ಪಾರ್ಟಿ ಮಾಡುತ್ತಿದ್ದ ಎದುರಿನ ಹುಡುಗನಿಗೆ ತಗುಲಿದೆ.ಗಂಭೀರ ಗಾಯಗೊಂಡ ಯುವಕನನ್ನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗನ್ ನಿಂದ ಆದ ಪ್ರಮಾದಕ್ಕೆ ಶಾಕ್ ಗೆ ಒಳಗಾದ ಮಂಜುನಾಥ್ ಗೆ ಹೃದಯಾಘಾತವಾಗಿ. ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಕೋಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love

By admin